ಡಿಸೆಂಬರ್ 31 ರಂದು ಬೆಂಗಳೂರು ಮೆಟ್ರೋ ರೈಲುಗಳಲ್ಲಿ 6.54 ಲಕ್ಷಕ್ಕೂ ಹೆಚ್ಚು ಜನರ ಪ್ರಯಾಣ: ಆದಾಯ ಎಷ್ಟು ಗೊತ್ತೇ?

ಬೆಂಗಳೂರು, ಡಿಸೆಂಬರ್‌ 02: ಡಿಸೆಂಬರ್ 31 ರಂದು ಬೆಂಗಳೂರಿನ ಮೆಟ್ರೋ ರೈಲುಗಳಲ್ಲಿ 6.54 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸಿದ್ದಾರೆ ಎಂದು ತಿಳಿದುಬಂದಿದೆ.

ಜನವರಿ 1, 2023 ರ ಮಧ್ಯರಾತ್ರಿ 2 ಗಂಟೆ ವರೆಗೆ ಮೆಟ್ರೋ ರೈಲಿನ ಕಾರ್ಯಾಚರಣೆಯನ್ನು ವಿಸ್ತರಿಸಲಾಗಿತ್ತು.

ಆ ದಿನದ (ಡಿ.01ರ ಬೆಳಿಗ್ಗೆ 5 ಗಂಟೆಯಿಂದ ಜನವರಿ 1, 2023 ರ ಮಧ್ಯರಾತ್ರಿ 2 ಗಂಟೆ ವರೆಗೆ) ಮೆಟ್ರೋ ರೈಲುಗಳ ಆದಾಯವು ಸುಮಾರು 1.54 ಕೋಟಿ ರೂಪಾಯಿ ಆಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿ ಬಿ.ಎಲ್. ಯಶವಂತ ಚವ್ಹಾನ್‌ ಮಾಹಿತಿ ನೀಡಿದ್ದಾರೆ.

ಹೊಸ ವರ್ಷದ ರಾತ್ರಿ(ಡಿ 31) ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆಗಳನ್ನು ಸಾಮಾನ್ಯ ಸಮಯಕ್ಕಿಂತ ಹೆಚ್ಚು ವಿಸ್ತರಿಸಲಾಗಿತ್ತು. ವಿಸ್ತೃತ ಸಮಯದಲ್ಲಿ 15 ನಿಮಿಷಗಳ ಆವರ್ತನದಲ್ಲಿ ರೈಲುಗಳು ಕಾರ್ಯನಿರ್ವಹಿಸಿದ್ದವು.

Bengaluru : Namma Metro had over 6.54 lakh riders on Dec 31

MG ರಸ್ತೆ, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಭಾರೀ ಜನಜಂಗಳಿ ಕಾಣುವ ನಿರೀಕ್ಷೆಯಿರುವ ವಿಸ್ತೃತ ಸಮಯದಲ್ಲಿ ಕಾಗದದ ಟಿಕೆಟ್‌ಗಳನ್ನು ಮಾತ್ರ ನೀಡಲಾಗುವುದು ಎಂದು BMRCL ತಿಳಿಸಿತ್ತು.

'ವಿಸ್ತೃತ ಸಮಯದಲ್ಲಿ, ಅಂದರೆ ರಾತ್ರಿ 11.30 ರಿಂದ ಎಂಜಿ ರಸ್ತೆ, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ರೂ. ವೆಚ್ಚದಲ್ಲಿ ಕಾಗದದ ಟಿಕೆಟ್‌ಗಳನ್ನು ಮಾತ್ರ ನೀಡಲಾಗುತ್ತದೆ. ಪ್ರಯಾಣಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಎಂಜಿ ರಸ್ತೆ, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಈ ಮೂರು ನಿಲ್ದಾಣಗಳಿಂದ ಯಾವುದೇ ಟೋಕನ್‌ಗಳನ್ನು ನೀಡಲಾಗುವುದಿಲ್ಲ' ಎಂದು ಹೇಳಲಾಗಿತ್ತು.

ಬೆಂಗಳೂರಿನ ಬ್ರಿಗೆಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌ ಹಾಗೂ ಎಂಜಿ ರಸ್ತೆಗಳಲ್ಲಿ ಲಕ್ಷಾಂತರ ಜನರು ಹೊಸ ವರ್ಷದ ಸಂಭ್ರಮಾಚಣೆ ಮಾಡಿದರು. ಬಹುತೇಕರು ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಿದ್ದರು. ಆದ್ದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ.

Bengaluru : Namma Metro had over 6.54 lakh riders on Dec 31

ಇದೆಲ್ಲದರ ನಡುವೆ ಬೆಂಗಳೂರು ಪೊಲೀಸರು ನಗರದಲ್ಲಿ ಹೊಸ ವರ್ಷಾಚರಣೆಯ ಮೇಲೆ ನಿಗಾ ಇಟ್ಟಿದ್ದರು. ಪೊಲೀಸರು ಈಗಾಗಲೇ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ದರು. ಹೆಚ್ಚುವರಿ ಸಿಸಿಟಿವಿ ಮತ್ತು ಡ್ರೋನ್ ಕ್ಯಾಮೆರಾಗಳೊಂದಿಗೆ ಇಡೀ ನಗರವನ್ನು ಕಣ್ಗಾವಲಿನಲ್ಲಿ ಇಡಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಮೆಟ್ರೊ ರೈಲುಗಳಿಗೂ ಸಹಿತ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ರಾತ್ರಿ ಎರಡು ಗಂಟೆಯವರಿಗೂ ಮೆಟ್ರೋ ರೈಲುಗಳು ಕಾರ್ಯನಿರ್ವಹಿಸಿದ್ದರಿಂದ ಜನರು ಸುಲಭವಾಗಿ ಮನೆಗೆ ತಲುಪಲು ಸಹಾಯವಾಗಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+