ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Namma Metro: 50ಸಾವಿರ ಟಿಕೆಟ್‌ಗಳ ಖರೀದಿಗೆ ಅವಕಾಶ ನೀಡಲಿರುವ BMRCL

|
Google Oneindia Kannada News

ಬೆಂಗಳೂರು, ಡಿಸೆಂಬರ್ 23: ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಬಲ್ಕ ಆಗಿ ಅಂದರೆ ಸುಮಾರು 50ಸಾವಿರವರೆಗೆ ಮೆಟ್ರೋ ಟಿಕೆಟ್‌ಗಳನ್ನು ಖರೀದಿಸಲು ಆದಷ್ಟು ಶೀಘ್ರವೇ ಅವಕಾಶ ಮಾಡಿಕೊಡಲಿದೆ.

ಹೌದು, ಬೆಂಗಳೂರು ವ್ಯಾಪ್ತಿಯಲ್ಲಿ ಬೃಹತ್ ಸಮಾರಂಭ ಮಾಡುವವರು, ಕ್ರಿಕೆಟ್ ಪಂದ್ಯಾವಳಿ, ಫಲಪುಷ್ಪ ಪ್ರದರ್ಶನದಂತ ಕಾರ್ಯಕ್ರಮ ಆಯೋಜಕರು ಸೇರಿದಂತೆ ಆಸಕ್ತರು ಮುಂದಿನ ದಿನಗಳಲ್ಲಿ 'ನಮ್ಮ ಮೆಟ್ರೋ' ರೈಲಿನ 500ರಿಂದ 50ಸಾವಿರ ವರೆಗೆ ಟಿಕೇಟ್‌ಗಳನ್ನು ಬಲ್ಕ್ ಆಗಿ ಖರೀದಿಸಬಹುದು. ಈ ಯೋಜನೆ ಜಾರಿಗೆ ತರಲು ಬಿಎಂಆರ್‌ಸಿಎಲ್‌ ಚಿಂತನೆ ನಡೆಸಿದೆ.

ಬೆಂಗಳೂರು: ವಾಹನ ಸವಾರರಿಗೆ ಸಿಹಿ ಸುದ್ದಿ, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಜೂನ್ 2023ಕ್ಕೆ ಆರಂಭ ಬೆಂಗಳೂರು: ವಾಹನ ಸವಾರರಿಗೆ ಸಿಹಿ ಸುದ್ದಿ, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಜೂನ್ 2023ಕ್ಕೆ ಆರಂಭ

ಬಿಎಂಆರ್‌ಸಿಎಲ್‌ ಕಿಲೋ ಮೀಟರ್ ಆಧಾರದ ಮೇಲೆ ಬಲ್ಕ್ ಟಿಕೆಟ್ ಗಳಿಗೆ ರಿಯಾಯಿತಿಯನ್ನು ನಿಗದಿ ಮಾಡಲಿದೆ. ಜನರಿಗೆ ಅನುಕೂಲ ಮಾಡಿ ಕೊಡುವುದರ ಜೊತೆಗೆ ಆದಾಯ ಹೆಚ್ಚಿಸಿ ಕೊಳ್ಳಲು ಮೆಟ್ರೋ ನಿಗಮ ಇಂತದ್ದೊಂದು ಮಾಸ್ಟರ್ ಪ್ಲಾನ್ ಮಾಡಿದೆ ಎನ್ನಲಾಗುತ್ತಿದೆ.

