Namma Metro: ಮೆಟ್ರೋ ದರ ಏರಿಕೆಗೆ ಖಂಡನೆ; ವಿಶೇಷ ಟೀ-ಶರ್ಟ್ ಮೂಲಕ ದಾಖಲೆ ಪ್ರದರ್ಶಿಸಿದ ತೇಜಸ್ವಿ ಸೂರ್ಯ
ಬೆಂಗಳೂರು: ಆರ್ಥಿಕವಾಗಿ ದಿವಾಳಿಯಾಗಿರುವ, 'ಖಾಲಿ ಟ್ರಂಕ್' ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯಗಳ ಹೊರೆವನ್ನು ಬೆಂಗಳೂರಿನ ಜನರ ಮೇಲೆ ಮೆಟ್ರೋ ದರ ಏರಿಕೆ ಮೂಲಕ ಹಾಕುತ್ತಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಆರ್ವಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದ ತೇಜಸ್ವಿ ಸೂರ್ಯ, #FareHikeBeda ಅಭಿಯಾನದಡಿ ಜನರ ಅಸಮಾಧಾನವನ್ನು ಆಲಿಸಿ, ಮೆಟ್ರೋ ದರ ಏರಿಕೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ದಿನನಿತ್ಯ ಸಾರ್ವಜನಿಕ ಸಾರಿಗೆಯ ಮೇಲೆ ಅವಲಂಬಿಸಿರುವ ಲಕ್ಷಾಂತರ ಪ್ರಯಾಣಿಕರಿಗೆ ದರ ಏರಿಕೆ ತೀವ್ರ ಹೊಡೆತ ನೀಡಿದೆ ಎಂದು ಹೇಳಿದರು.
ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಎಂಬಂತೆ ರಾಜ್ಯ ಸರ್ಕಾರ ಹೇಳಿಕೆ ನೀಡುತ್ತಿದ್ದು, ವಾಸ್ತವದಲ್ಲಿ ದರ ಏರಿಕೆಗೆ ರಾಜ್ಯ ಸರ್ಕಾರವೇ ಅಧಿಕೃತವಾಗಿ ಬೇಡಿಕೆ ಇಟ್ಟಿದೆ ಎಂದು ಅವರು ಆರೋಪಿಸಿದರು. ಈ ಕುರಿತು ತೇಜಸ್ವಿ ಸೂರ್ಯ ತಾವು ಧರಿಸಿದ್ದ ಟೀ-ಶರ್ಟ್ ಅನ್ನೇ ಉದಾಹರಣೆಯಾಗಿ ತೋರಿಸಿದರು. ಫೇರ್ ಫಿಕ್ಸೇಶನ್ ಕಮಿಟಿ (FFC) ಮುಂದೆ ರಾಜ್ಯ ಸರ್ಕಾರ ಹಾಗೂ ಅದರ ಅಧಿಕಾರಿಗಳು ಸಲ್ಲಿಸಿದ ವಾದಗಳೇ ಆ ಟೀ-ಶರ್ಟ್ನಲ್ಲಿ ಮುದ್ರಿತವಾಗಿವೆ ಎಂದು ಹೇಳಿದರು.

ಮೆಟ್ರೋ ದರ ನಿಗದಿ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ, "ಹಿಂದಿನ ಬಾರಿ ಮೆಟ್ರೋ ದರ ಕಡಿಮೆ ಮಾಡಿದಾಗ ಅಥವಾ ಪರಿಷ್ಕರಿಸಿದಾಗ ಮುಖ್ಯಮಂತ್ರಿ ಅವರಿಗೆ ಅಧಿಕಾರ ಎಲ್ಲಿಂದ ಬಂತು? ಈಗ ಅಧಿಕಾರ ಇಲ್ಲ ಎಂದು ಹೇಳುತ್ತಿದ್ದರೆ, ಆಗ ಹೇಗೆ ದರ ಇಳಿಸಲು ಸೂಚನೆ ನೀಡಿದರು?" ಎಂದು ಪ್ರಶ್ನಿಸಿದರು. "ಈ ಪ್ರಶ್ನೆಗೆ ಉತ್ತರವೇ ಇಡೀ ಸತ್ಯವನ್ನು ಹೇಳುತ್ತದೆ. ಅನಗತ್ಯ ನಾಟಕ ನಿಲ್ಲಿಸಿ" ಎಂದು ಕಿಡಿಕಾರಿದರು.
