Namma Metro: ಏರ್‌ಪೋರ್ಟ್ ಮಾರ್ಗದಲ್ಲಿ ಈ ಕೆಲಸ ಯಶಸ್ವಿ, ಅಪ್ಡೇಟ್ ಮಾಹಿತಿ
ಬೆಂಗಳೂರು, ಜನವರಿ 18: ಬೆಂಗಳೂರು ಸಿಲ್ಕಬೋರ್ಡ್ ಜಂಕ್ಷನ್‌ನಿಂದ ಕೆಆರ್ ಪುರಂ ಮಾರ್ಗವಾಗಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಸಂಪರ್ಕಿಸುವ ನೀಲಿ ಮಾರ್ಗದಲ್ಲಿ (Bengaluru metro blue line) ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇದೀಗ ಈ ಮಾರ್ಗದಲ್ಲಿ ಮೈಲುಗಲ್ಲು ಸಾಧಿಸಲಾಗಿದೆ.
ನಮ್ಮ ಮೆಟ್ರೋ ಯೋಜನೆ ಹಂತ 2ಬಿ ಯೋಜನೆ (ಏರ್‌ಪೋರ್ಟ್‌ವರೆಗಿನ ನೀಲಿ ಮಾರ್ಗ) ಯಲ್ಲಿ ಎನ್‌ಸಿಸಿ ಪ್ಯಾಕೇಜ್ 2 ತಂಡವು ಯಶಸ್ವಿಯಾಗಿ 200-ಯು ಗಿರ್ಡರ್‌ಗಳನ್ನು ಅಳವಡಿಸಿದೆ. ಈ ಮೂಲಕ ಬಹುದಿನಗಳಿಂದ ನಡೆಯುತ್ತಿದ್ದ ಅಳವಡಿಕೆ ಕಾರ್ಯವು ಪೂರ್ಣಗೊಂಡಿದ್ದು, ನಿರ್ಮಾಣ ಕಾರ್ಮಿಕರ ತಂಡ ಹರ್ಷ ವ್ಯಕ್ತಪಡಿಸಿದೆ.

ನೀರ್ಣಾಯಕ ಮೆಟ್ರೋ ನಿಲ್ದಾಣ
ನಮ್ಮ ಮೆಟ್ರೋ ವಿಮಾನ ನಿಲ್ದಾಣ ಯೋಜನೆಯ ಈ ಹಂತ 2B ಒಂದು ನಿರ್ಣಾಯಕ ವಿಸ್ತರಣೆ ಆಗಿದೆ. ಈ ಭಾಗದ ಜನರಿಗೆ, ನಿತ್ಯ ಓಡಾಡುವ ಲಕ್ಷಾಂತರ ಜನರಿಗೆ ಸುವ್ಯವಸ್ಥಿತ ಸಾರಿಗೆ ಸಂಪರ್ಕ ಒದಗಿಸುವ ಉದ್ದೇಶದಿಂದ ಯೋಜನೆ ಕೈಗೊಳ್ಳಲಾಗಿದೆ.
ನೀಲಿ ಮಾರ್ಗದಲ್ಲಿ 200ಯು ಗಿರ್ಡರ್‌ಗಳ ಅಳವಡಿಸಿದ ತಂಡವು ಮಾರ್ಗದಲ್ಲಿ 100 ಸ್ಪ್ಯಾನ್‌ಗಳನ್ನು ಪೂರ್ಣಗೊಳಿಸುವುದು, ನಿಗದಿತ ಸಮಯದೊಳಗೆ ಉತ್ತಮ ಗುಣಮಟ್ಟದ ಮೂಲ ಸೌಕರ್ಯವನ್ನು ಸ್ಥಾಪಿಸುವ ಅವರ ತಂಡ ಬದ್ಧತೆಯನ್ನು ಇದು ತೋರ್ಪಡಿಸುತ್ತದೆ.

ಕಾಮಗಾರಿಯ ಪ್ರಗತಿ ಸೂಚನೆ
ಅಳವಡಿಕೆಯಾದ ಈ 200ಯು-ಗಿರ್ಡರ್ ಎತ್ತರದ ಮೆಟ್ರೋ ರೈಲು ವ್ಯವಸ್ಥೆಗಳ ಅಗತ್ಯ ಘಟಕಗಳು, ಟ್ರ್ಯಾಕ್‌ಗಳ ಸಂಯೋಜನೆಯಲ್ಲಿ, ಎತ್ತರದ ವಿಭಾಗಗಳ ರಚನಾತ್ಮಕ ಸಮಗ್ರತೆಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.
200ಯು-ಗಿರ್ಡರ್ ಯಶಸ್ವಿ ಅಳವಡಿಕೆಯು ಕೇವಲ ಭೌತಿಕ ನಿರ್ಮಾಣದಲ್ಲಿ ಪ್ರಗತಿಯನ್ನು ಸೂಚಿಸುವ ಜೊತೆಗೆ ತಂಡದ ಕಾರ್ಯಕ್ಷಮತೆಯನ್ನು ಪ್ರದರ್ಶಿಸುತ್ತದೆ ಎಂದು ಮೆಟ್ರೋ ಮೂಲಗಳು ಮಾಹಿತಿ ನೀಡಿವೆ.
ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅಳವಡಿಕೆ
NCC ಪ್ಯಾಕೇಜ್ 2 ತಂಡವು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಈ ಯು-ಗಿರ್ಡರ್ ಅನ್ನು ನೀಲಿ ಮಾರ್ಗದಲ್ಲಿ ಸ್ಥಾಪಿಸಿದೆ. ಗರ್ಡರ್ ಸ್ಥಾಪನೆ ಪ್ರಕ್ರಿಯೆಯ ಉದ್ದಕ್ಕೂ ಅತ್ಯುನ್ನತ ಸುರಕ್ಷತಾ ಮಾನದಂಡಗಳಿಗೆ ಅನುಸರಿಸಲಾಗಿದೆ ಎಂದು ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.
ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗವು ಹಂತ 2ಬಿ ಯೋಜನೆಯ (ನೀಲಿ ಮಾರ್ಗ) ಒಂದು ಭಾಗವಾಗಿದೆ. ಬೆಂಗಳೂರು ವಿಮಾನ ನಿಲ್ದಾಣವು ಮೆಟ್ರೋ ಮೂಲಕ ನೇರ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಅಷ್ಟೇ ಅಲ್ಲದೇ ಈ ಮಾರ್ಗ ನಿರ್ಮಾಣಗೊಂಡರೆ ಪ್ರಯಾಣಿಕರು ಈ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಟರ್ಮಿನಲ್ 2 ಗೆ ನೇರವಾಗಿ ತೆರಳಲು ಅವಕಾಶವಾಗುತ್ತಿದೆ.












Click it and Unblock the Notifications