Namma Metro: ಆರು ತಿಂಗಳ ನಂತರ ದೊಡ್ಡಾನೆಕುಂದಿ ಅಂಡರ್‌ಪಾಸ್ ಮೆಟ್ರೋ ಕಾಮಗಾರಿ ಪುನಾರಂಭ

ಬೆಂಗಳೂರು, ಏಪ್ರಿಲ್ 17: ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ವೇಗದ ಹಾಗೂ ಸುರಕ್ಷಿತ ಸಾರಿಗೆ ಸೇವೆ ನೀಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಆರು ತಿಂಗಳ ವಿಳಂಬ ಬಳಿಕ ಅಂಡರ್‌ಪಾಸ್‌ನಲ್ಲಿ ನಮ್ಮ ಮೆಟ್ರೊ ಕಾಮಗಾರಿ ಪುನಾರಂಭಿಸಲು ಸಜ್ಜಾಗಿದೆ.

ಬೆಂಗಳೂರು ಹೊರವರ್ತುಲ ರಸ್ತೆ ಮಾರ್ಗದಲ್ಲಿ ಮೆಟ್ರೋ ಮಾರ್ಗ ಕಾಮಗಾರಿ ನಡೆಯುತ್ತಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಂವರೆಗಿನ ನಮ್ಮ ಮೆಟ್ರೋ ಯೋಜನೆ ಇದಾಗಿದೆ. ಈ ಮಾರ್ಗವು ಮುಂದಿನ 2025-26 ರಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ನಮ್ಮ ಮೆಟ್ರೋ ಮೂಲಗಳು ತಿಳಿಸಿವೆ.

Namma Metro: Metro Line In Doddanekundi Underpass Restart After 6 Months: BMRCL

ಈ ಮಧ್ಯೆ ಮಹದೇವಪುರ ವ್ಯಾಪ್ತಿಯ ದೊಡ್ಡಾನೆಕುಂದಿ ವ್ಯಾಪ್ತಿಯಲ್ಲಿ ಅಂಡರ್‌ಪಾಸ್‌ನಲ್ಲಿ ಮೆಟ್ರೋ ಕಾಮಗಾರಿ ನಡೆಯಬೇಕಿತ್ತು. ಆದರೆ ಕಾರಣಾಂತರಗಳಿಂದ ಸುಮಾರು ಆರು ತಿಂಗಳು ಕಾಲ ವಿಳಂಬವಾಗಿತ್ತು. ಇದೀಗ ವಿಳಂಬದ ನಂತರವು ಕಾಮಗಾರಿ ಪುನಾರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಮುಂದಾಗಿದೆ.

ನಗರದ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಂವರೆಗೆ ವಿಸ್ತರಣೆ ಈ ಹೊರ ವರ್ತುಲ ರಸ್ತೆ ಭಾಗದ ಮೆಟ್ರೋ ಯೋಜನೆಯು ಒಟ್ಟು 19 ಕಿಲೋ ಮೀಟರ್‌ನದ್ದು ಎನ್ನಲಾಗಿದೆ.

ಮಹದೇವಪುರ ಟಾಸ್ಕ್‌ ಫೋರ್ಸ್‌ ಟ್ವೀಟ್

ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅಧ್ಯಕ್ಷತೆಯಲ್ಲಿ ಈಗ ವಿಸರ್ಜಿಸಲಾದ ಮಹದೇವಪುರ ಮೊಬಿಲಿಟಿ ಟಾಸ್ಕ್ ಫೋರ್ಸ್ ಶನಿವಾರ ಈ ಬಗ್ಗೆ ಟ್ವೀಟ್ ಮಾಡಿದೆ. ಈ ಟ್ವೀಟ್‌ನಲ್ಲಿ ಬೆಂಗಳೂರು ಹೊರ ವರ್ತುಲ ರಸ್ತೆ ಮಾರ್ಗದ ಮೆಟ್ರೋ ಕಾಮಗಾರಿ ಅಡಚಣೆಯನ್ನು ಪರಿಹರಿಸಲಾಗಿದೆ. ರೈಲ್ವೆ ಬ್ರಿಡ್ಜ್ ಕೆಳಗೆ ಅಂಡರ್‌ಪಾಸ್‌ನಲ್ಲಿ ಮೆಟ್ರೋ ಕಾಮಗಾರಿ ಆರಂಭದ ಬಗ್ಗೆ ಮುನ್ಸೂಚನೆ ನೀಡಿದೆ.

