ಹಸಿರು ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ

ಬೆಂಗಳೂರು, ಅಕ್ಟೋಬರ್ 27 : ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಸಂಚಾರ ನಡೆಸುವ ಜನರಿಗೆ ಬಿಎಂಆರ್‌ಸಿಎಲ್ ಸಿಹಿ ಸುದ್ದಿ ನೀಡಿದೆ. 6 ಬೋಗಿಗಳ ಎರಡು ಹೆಚ್ಚುವರಿ ರೈಲು ಸಂಚಾರವನ್ನು ಸೋಮವಾರದಿಂದ ಆರಂಭಿಸಲಾಗುತ್ತಿದೆ.

ನಾಗಸಂದ್ರ-ಯಲಚೇನಹಳ್ಳಿ ನಡುವಿನ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಪ್ರಸ್ತುತ 4 ಆರು ಬೋಗಿಗಳ ರೈಲು ಸಂಚಾರ ನಡೆಸುತ್ತಿದೆ. ಸೋಮವಾರದಿಂದ ಇನ್ನೂ ಎರಡು 6 ಬೋಗಿಯ ರೈಲುಗಳನ್ನು ಈ ಮಾರ್ಗದಲ್ಲಿ ಓಡಿಸಲಾಗುತ್ತದೆ.

2018ರ ಜೂನ್ ತನಕ ನಮ್ಮ ಮೆಟ್ರೋ 975 ಜನರು ಪ್ರಯಾಣ ಬೆಳೆಸಬಹುದಾದ ಮೂರು ಬೋಗಿಗಳ ರೈಲುಗಳನ್ನು ಓಡಿಸುತ್ತಿತ್ತು. ಇದರಿಂದಾಗಿ ಮೆಟ್ರೋದಲ್ಲಿ ಜನಸಂದಣಿ ಹೆಚ್ಚಾಗುತ್ತಿತ್ತು. ಆದ್ದರಿಂದ, 2000 ಜನರು ಪ್ರಯಾಣಿಸಬಹುದಾದದ 6 ಬೋಗಿಗಳ ರೈಲು ಸೇವೆ ಆರಂಭಿಸಲಾಯಿತು.

Namma Metro Greenline Gets 2 Six Car Trains

ಬಿಇಎಂಎಲ್ 6 ಬೋಗಿಯ ರೈಲುಗಳನ್ನು ನಮ್ಮ ಮೆಟ್ರೋಗೆ ನೀಡಿದೆ. ಇದರಲ್ಲಿ ಮೊದಲ ಬೋಗಿ ಮಹಿಳೆಯರಿಗೆ ಮೀಸಲಾಗಿದೆ. ಹಸಿರು ಮಾರ್ಗದಲ್ಲಿ ಪೀಕ್ ಅವರ್‌ನಲ್ಲಿ ರೈಲು ಹೆಚ್ಚು ರಶ್ ಆಗುತ್ತಿದೆ ಎಂದು ಪ್ರಯಾಣಿಕರು ದೂರುತ್ತಿದ್ದರು.

ನಾಗಸಂದ್ರ-ಯಲಚೇನಹಳ್ಳಿ ನಡುವಿನ ಮಾರ್ಗ 24.22 ಕಿ. ಮೀ. ಇದೆ. ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಮ್ಮ ಮೆಟ್ರೋ ಮಾರ್ಗ 18.08 ಕಿ. ಮೀ. ಇದೆ. ಹಸಿರು ಮಾರ್ಗಕ್ಕೆ ಹೋಲಿಕೆ ಮಾಡಿದರೆ ನೇರಳೆ ಮಾರ್ಗದಲ್ಲಿ ಜನರ ಸಂಚಾರ ಹೆಚ್ಚಿದೆ.

ದಸರಾ ಸಂದರ್ಭದಲ್ಲಿ 4.64 ಲಕ್ಷ ಜನರು ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದರು. ದೀಪಾವಳಿ ರಜೆಗಾಗಿ ಶುಕ್ರವಾರ 4.83 ಲಕ್ಷ ಜನರು ಪ್ರಯಾಣಿಸುವ ಮೂಲಕ ಮೆಟ್ರೋ ಹೊಸ ದಾಖಲೆ ಬರೆದಿದೆ. ನೇರಳೆ ಮಾರ್ಗದಲ್ಲಿ 2.63 ಲಕ್ಷ, ಹಸಿರು ಮಾರ್ಗದಲ್ಲಿ 2.19 ಲಕ್ಷ ಜನರು ಸಂಚಾರ ಮಾಡಿದ್ದಾರೆ.

ಶುಕ್ರವಾರ ಒಂದೇ ದಿನ ನಮ್ಮ ಮೆಟ್ರೋದಲ್ಲಿ 1.12 ಕೋಟಿ ರೂ. ಸಂಗ್ರಹವಾಗಿದೆ. 2018-19ನೇ ವರ್ಷದಲ್ಲಿ ಪ್ರತಿದಿನದ ಶೇ ಆದಾಯ 0.97 ಕೋಟಿ ರೂ.ಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+