ದರ ಏರಿಕೆಗೆ ರಾಜ್ಯ ಸರ್ಕಾರವೇ ಕಾರಣ
ಮೆಟ್ರೋ ದರ ಏರಿಕೆ ಹೊಣೆಗಾರಿಕೆಯಿಂದ ರಾಜ್ಯ ಸರ್ಕಾರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಫೇರ್ ಫಿಕ್ಸೆಶನ್ ಕಮಿಟಿ (FFC) ರಚನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕೇಂದ್ರಕ್ಕೆ ಮನವಿ ಮಾಡಿತ್ತು ಎಂದರು. ಅಲ್ಲದೆ, ರಾಜ್ಯ ಸರ್ಕಾರದ ಆರ್ಥಿಕ ಹೊರೆ ಕಡಿಮೆ ಮಾಡಲು ದರ ಹೆಚ್ಚಿಸುವಂತೆ ಮತ್ತು ವಾರ್ಷಿಕ ದರ ಏರಿಕೆ ಜಾರಿಗೆ ತರುವಂತೆ ಕೂಡ ಸರ್ಕಾರವೇ ಒತ್ತಾಯಿಸಿತ್ತು ಎಂದು ಆರೋಪಿಸಿದರು. ಇದೇ ಸರ್ಕಾರ ಈಗ ದರ ಏರಿಕೆಗೆ ನಾವು ಕಾರಣವಲ್ಲ ಎಂದು ಹೇಳುವುದು ಜನರಿಗೆ ಮೋಸ ಮಾಡುವ ಪ್ರಯತ್ನ. ಜನರು ಕುರುಡರು ಅಲ್ಲ, ಈ ನಾಟಕವನ್ನು ಅವರು ಸ್ಪಷ್ಟವಾಗಿ ನೋಡುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಹೊಸ ಸಮಿತಿ ರಚಿಸಲಿ
ಪ್ರಸ್ತುತ ದರ ಏರಿಕೆ ಅನ್ಯಾಯಕರವಾಗಿದೆ ಎಂದು ಹೇಳಿದ ತೇಜಸ್ವಿ ಸೂರ್ಯ, ಈ ಸಮಸ್ಯೆಗೆ ಪ್ರಾಮಾಣಿಕ ಪರಿಹಾರ ಒಂದೇ ಹೊಸ ಫೇರ್ ಫಿಕ್ಸೆಶನ್ ಕಮಿಟಿ (FFC) ರಚಿಸಿ ದರಗಳನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.ಮುಖ್ಯಮಂತ್ರಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಜನರ ಮೇಲೆ ಹೊರೆ ಹಾಕಿ ಕೈ ತೊಳೆದುಕೊಳ್ಳುವ ರಾಜಕಾರಣ ನಡೆಯಬಾರದು ಎಂದು ಹೇಳಿದರು. ಮೆಟ್ರೋ ಪ್ರಯಾಣವು ಸಾಮಾನ್ಯ ನಾಗರಿಕರಿಗೆ ಕೈಗೆಟುಕುವಂತಿರಬೇಕು ಎಂಬುದು ನಮ್ಮ ಹೋರಾಟದ ಉದ್ದೇಶವಾಗಿದ್ದು, ದರ ಏರಿಕೆ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸುತ್ತದೆ ಎಂದು ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದರು.
The Congress Government in Karnataka is a khali trunk. Financially hollow, it is now passing its failures onto Bengaluru’s commuters through an unjust Metro fare hike.
