Namma Metro: ಪ್ರಯಾಣಿಕರ ವಸ್ತುಗಳನ್ನು ಹರಾಜು ಹಾಕಿ ₹7.4 ಲಕ್ಷ ಗಳಿಸಿದ BMRCL
ಬೆಂಗಳೂರು, ಡಿಸೆಂಬರ್ 07: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರು ಬಿಟ್ಟು ಹೋದ ವಸ್ತುಗಳನ್ನು ಹರಾಜು ಹಾಕಿರುವ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ಲಕ್ಷಾಂತರ ರೂಪಾಯಿ ಸಂಗ್ರಹಿಸಿದೆ.
ಹೌದು, ಈ ಹಿಂದಿನ ಐದು ವರ್ಷಗಳಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ಮೆಟ್ರೋ ಪ್ರಯಾಣಿಕರು ಮರಳಿ ಪಡೆಯದ 6,354 ವಸ್ತುಗಳನ್ನು ಹರಾಜು ಮಾಡಲಾಗಿದೆ. ಈ ವಸ್ತುಗಳಿಂದ ನಿಗಮಕ್ಕೆ ಬರೊಬ್ಬರಿ 7.4 ಲಕ್ಷ ರೂಪಾಯಿ ಬಂದಿದೆ ಎಂದು TOI ವರದಿ ಮಾಡಿದೆ..

ಪ್ರಯಾಣಿಕರು ಬಿಟ್ಟು ಹೋಗಿದ್ದಲ್ಲದೇ ಮರಳಿ ಪಡೆಯದ ವಸ್ತುಗಳಾದ ನೀರಿನ ಬಾಟಲಿ, ಹೆಲ್ಮೆಟ್‌ಗಳು, ಊಟದ ಬಾಕ್ಸ್‌ಗಳು, ಬ್ಯಾಗ್, ಛತ್ರಿಯಂತಹ ಇನ್ನಿತರ ವಸ್ತುಗಳನ್ನು ಹರಾಜು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ BMRCL ಪ್ರಯಾಣಿಕರು ಬಿಟ್ಟು ಹೋದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಹರಾಜು ಮಾಡಿಲ್ಲ. ಬದಲಾಗಿ ಅವುಗಳನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ನೇರಳೆ ಮಾರ್ಗದಲ್ಲಿನ ಒಟ್ಟು 1,402 ವಸ್ತುಗಳು ಮತ್ತು ಹಸಿರು ಮಾರ್ಗದಲ್ಲಿನ 4,952 ವಸ್ತುಗಳು ಹರಾಜಾಗಿವೆ ಎಂದು ನಿಗಮ ತಿಳಿಸಿದೆ.
ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ ಪೊಲೀಸರಿಗೆ ಹಸ್ತಾಂತರ
ಮೆಟ್ರೋ ರೈಲಿನಲ್ಲಿ ಪ್ರಯಾಣಿಕರು ಕಳೆದುಕೊಂಡು/ಮರೆತು ಬಿಟ್ಟು ಹೋದ ವಸ್ತುಗಳು ಪತ್ತೆ ಆದ ಕೂಡಲೇ ಅವುಗಳನ್ನು ನಿಲ್ದಾಣದ ನಿಯಂತ್ರಕರಿಗೆ ಹಸ್ತಾಂತರಿಸಲಾಗುತ್ತದೆ. ಕಳೆದುಕೊಂಡವರು ಒಂದು ಅಥವಾ ಎರಡು ದಿನಗಳಲ್ಲಿ ಕಳೆದಕೊಂಡು ವಸ್ತುಗಳನ್ನು ಪಡೆಯಲು ನಿಲ್ದಾಣ ಸಿಬ್ಬಂದಿಯನ್ನು ಸಂಪರ್ಕಿಸುತ್ತಾರೆ.
ಸೂಕ್ತ ಪರಿಶೀಲನೆ, ಇವರದ್ದೇ ವಸ್ತುಗಳು ಎಂದು ಖಚಿತವಾದಲ್ಲಿ ಅವುಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಗುತ್ತದೆ. ಸಾಮಾನ್ಯವಾಗಿ, ಪ್ರಯಾಣಿಕರು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಿಟ್ಟು ಹೋದಾಗ, ಅವುಗಳನ್ನು ಸಂಗ್ರಹಿಸಲು ಅವರು ಒಂದು ಅಥವಾ ಎರಡು ದಿನಗಳಲ್ಲಿ ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಆದರೆ ಛತ್ರಿ, ಬ್ಯಾಗ್, ಬಾಕ್ಸ್, ಬಾಟಲಿಗಳಂತಹ ವಸ್ತುಗಳನ್ನು ಸಂಗ್ರಹಿಲು ಆಸಕ್ತಿ ತೋರುವುದಿಲ್ಲ. ಸದ್ಯ ಇಂತಹ ವಸ್ತುಗಳನ್ನು ಬಿಎಂಆರ್‌ಸಿಎಲ್ ಪ್ರತಿ ಆರು ತಿಂಗಳಿಗೊಮ್ಮೆ ಹರಾಜು ಹಾಕುತ್ತದೆ. ಇನ್ನೂ ಕೆಲವೊಮ್ಮೆ ಪ್ರಯಾಣಿಕರು ಬೆಳ್ಳಿ ಮತ್ತು ಚಿನ್ನದ ವಸ್ತುಗಳನ್ನು ಸಹ ಕೇಳಲು ವಾಪಾಸ್ ಬರದ ನಿದರ್ಶನಗಳಿವೆ ಎಂದು ಅಧಿಕಾರಿ ಹೇಳಿದರು.

