Namma Metro: 15 ರೈಲು ಸೇರ್ಪಡೆ ಬಳಿಕವು 'ನೇರಳೆ ಮಾರ್ಗ'ದಲ್ಲಿ ಸಮಸ್ಯೆ: ಸಂಸದರ ಮನವಿ ಏನು?
ಬೆಂಗಳೂರು, ಜುಲೈ 08: ಅತ್ಯಧಿಕ ಪ್ರಯಾಣಿಕರು ಸಂಚಾರ ಮಾಡುವ ಬೆಂಗಳೂರು ನಮ್ಮ ಮೆಟ್ರೋ (Namma Metro) ನೇರಳೆ ಮಾರ್ಗದಲ್ಲಿ ಹೆಚ್ಚುವರಿ ಮೆಟ್ರೋ ರೈಲು ನಿಯೋಜಿಸಿದರು ಸಹ ಸಾವಿರಾರು ಪ್ರಯಾಣಿಕರು ನಿಮಿಷಗಳ ಕಾಲ ಕಾಯಬೇಕಾದ ಸ್ಥಿತಿ ಉಂಟಾಗಿದೆ.
ನಮ್ಮ ಮೆಟ್ರೋ ನೇರಳೆ ಮಾರ್ಗದ ಗರುಡಾಚಾರಪಾಳ್ಯದಲ್ಲಿ ಸಾವಿರಾರು ಪ್ರಯಾಣಿಕರು ಪೀಕ್ ಸಮಯದಲ್ಲಿ ರೈಲಿಗಾಗಿ ಕಾಯುತ್ತಿದ್ದಾರೆ. ಹೆಚ್ಚುವರಿ ರೈಲು ಬಿಟ್ಟರು ಸಹ ಉಂಟಾಗುತ್ತಿರುವ ಈ ಸಮಸ್ಯೆಯತ್ತ BMRCL ಗಮನ ಹರಿಸಬೇಕು ಎಂದು ಬಿಜೆಪಿ ಸಂಸದ ಪಿಸಿ ಮೋಹನ್ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ನಲ್ಲಿ ಸೋಮವಾರ ಪೋಸ್ಟ್ ಮಾಡಿ ಮಾಹಿತಿ ನೀಡಿರುವ ಸಂಸದರು, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನೇರಳೆ ಮಾರ್ಗದ ಮೆಜೆಸ್ಟಿಕ್ ನಲ್ಲಿ 15 ಲೋಪ್ ಮೆಟ್ರೋ ರೈಲುಗಳನ್ನು ಬಿಟ್ಟರು ಸಹ ಗರುಡಾಚಾರ್ ಪಾಳ್ಯದಲ್ಲಿ ಸಾಕಷ್ಟು ಜನದಟ್ಟಣೆ ಕಂಡು ಬಂದಿದೆ.
ಫೋಟೋ ಶೇರ್ ಮಾಡಿದ ಸಂಸದರು
ಗುರಡಾಚಾರಪಾಳ್ಯ ಮೆಟ್ರೋ ನಿಲ್ದಾಣದಿಂದ ವೈಟ್‌ಫಿಲ್ಡ್ ಕಡೆಗೆ ತೆರಳಬೇಕಿದ್ದ ಸಾವಿರಾರು ಪ್ರಯಾಣಿಕರು ಮೂರು ನಿಮಿಷಗಳ ಕಾಲ ಮೆಟ್ರೋಗಾಗಿ ಕಾಯತ್ತಿರುವ ಫೋಟೋ ಅನ್ನು ಅವರು ಹಂಚಿಕೊಂಡಿದ್ದಾರೆ.

ಈ ನಿಲ್ದಾಣದಲ್ಲಿ ಒಂದೆಡೆ ಕಾಯುತ್ತಿರುವ ಪ್ರಯಾಣಿಕರು ಬರುವ ಮೆಟ್ರೋ ಏರಬೇಕು, ಮತ್ತು ಬರುವ ರೈಲಿನಿಂದ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಇಳಿಯಬೇಕಿದೆ. ಆದರೆ ಇಷ್ಟು ಜನದಟ್ಟಣೆಯಲ್ಲಿ ಅದೆಲ್ಲ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಸಮಸ್ಯೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ಕೂಡಲೇ ಬಗೆಹರಿಸಬೇಕು ಎಂದು ಪ್ರಯಾಣಿಕರ ಪರವಾಗಿ ಅವರು ಮನವಿ ಮಾಡಿದ್ದಾರೆ.