— Tejasvi Surya (@Tejasvi_Surya) February 8, 2026
Visited RV Road Metro Station today to interact with commuters on #FareHikeBeda. pic.twitter.com/l9tWVOO5fQ
ಕಳೆದ ವರ್ಷ ಮೆಟ್ರೋ ದರದಲ್ಲಿ ಸುಮಾರು ಶೇ 105ರಷ್ಟು ಭಾರೀ ಏರಿಕೆ ನಡೆದಿತ್ತು. ಇದೀಗ ಮತ್ತೆ ಶೇ 5ರಷ್ಟು ದರ ಹೆಚ್ಚಳದ ಪ್ರಸ್ತಾವನೆ ಮುಂದಿಟ್ಟಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು. ಮೆಟ್ರೋ ಪ್ರಯಾಣ ದುಬಾರಿಯಾದರೆ, ಸಾರ್ವಜನಿಕ ಸಾರಿಗೆಯ ಮೂಲ ಉದ್ದೇಶವೇ ಹಾಳಾಗುತ್ತದೆ. ಸಾಮಾನ್ಯ ಜನರು ಮೆಟ್ರೋ ಬಳಸುವುದೇ ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು. ಮೆಟ್ರೋ ದರ ನಿಗದಿ ಪ್ರಕ್ರಿಯೆ ಕಾನೂನುಬದ್ಧವಾಗಿರಬೇಕು ಎಂದು ಒತ್ತಾಯಿಸಿದರು. ಕಾನೂನು ಪ್ರಕಾರ ನಿಯಮಿತ ಅವಧಿಯಲ್ಲಿ ದರ ಪರಿಷ್ಕರಣೆ ಪ್ರಕ್ರಿಯೆ ನಡೆಯಬೇಕು. ಅದನ್ನು ಸರಿಯಾಗಿ ಅನುಸರಿಸಿ, ದರಗಳನ್ನು ವೈಜ್ಞಾನಿಕವಾಗಿ ಸಮತೋಲನಗೊಳಿಸಬೇಕು ಎಂದರು.
ನಾವು ರಾಜ್ಯ ಸರ್ಕಾರವನ್ನು ಕೇಳುತ್ತಿರುವುದು ಒಂದೇ, ಕಾನೂನಿನ ಪ್ರಕಾರ ಪ್ರಕ್ರಿಯೆ ಆರಂಭಿಸಿ, ಮೆಟ್ರೋ ದರಗಳನ್ನು ನಿಗದಿಪಡಿಸಿ. ಪ್ರಯಾಣಿಕರನ್ನು ಮತ್ತಷ್ಟು ಕಿರುಕುಳಕ್ಕೆ ಒಳಪಡಿಸಬೇಡಿ ಎಂದು ಅವರು ಆಗ್ರಹಿಸಿದರು. ಮೆಟ್ರೋ ದಿನನಿತ್ಯ ಲಕ್ಷಾಂತರ ಬೆಂಗಳೂರಿಗರ ಜೀವಾಳವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದರ ಏರಿಕೆ ಮೂಲಕ ಜನರ ಮೇಲೆ ಹೆಚ್ಚುವರಿ ಹೊರೆ ಹಾಕುವುದು ಸರಿಯಲ್ಲ ಎಂದು ಹೇಳಿದ ತೇಜಸ್ವಿ ಸೂರ್ಯ, ಮೆಟ್ರೋ ಪ್ರಯಾಣ ಎಲ್ಲರಿಗೂ ಕೈಗೆಟುಕುವಂತಿರಬೇಕು ಎಂಬುದೇ ತಮ್ಮ ಹೋರಾಟದ ಮೂಲ ಉದ್ದೇಶ ಎಂದು ಸ್ಪಷ್ಟಪಡಿಸಿದರು.
-
By Election: ಒಬ್ಬರಿಂದ ಪಕ್ಷ ಗೆಲ್ಲಲ್ಲ, ಇದು ಕಾಂಗ್ರೆಸ್ ಸಿದ್ಧಾಂತಕ್ಕೆ ಸಿಗುವ ಜಯ: ಸಲೀಂ ಅಹ್ಮದ್ ಟಾಂಗ್ ಕೊಟ್ಟಿದ್ಯಾರಿಗೆ? -
ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ: ಏ.5ರಂದು ಈ ಭಾಗದಲ್ಲಿ ರೈಲು ಸಂಚಾರ ಸ್ಥಗಿತ, ಕಾರಣವೇನು? -
ಸಿದ್ದರಾಮಯ್ಯ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ: ರಾಜಕೀಯದಲ್ಲಿ ಹೊಸ ವಿವಾದ -
Namma Metro: ಐಪಿಎಲ್ ಪಂದ್ಯದ ದಿನ ದಟ್ಟಣೆ ಇಲ್ಲದೇ ಓಡಾಡಿ, ಮೆಟ್ರೋ ಸೇವಾವಧಿ ವಿಸ್ತರಣೆ -
GST: ಕಾಂಗ್ರೆಸ್ ಜನರ ಪರವೋ ಅಥವಾ ಹೆಚ್ಚಿನ ತೆರಿಗೆ ದರದ ಪರವೋ? ಮಾಜಿ ಸಿಎಂ ನೇರ ಪ್ರಶ್ನೆ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ












Click it and Unblock the Notifications