Namma Metro: ಮಹತ್ವದ ಕಾರ್ಯಕ್ಕೆ ಮುಂದಾದ BMRCL‌-ಮಜೆಸ್ಟಿಕ್‌ ಮೆಟ್ರೋ ನಿಲ್ದಾಣದ ಪ್ರಯಾಣಿಕರ ದಟ್ಟಣೆ ತಗ್ಗುತ್ತಾ?

ಬೆಂಗಳೂರು, ಮೇ, 05: ಬೆಂಗಳೂರಿನ ಜೀವನಾಡಿ ಸಾರಿಗೆಯಲ್ಲೊಂದಾದ ನಮ್ಮ ಮೆಟ್ರೋದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಲೇ ಇವೆ. ಹಾಗೆಯೇ ಇದೀಗ ಮಹತ್ವದ ಕಾರ್ಯವೊಂದಕ್ಕೆ ಮುಂದಾಗಿದೆ. ಹಾಗಾದಾರೆ ಆ ಕಾರ್ಯ ಯಾವುದು ಹಾಗೂ ಇದರಿಂದ ಏನೆಲ್ಲಾ ಉಪಯೋಜನೆಗಳಾಗಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಮುಂದಿನ 5 ವರ್ಷದಲ್ಲಿ ಮೆಟ್ರೋ ಜಾಲದಲ್ಲಿ 16 ಮಾರ್ಗ ಬದಲಾವಣೆ ನಿಲ್ದಾಣಗಳು ನಿರ್ಮಾಣ ಆಗಲಿವೆ ಎನ್ನುವ ಮಾಹಿತಿಯೊಂದು ಇದೀಗ ಲಭ್ಯವಾಗಿದೆ. ಹಾಗಾದರೆ ಯಾವ್ಯಾವ ಮಾರ್ಗಗಳಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

Namma Metro BMRCL Plan for 16 Interchange Stations Construction in These routes

ನಗರಪೂರ್ತಿ ಮೆಟ್ರೋದಲ್ಲಿ ಸಂಚರಿಸಲು ಸಾಧ್ಯ ಆಗುವಂತೆ ಇವುಗಳ ಉದ್ದೇಶವಾಗಿದೆ. ಇದೀಗ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣ ಮಾತ್ರ ಇಂಟರ್‌ಚೇಂಜ್‌ ಆಗಿದೆ. ಪ್ರತಿನಿತ್ಯ 50,000 ಹೆಚ್ಚು ಜನ ಈ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದು, ಯಾವಾಗಲು ಪ್ರಯಾಣಿಕರ ದಟ್ಟಣೆಯಿಂದ ಕೂಡಿರುತ್ತದೆ. ಆದ್ದರಿಂದ ಹೆಚ್ಚಿನ ಮಾರ್ಗ ಬದಲಾವಣಾ ನಿಲ್ದಾಣಗಳು ನಿರ್ಮಾಣವಾದರೆ, ಮೆಜೆಸ್ಟಿಕ್‌ ಮೆಟ್ರೋದ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸದಂತಾಗುತ್ತದೆ.

ಕಸ್ತೂರಿ ನಗರ ರೇಷ್ಮೇ ಮಂಡಳಿಯಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೋ ಎರಡನೇ ಹಂತದ ನೀಲಿ ಮಾರ್ಗಗಳಲ್ಲಿ ಇಂಟರ್‌ಚೇಂಜ್‌ ನಿಲ್ದಾಣದ ಕಾಮಗಾರಿ ಚಾಲ್ತಿಯಲ್ಲಿದೆ. ಈಗಾಗಲೇ ಸಮಗ್ರ ಯೋಜನಾ ವರದಿ ಸಿದ್ಧವಾದ ಮಾರ್ಗಗಳಾದ ಮೆಟ್ರೋ ಮೂರನೇ ಹಂತದ ಎರಡು ಕಾರಿಡಾರ್‌ಗಳಾದ ಜೆಪಿ ನಗರ-ಕೆಂಪಾಪುರ ಹಾಗೂ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆ ನಡುವಿನ ಕೇಸರಿ ಮಾರ್ಗ, 3ಎ ಹಂತದ ಹೆಬ್ಬಾಳ-ಸರ್ಜಾಪುರ ನಡುವಿನ ಕೆಂಪು ಮಾರ್ಗ ಪೂರ್ಣಗೊಂಡ ಬಳಿಕ ಒಟ್ಟಾರೆ 16 ಇಂಟರ್‌ಚೇಂಜ್‌ ನಿಲ್ದಾಣಗಳು ನಿರ್ಮಾಣ ಆದಂತಾಗಲಿವೆ.

ಇನ್ನು ಇದೇ ವರ್ಷಾಂತ್ಯಕ್ಕೆ ಉದ್ಘಾಟನೆ ಆಗುವ ನಿರೀಕ್ಷೆಯಿರುವ ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಬರುವ ಜಯದೇವ ಇಂಟರ್‌ಚೇಂಜ್‌ ಶೀಘ್ರ ನಮ್ಮ ಮುಂದಿನ ಮಾರ್ಗ ಬದಲಾವಣಾ ನಿಲ್ದಾಣ ಆಗಲಿದ್ದು, ಇದು 2026ಕ್ಕೆ ಓಪನ್‌ ಆಗಲಿರುವ ಕಾಳೇನ ಅಗ್ರಹಾರ-ನಾಗವಾರ ನಡುವಿನ ಗುಲಾಬಿ ಮತ್ತು ಹಳದಿ ಕಾರಿಡಾರ್‌ ನಡುವಣ ಇಂಟರ್‌ಚೇಂಜ್‌ ಆಗಿ ಕಾರ್ಯನಿರ್ವಹಿಸಲಿದೆ.

