ಬೆಂಗಳೂರಿನ ಈ ಎರಡು ಪ್ರದೇಶದಲ್ಲಿ ಆಸ್ತಿ ಮೌಲ್ಯ ಶೇ80 ರಷ್ಟು ಹೆಚ್ಚಳ & ಬಾಡಿಗೆ ಮನೆಗಳೂ ದುಬಾರಿ!

Bengaluru real estate boom: ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದಿನದಿಂದ ದಿನಕ್ಕೆ ಬೂಸ್ಟ್ ಆಗುತ್ತಿದೆ. ಅಲ್ಲದೇ ಬೆಂಗಳೂರಿನ ವಿವಿಧ ಭಾಗದಲ್ಲಿ ಭೂಮಿ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಇದೀಗ ಬೆಂಗಳೂರಿನ ಪ್ರಮುಖ ಪ್ರದೇಶದಲ್ಲಿ ಕಳೆದ ಎರಡು ಮೂರು ವರ್ಷಗಳ ಅವಧಿಯಲ್ಲಿ ಶೇ 80% ರಷ್ಟು ಭೂಮಿ ಬೆಲೆ ಹೆಚ್ಚಳವಾಗಿದೆ ಎಂದು Anarock ವರದಿ ಮಾಡಿದೆ. ಇದು ಅಚ್ಚರಿಗೆ ಕಾರಣವಾಗಿದೆ. ಇದು ಭಾರೀ ದೊಡ್ಡ ಮಟ್ಟದ ಬದಲಾವಣೆ ಆಗಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಭೂಮಿಯ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

ಕಳೆದ ಮೂರುವರೆ ವರ್ಷಗಳಲ್ಲಿ ಬೆಂಗಳೂರಿನ ಸರ್ಜಾಪುರ ರಸ್ತೆ ಹಾಗೂ ಥಣಿಸಂದ್ರ ಮುಖ್ಯ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭೂಮಿ ಹಾಗೂ ಆಸ್ತಿಯ ಬೆಲೆಗಳು ಬರೋಬ್ಬರಿ ಶೇ 80 ರಷ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ರಿಯಲ್ ಎಸ್ಟೇಟ್ ಸಾಕಷ್ಟು ಬೆಳವಣಿಗೆ ಕಾಣುತ್ತಿದ್ದು ಭೂಮಿ ಖರೀದಿ ಹಾಗೂ ಆಸ್ತಿಗಳ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಭೂಮಿ ಬೆಲೆ ಈ ಪರಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಇನ್ನಷ್ಟು ಚುರುಕು ಪಡೆದುಕೊಳ್ಳುವ ಸಾಧ್ಯತೆ ಇದೆ. ಭೂಮಿ ಖರೀದಿ ಜೋರಾಗುವ ಸಾಧ್ಯತೆ ಇದೆ.

Namma Metro Boost Property Prices Soar 80 in These Bengaluru Areas Rents Also Rising

ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿನ ಸರಾಸರಿ ಮನೆಗಳ ಬೆಲೆಗಳು ಈ ವರ್ಷ ಏಪ್ರಿಲ್ ಮತ್ತು ಜೂನ್ ಮಾಸದ ನಡುವೆ ಪ್ರತಿ ಚದರ ಅಡಿಗೆ ಶೇ. 79 ರಷ್ಟು ಹೆಚ್ಚಾಗಿ ಪ್ರತಿ ಚದರ ಅಡಿಗೆ ಈ ಭಾಗದಲ್ಲಿ ಭೂಮಿಯ ಬೆಲೆಯು ಬರೋಬ್ಬರಿ 10,800 ರೂಪಾಯಿ ತಲುಪಿದೆ ಎಂದು ಹೇಳಲಾಗಿದೆ. ಇದೇ ಭಾಗದಲ್ಲಿ 2021ನೇ ಸಾಲಿನ ಅಂತ್ಯದಲ್ಲಿ ಪ್ರತಿ ಚದರ ಅಡಿಗೆ 6,050 ರೂಪಾಯಿ ಇತ್ತು. ಬೆಂಗಳೂರಿನ ಉತ್ತರ ಭಾಗದ ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಭೂಮಿಯ ಬೆಲೆಗಳು ಪ್ರತಿ ಚದರ ಅಡಿಗೆ 5,345 ರೂಪಾಯಿಯಿಂದ 9,700 ರೂಪಾಯಿಗೆ ತಲುಪಿದೆ.

ಬೆಂಗಳೂರಿನ ಸರ್ಜಾಪುರ ರಸ್ತೆ ಭಾಗದಲ್ಲಿ ಈ ಹಿಂದಿನಿಂದಲೂ ಬೆಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಬೂಸ್ಟರ್ ಆಗಿದೆ. ಈ ಭಾಗದಲ್ಲಿ ಭೂಮಿಯ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಲ್ಲೇ ಇದೆ. ಪೂರ್ವ ಐಟಿ ಕಾರಿಡಾರ್‌ನ ಭಾಗವಾಗಿದೆ. ಆದರೆ ಬೆಂಗಳೂರಿನ ಹೆಬ್ಬಾಳದಿಂದ ಸರ್ಜಾಪುರ ಮೆಟ್ರೋ ಯೋಜನೆ ಬಂದ ಮೇಲೆ ಈ ಭಾಗದಲ್ಲಿ ದಿಢೀರ್ ಎಂದು ಭೂಮಿಯ ಬೆಲೆ ಹೆಚ್ಚಳವಾಗಿದೆ. ನಮ್ಮ ಮೆಟ್ರೋ ರೆಡ್‌ಲೈನ್‌ನಿಂದಾಗಿ ಭೂಮಿಯ ಬೆಲೆ ಹೆಚ್ಚಳವಾಗುತ್ತಿದೆ. ಈ ಯೋಜನೆ ಇಲ್ಲಿ ಜಾರಿಯಾಗುವ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ಈ ಭಾಗದಲ್ಲಿ ಭೂಮಿಯ ಬೆಲೆ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.

ಥಾಣಿಸಂದ್ರ ಮುಖ್ಯ ರಸ್ತೆ ಪ್ರದೇಶವು ಮಾನ್ಯತಾ ಟೆಕ್ ಪಾರ್ಕ್‌ಗೆ ಸಮೀಪದಲ್ಲೇ ಇದೆ. ಅಲ್ಲದೇ ಈ ಭಾಗದಲ್ಲಿ ಟ್ರಾಫಿಕ್ ಜಾಮ್‌ ಸಮಸ್ಯೆ ಹೆಚ್ಚಳವಾಗಿತ್ತು. ಈ ಭಾಗದಲ್ಲಿ ಭೂಮಿ ಬೆಲೆ ಕುಸಿಯುವುದಕ್ಕೆ ಇದೇ ಕಾರಣವಾಗಿತ್ತು. ಆದರೆ ಇದೀಗ ಈ ಭಾಗದಲ್ಲಿ ಸಾರಿಗೆ ಅಭಿವೃದ್ಧಿಯಿಂದಾಗಿ ರಿಯಲ್ ಎಸ್ಟೇಟ್‌ಗೆ ಒಳ್ಳೆಯ ಬೆಲೆ ಬಂದಿದೆ. ಸರ್ಜಾಪುರ ರಸ್ತೆ ಹಾಗೂ ಥಾಣಿಸಂದ್ರ ಮುಖ್ಯ ರಸ್ತೆಯಲ್ಲಿ ಬಾಡಿಗೆ ಮೌಲ್ಯಗಳು ಸಹ ಶೇ. 81 ರಷ್ಟು ತೀವ್ರವಾಗಿ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+