ಹಿಂದೆಯೆ ಅನ್‌ಲಿಮಿಟೆಡ್ ಟಿಕೆಟ್‌ಗೆ ಬೇಡಿಕೆ ಇತ್ತು

ಹಿಂದೆಯೆ ಅನ್‌ಲಿಮಿಟೆಡ್ ಟಿಕೆಟ್‌ಗೆ ಬೇಡಿಕೆ ಇತ್ತು

ಇತ್ತೀಚಿನ ದಿನಗಳಲ್ಲಿ ಗುಂಪು ಪ್ರಯಾಣ (ಗ್ರೂಪ್ ಟ್ರಾವೆಲ್) ಹೆಚ್ಚಾಗುತ್ತಿವೆ. ಹೆಚ್ಚೆ ಟಿಕೆಟ್ ಕೊಡುವ ಬಗ್ಗೆ ಈಗಾಗಲೇ ಬೇಡಿಕೆ ಇತ್ತು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಒಮ್ಮೆಲೆ ಸಾವಿರಾರು ಬಲ್ಕ್ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ ನಿರ್ಧರಿಸಿದೆ. ಈ ರೀತಿ ಬಲ್ಕ್ ಟಿಕೆಟ್ ವಿತರಣೆಗೆ ಅವಕಾಶ ನೀಡುವ ಸಂಬಂಧ ಸಂಸ್ಥೆಯ ಮುಖ್ಯಸ್ಥರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವ ನಿರ್ಧಾರ ಕೈಗೊಳ್ಳಲಾಗಿದೆ.

ಬಲ್ಕ್ ಟಿಕೇಟ್ ಖರೀದಿ ಪ್ರಯೋಜನ ಏನು?

ಬಲ್ಕ್ ಟಿಕೇಟ್ ಖರೀದಿ ಪ್ರಯೋಜನ ಏನು?

ಮುಂದಿನ ದಿನಗಳಲ್ಲಿ ಈ ಬಲ್ಕ್ ಟಿಕೆಟ್‌ಗಳ ಖರೀದಿಗೆ ಅವಕಾಶ ದೊರೆಯಲಿದೆ. ಇದರಿಂದ ಜನರು ಮದುವೆ, ಜನ್ಮದಿನದ ಪಾರ್ಟಿಗಳು, ರಾಜಕೀಯ ಪಕ್ಷದ ಯಾತ್ರೆ ಆಯೋಜನೆ ವೇಳೆ ಈ ಬಲ್ಕ ಟಿಕೆಟ್ ಖರೀದಿಸಬಹುದು.

ಇವೆಂಟ್‌ಗಳ ಆಯೋಜಕರು ನೂರು, ಸಾವಿರಗಟ್ಟಲೇ ಟಿಕೆಟ್ ಖರೀದಿಸಿ ಅವುಗಳನ್ನು ಭಾಗವಹಿಸುವವರಿಗೆ ನೀಡಬಹುದು. ವಿವಾಹದಂತ ಕಾರ್ಯಕ್ರಮಗಳ ಸಂದರ್ಭದಲ್ಲಿ ಮೆಟ್ರೋ ರೈಲಿನ ಟಿಕೆಟ್ ಖರೀದಿಸಿ ಅವುಗಳನ್ನು ಆಮಂತ್ರಣ ಜೊತೆಗೆ ಇಟ್ಟು ಕಳುಹಿಸಬಹುದು.

ಸಮಾವೇಶ ಪಾಲ್ಗೊಳ್ಳುವವರಿಗೆ ಟಿಕೆಟ್ ವಿತರಿಸಿದೆ.

ಸಮಾವೇಶ ಪಾಲ್ಗೊಳ್ಳುವವರಿಗೆ ಟಿಕೆಟ್ ವಿತರಿಸಿದೆ.

ರಾಜ್ಯಕೀಯ ಬೃಹತ್ ಸಮಾವೇಶ, ಕ್ರಿಕೆಟ್ ಪಂದ್ಯಾವಳಿ, ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಂತ ಸಂದರ್ಭಗಳಲ್ಲಿ ಸಾವಿರಾರು ಟಿಕೆಟ್ ಒಮ್ಮೆಲೆ ಖರೀದಿಸಿ ಪಾಲ್ಗೊಳ್ಳುವವರಿಗೆ ನೀಡಬಹುದು. ರಾಜಕೀಯ ರ್‍ಯಾಲಿ ಹಮ್ಮಿಕೊಂಡ ವೇಳೆ ವಿವಿಧ ಜಿಲ್ಲೆಗಳ ಜನರು ಸಹಸ್ರ ಸಂಖ್ಯೆಯಲ್ಲಿ ರಾಜ್ಯ ರಾಜಧಾನಿಗೆ ಆಗಮಿಸುತ್ತಾರೆ. ಈ ವೇಳೆ ಅವರಿಗೆ ನಿಗದಿತ ಸ್ಥಳ ತಲುಪಲು ಈ ಟಿಕೆಟ್ ನೀಡಿದರೆ ನೆರವಾಗುತ್ತದೆ.