ಇದು ಜನದಟ್ಟಣೆ ಸಂದರ್ಭದಲ್ಲು ಸುಮಾರು 25,000 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ಸದ್ಯ ಶೇಕಡಾ 95ರಷ್ಟು ನಿರ್ಮಾಣ ಕಾರ್ಯ ಮುಕ್ತಾಯವಾಗಿದ್ದು, ಒಟ್ಟಾರೆ 19,826 ಚದರ ಕಿಲೋ ಮೀಟರ್‌ ವಿಸ್ತೀರ್ಣ ಇದೆ ಎಂದು ತಿಳಿದುಬಂದಿದೆ.

ಇದೀಗ ಸದ್ಯ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಹಸಿರು ಮತ್ತು ನೀಲಿ ಮಾರ್ಗದ ಪ್ರಯಾಣಿಕರು ಮಾರ್ಗ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಮುಂದುವರೆದು ನೇರಳೆ ಮಾರ್ಗದಲ್ಲಿ 5 ಇಂಟರ್‌ಚೇಂಜ್‌, ಹಸಿರು ಮಾರ್ಗದಲ್ಲಿ 3 ಇಂಟರ್‌ಚೇಂಜ್‌ ನಿರ್ಮಾಣ ಆಗಲಿದೆ. ಸುರಂಗ ಮೆಟ್ರೋ ಗುಲಾಬಿ ಮತ್ತು ನೀಲಿ ಮಾರ್ಗದಲ್ಲಿ ತಲಾ 4 ಹಾಗೂ ಕೇಸರಿ ಮಾರ್ಗದಲ್ಲಿ ಒಂದು ಮಾರ್ಗ ಬದಲಾವಣೆ ನಿಲ್ದಾಣ ನಿರ್ಮಾಣ ಆಗಲಿದೆ ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ.

ಇವೆಲ್ಲ ನಿರ್ಮಾಣವಾದರೆ, ಒಟ್ಟು ಇಂಟರ್‌ಚೇಂಜ್‌ ನಿಲ್ದಾಣಗಳ ಸಂಖ್ಯೆ 17ಕ್ಕೆ ಏರಿಕೆ ಆಗಲಿದೆ. ಇಂಟರ್‌ಚೇಂಜ್‌ ನಿಲ್ದಾಣಗಳಿಂದ ಪ್ರಯಾಣಿಕರು ಇಡೀ ನಗರವನ್ನು ಮೆಟ್ರೋದಲ್ಲೇ ಸುತ್ತಲು ಅನುಕೂಲ ಆಗಲಿದ್ದು, ಇವು ಸಂಪೂರ್ಣ ಮೆಟ್ರೋ ಜಾಲವನ್ನು ಒಂದನ್ನೊಂದು ಸಂಪರ್ಕಿಸಲಿವೆ. ಆದ್ದರಿಂದ ನೇರಳೆ, ಹಸಿರು, ಹಳದಿ ಸೇರಿ ಯಾವುದೇ ಕಾರಿಡಾರ್‌ನ ಮೆಟ್ರೋ ಹತ್ತಿದರೂ ಅದಕ್ಕೆ ಪೂರಕ ಆಗಿರುವ ಇಂಟರ್‌ಚೇಂಜ್‌ನಲ್ಲಿ ಇಳಿದು ಮತ್ತೊಂದು ಮಾರ್ಗದಲ್ಲಿ ಸಂಚರಿಸಲು ಅನುಕೂಲ ಆಗಲಿದೆ.

ಯಾವೆಲ್ಲ ಮಾರ್ಗಗಳಲ್ಲಿ ಇಂಟರ್‌ಚೆಂಜ್‌?: ಕೆ.ಆರ್‌.ಪುರ ನೇರಳೆ-ನೀಲಿ, ಎಂಜಿ ರಸ್ತೆ ನೇರಳೆ-ಗುಲಾಬಿ, ಹೊಸಹಳ್ಳಿ ನೇರಳೆ-ಕೇಸರಿ, ಮೈಸೂರು ರಸ್ತೆ ನೇರಳೆ-ಕೇಸರಿ, ಪೀಣ್ಯ ಹಸಿರು-ಕೇಸರಿ, ಆರ್‌.ವಿ. ರಸ್ತೆ ಹಸಿರು-ಹಳದಿ, ಜೆ.ಪಿ.ನಗರ ಹಸಿರು-ಕೇಸರಿ (ಕೆಂಪಾಪುರ), ಜೆ.ಪಿ.ನಗರ 4ನೇ ಹಂತ ಗುಲಾಬಿ-ಕೇಸರಿ, ಜಯದೇವ ಗುಲಾಬಿ-ಹಳದಿ, ಡೇರಿ ಸರ್ಕಲ್‌ ಗುಲಾಬಿ-ಕೆಂಪು, ನಾಗವಾರ ಗುಲಾಬಿ-ನೀಲಿ, ಕೆಂಪಾಪುರ ನೀಲಿ-ಕೇಸರಿ, ಹೆಬ್ಬಾಳ ನೀಲಿ-ಕೆಂಪು, ಅಗರ ನೀಲಿ-ಕೆಂಪು, ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ನೀಲಿ-ಹಳದಿ, ಸುಮನಹಳ್ಳಿ ಕ್ರಾಸ್‌ ಕೇಸರಿ (ಕಡಬಗೆರೆ-ಜೆಪಿನಗರ).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+