Namma Metro: Metro Line In Doddanekundi Underpass Restart After 6 Months: BMRCL

ದೊಡ್ಡನೆಕುಂದಿ ರೈಲು ಮಾರ್ಗದಲ್ಲಿ 65 ಮೀಟರ್ ಉದ್ದದ ತೆರೆದ ವೆಬ್ ಗರ್ಡರ್ (ಮೆಟ್ರೊ ರೈಲಿನ ಓವರ್ ಹೆಡ್ ಲೈನ್ ರೀತಿಯಲ್ಲಿ) ಇದೆ. ಯೋಜನೆ ಆರಂಭವಾದ ನಂತರ ಈ ಸಮಸ್ಯೆ ಮುನ್ನೆಲೆಗೆ ಬಂದಿದೆ. ಇಲ್ಲಿ ವೆಬ್‌ ಗರ್ಡರ್ 85 ಮೀಟರ್‌ ಇದ್ದರೆ ಮೆಟ್ರೋ ಯೋಜನೆಗೆ ಅನುಮತಿ ಇಲ್ಲ ಎಂಬ ನಿಯಮ ಇತ್ತು. ಹೀಗಾಗಿ ನಮ್ಮ ಮೆಟ್ರೋ ಅಧಿಕಾರಿಗಳಿ ಇರುವ ನಿಯಮಗಳಂತೆ ಓವರ್ ವೆಬ್‌ ಗರ್ಡರ್ ಅನ್ನು ನಾವು 20 ಮೀಟರ್ ನಷ್ಟು ಹೆಚ್ಚಿಸುವುದಿಲ್ಲ ಎಂದು ತಿಳಿಸಿದೆ.

ಸಬೆಯಲ್ಲಿ ಕಾಮಗಾರಿಗೆ ಒಪ್ಪಿಗೆ

ಈ ಕುರಿತು ನಡೆದ ಸಭೆ ಬಳಿಕ ನಿರ್ಬಂಧಗಳನ್ನು ಒಪ್ಪಲಾಗಿದೆ. 85 ಮೀಟರ್ ಲೈನ್‌ಗೆ ಅವಕಾಶ ಇಲ್ಲ ಎಂಬುದರ ಬಗ್ಗೆ ಪುನರ್ ಚರ್ಚಿಸಿ 65 ಮೀಟರ್ ಗೆ ಒಪ್ಪಿಗೆ ನೀಡಲಾಗಿದೆ. ಇದಾದ ಬಳಿಕ ಅಂಡರ್ ಪಾಸ್‌ ಕಾಮಗಾರಿಗೆ ಪುನಾರಂಭಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ಅಂತಿಮ ಪಡೆದುಕೊಂಡಿದೆ ಎಂದು ಮಹದೇವಪುರ ಟಾಸ್ಕ್ ಫೋರ್ಸ್‌ ಕಾರ್ಯದರ್ಶಿ ಕ್ಲೆಮೆಂಟ್ ಜಯಕುಮಾರ್ ಹೇಳಿದರು.

ದೊಡ್ಡನೆಕುಂದಿ ವ್ಯಾಪ್ತಿಯಲ್ಲಿ ಮೆಟ್ರೋ ಸಾರಿಗೆ ಸೇವೆ ಎದುರು ನೋಡುತ್ತಿರುವ ನಾಗರಿಕರಿಗೆ, ಮೆಟ್ರೋ ಪ್ರಯಾಣಿಕರಿಗೆ ಈ ಅಂಡರ್‌ಪಾಸ್ ಮೆಟ್ರೋ ಯೋಜನೆ ಪನಾರಂಭವು ಖಷಿ ತಂದಿದೆ. ಆದರೆ ಈ ಯೋಜನೆ ಪೂರ್ಣಗೊಳ್ಳಲು ಸುಮಾರು ತಿಂಗಳು ಹಿಡಿಬಹುದು ಎನ್ನಲಾಗಿದೆ.

ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ (KRIDE) ನಿರ್ದೇಶಕ ಆರ್‌ಕೆ ಸಿಂಗ್ (ಪ್ರಾಜೆಕ್ಟ್ ಮತ್ತು ಯೋಜನೆ) ಅವರು 65-ಮೀಟರ್ ಗರ್ಡರ್ ನಿರ್ಮಾಣಕ್ಕೆ 15 ದಿನಗಳ ಹಿಂದೆ ಅನುಮೋದನೆ ನೀಡಲಾಗಿದೆ ಎಂಬ ಮಾಹಿತಿ ನೀಡಿದರು. ದೊಡ್ಡನೆಕುಂದಿಯಲ್ಲಿ ಹೆಚ್ಚುವರಿ ಲೈನ್‌ ಹಾಕಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+