ಈ ವಸ್ತುಗಳನ್ನು ಹರಾಜಿಗೂ ಮೊದಲು BMRCL ಹರಾಜಿನ ವಸ್ತುಗಳ ಕುರಿತು ತನ್ನ ವೆಬ್‌ಸೈಟ್‌ನಲ್ಲಿ ನೀಡಿರುತ್ತದೆ. ಅಲ್ಲಿ ಕೊಡಲಾದ ದೂರವಾಣಿ ಸಂಖ್ಯೆಗಳಿಗೂ ಪ್ರಯಾಣಿಕರು ಸಂಪರ್ಕಿಸಲು ಅವಕಾಶ ಇರುತ್ತದೆ.
ಚೆನ್ನೈ ಮೆಟ್ರೋದಲ್ಲಿ ನಿತ್ಯ 2.66 ಲಕ್ಷ ಮಂದಿ ಸಂಚಾರ
ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ (CMRL) ಪ್ರತಿ ದಿನವೊಂದಕ್ಕೆ ಸರಾಸರಿ 2.66 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡಿದೆ. ಇಷ್ಟು ಮಂದಿ ನಿತ್ಯ ಮೆಟ್ರೋವನ್ನು ಬಳಸಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳು ಮಾಹಿತಿ ನೀಡಿವೆ.
ಇನ್ನೂ ಮಾಸಿಕವಾಗಿ ಚೆನ್ನೈ ಮೆಟ್ರೋ ರೈಲುಗಳನ್ನು 80.01 ಲಕ್ಷ ಪ್ರಯಾಣಿಕರು ಬಳಕೆ ಮಾಡುತ್ತಿದ್ದಾರೆ. ನವೆಂಬರ್ 10 ರಂದು ಗರಿಷ್ಠ 3.35 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದಾರೆ ಎಂದು ಸಿಎಂಆರ್‌ಎಲ್ ತಿಳಿಸಿದೆ.
ಹೀಗೆ ಗರಿಷ್ಠ ಪ್ರಮಾಣದಲ್ಲಿ ಓಡಾಡುವ ಪ್ರಯಾಣಿಕರು ತಮ್ಮ ಪ್ರಯಾಣಕ್ಕಾಗಿ ಸ್ಮಾರ್ಟ್ ಕಾರ್ಡ್‌ಗಳು, ಪೇಪರ್ ಕ್ಯೂಆರ್ ಟಿಕೆಟ್‌ಗಳು, ಎನ್‌ಸಿಎಂಸಿ ಸಿಂಗಾರ ಚೆನ್ನೈ ಕಾರ್ಡ್‌ಗಳು, ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಕ್ಯೂಆರ್-ಕೋಡ್ ಟಿಕೆಟ್‌ಗಳು ಮತ್ತು ನಿಲ್ದಾಣಗಳಲ್ಲಿ ಟಿಕೆಟಿಂಗ್‌ಗಾಗಿ ಸ್ಟ್ಯಾಟಿಕ್ ಕ್ಯೂಆರ್ ಕೋಡ್‌ಗಳನ್ನು ಬಳಸಿದ್ದಾರೆ ಎಂದು ಚೈನ್ನೈ ಮೆಟ್ರೋ ನಿಗಮ ತಿಳಿಸಿದೆ.












Click it and Unblock the Notifications