ಇತ್ತಿಚೆಗೆ ಮೆಟ್ರೋ ಅಧಿಕಾರಿಗಳು ನೇರಳೆ ಮಾರ್ಗದಲ್ಲಿ ಹಂತ ಹಂತವಾಗಿ ಹೆಚ್ಚಾಗುತ್ತಿರುವ ಪ್ರಯಾಣಿಕರಿಗೆ ಅನುಕೂಲ ಒದಗಿಸುವ ಜೊತೆಗೆ ಇಂಟರ್‌ಚೆಂಜ್ ಮೆಟ್ರೋ ನಿಲ್ದಾಣವಾದ ಮೆಜೆಸ್ಟಿಕ್ ನಲ್ಲಿ ಹೆಚ್ಚಾಗುತ್ತಿರುವ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಹೆಚ್ಚುವರಿಯಾಗಿ 15 ರೈಲುಗಳನ್ನು ಬಿಟ್ಟಿದ್ದಾರೆ.
Despite Namma Metro’s 15 loop trains on the Purple Line from Majestic, terminating at Garudachar Palya inconveniences thousands of Whitefield commuters. Passengers travelling to Whitefield must disembark and await for another crowded train. BMRCL must promptly address this issue. pic.twitter.com/7CewVzgYue
— P C Mohan (@PCMohanMP) July 8, 2024
ಹೆಚ್ಚುವರಿ ಸೌಲಭ್ಯ ಜಾರಿಗೆ ಎರಡೇ ದಿನದಲ್ಲಿ ಸಮಸ್ಯೆ!
ಮೆಜೆಸ್ಟಿಕ್ ನಿಂದ ಈ ಹೆಚ್ಚುವರಿ ರೈಲುಗಳು ಪ್ರತಿ 3.5 ನಿಮಿಷಗಳಿಗೊಮ್ಮೆ ಸಂಚಾರಿಸುತ್ತಿವೆ. ಹೀಗಿದ್ದರೂ ಸಹ ವೈಟ್‌ಫಿಲ್ಡ್ ಕಡೆಗೆ ತೆರಳುವ ಪ್ರಯಾಣಿಕರಿಗೆ ಸೋಮವಾರ ಬೆಳಗ್ಗೆ ತೊಂದರೆ ಆಗಿದ್ದು ಕಂಡು ಬಂದಿದೆ.
ಚಲ್ಲಘಟ್ಟದಿಂದ-ವೈಟ್‌ಫಿಲ್ಡ್‌ವರೆಗಿನ ಅತೀ ಉದ್ದದ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳು ಆವರ್ತನ ಸಮಯ ಇಳಿಕೆ ಮಾಡಲಾಗಿದೆ. ಈ ಹೆಚ್ಚುವರಿ ರೈಲುಗಳು ಪೀಕ್ ಸಮಯದಲ್ಲಿ ಬೆಳಗ್ಗೆ ಕಾರ್ಯ ನಿರ್ವಹಿಸಲಿವೆ. ಈ ಹೆಚ್ಚುವರಿ ರೈಲು ಸೌಲಭ್ಯ ಜುಲೈ 06 ಶನಿವಾರದಿಂದ ಜಾರಿಗೆ ತಂದಿರುವ ಬಗ್ಗೆ ಎಂದು BMRCL ಮಾಹಿತಿ ನೀಡಿತ್ತು. ಜಾರಿಯಾದ ಎರಡನೇ ದಿನವೇ ಪ್ರಯಾಣಿಕರಿಗೆ ಎದುರಾಗುತ್ತಿರುವ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.












Click it and Unblock the Notifications