ಈ ಎಲ್ಲ ಕಾರಣಗಳಿಂದಾಗಿ ಸಭೆಯಲ್ಲಿ ನಿರ್ಧರಿಸಿದಂತೆ ಅನ್ ಲಿಮಿಟೆಡ್ ಆಗಿ ಸಾವಿರಗಟ್ಟಲೇ ಮೆಟ್ರೋ ರೈಲಿನ ಟಿಕೆಟ್ ಖರೀದಿಗೆ ಅವಕಾಶ ನೀಡಿ ಹೊಸ ಯೋಜನೆ ಅನುಷ್ಠಾನ ಮಾಡಲು ಮೆಟ್ರೋ ನಿಗಮ ನಿರ್ಧಾರ ಮಾಡಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಿ, ಅಂಜುಮ್ ಪರ್ವೇಜ್ ತಿಳಿಸಿದರು.

ಕ್ಯೂ ಆರ್‌ ಟಿಕೆಟ್‌ ವ್ಯವಸ್ಥೆಗೆ ಭಾರಿ ಸ್ಪಂದನೆ

ಕ್ಯೂ ಆರ್‌ ಟಿಕೆಟ್‌ ವ್ಯವಸ್ಥೆಗೆ ಭಾರಿ ಸ್ಪಂದನೆ

ಕಳೆದ ನವೆಂಬರ್‌ 1ರಿಂದ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಬೆಂಗಳೂರಿಗರಿಗೆ ಕ್ಯೂ ಆರ್‌ ಕೋಡ್‌ ಆಧಾರಿತ ಟಿಕೆಟ್ ವ್ಯವಸ್ಥೆಯನ್ನು ಪರಿಚಯಿಸಿತ್ತು. ಗ್ಲೋಬಲ್ ಟ್ರಾನ್ಸಿಸ್ಟ್ ಸ್ಪೇಸ್‌ನಲ್ಲಿ ವಾಟ್ಸಪ್‌ ಆಪ್‌ ನಲ್ಲಿ ಎಂಡ್ ಟು ಎಂಡ್ ಟಿಕೆಟಿಂಗ್ ವ್ಯವಸ್ಥೆಯಡಿ ಪ್ರಯಾಣಿಕರು ಟಿಕೆಟ್ ಖರೀದಿಸುತ್ತಿದ್ದು, ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ವ್ಯವಸ್ಥೆಯಿಂದಾಗಿ ಸಾರ್ವಜನಿಕರು ಟಿಕೆಟ್‌ಗಾಗಿ ನಿಮಿಷಗಳಗಟ್ಟಲೇ ನಿಲ್ದಾಣದ ಕೌಂಟರ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಿದೆ. ಜತೆಗೆ ಪ್ರಯಾಣಿಕರಿಗೆ ಹೊಸ ಡಿಜಿಟಲ್ ವೇದಿಕೆ ಒದಗಿಸುತ್ತಿದೆ. ಚಿಲ್ಲರೆ ಸಮಸ್ಯೆ ನಿವಾರಣೆ ಆಗಿದ್ದು, ಪ್ರಯಾಣಿಕರಿಗೆ ಸಮಯವು ಉಳಿತಾಯವಾಗುತ್ತಿದೆ.

English summary
Bengaluru Namma Metro: Bengaluru Metro Rail Corporation Limited (BMRCL) to allow purchase of 50,000 tickets very soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X