Namma Metro: ಏರ್‌ಪೋರ್ಟ್‌ ಮಾರ್ಗದಲ್ಲಿ 2 ನಿಲ್ದಾಣ ನಿರ್ಮಾಣವಾಗಲ್ಲ

ಬೆಂಗಳೂರು, ಸೆಪ್ಟೆಂಬರ್ 16: ಉದ್ಯಾನ ನಗರಿ ಬೆಂಗಳೂರಿನ ಜನರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸಂಪರ್ಕ ಯಾವಾಗ? ಎಂದು ಕಾದು ಕುಳಿತಿದ್ದಾರೆ. ಬಿಎಂಆರ್‌ಸಿಎಲ್ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು 'ನೀಲಿ' ಮಾರ್ಗದ ಕಾಮಗಾರಿ ಕೈಗೊಂಡಿದೆ. ಈಗ ಈ ಮಾರ್ಗದ ನಿಲ್ದಾಣದಲ್ಲಿ ಕೆಲವು ಬದಲಾಣೆ ಮಾಡಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಮ್ಮ ಮೆಟ್ರೋ ಮಾರ್ಗಕ್ಕೆ ಚಿಕ್ಕಜಾಲ ಮತ್ತು ಬೆಟ್ಟಹಲಸೂರು ನಿಲ್ದಾಣಗಳನ್ನು ವಿಳಂಬವಾಗಿ ಸೇರಿಸಲಾಗಿತ್ತು. ಡಿಪಿಆರ್‌ನಲ್ಲಿ ಇಲ್ಲದ ಈ ನಿಲ್ದಾಣಗಳನ್ನು ವಿವಿಧ ಒತ್ತಡದ ಕಾರಣ ಸೇರಿಸಲಾಗಿದ್ದು, ಇದರಿಂದಾಗಿ ಯೋಜನಾ ವೆಚ್ಚವೂ ಅಧಿಕವಾಗಿತ್ತು.

Namma Metro Bengaluru Airport Line Two Stations Dropped

ಆದರೆ ಈಗ ಅನುದಾನದ ಕೊರತೆಯ ಕಾರಣ ಈ ಎರಡೂ ನಿಲ್ದಾಣಗಳನ್ನು ಯೋಜನೆಯಿಂದ ಕೈಬಿಡಲಾಗಿದೆ. ಅಧಿಕಾರಿಗಳು ಚಿಕ್ಕಜಾಲ ನಿಲ್ದಾಣ ನಿರ್ಮಾಣಕ್ಕೆ 130 ಕೋಟಿ ಮತ್ತು ಬೆಟ್ಟಹಲಸೂರು ನಿಲ್ದಾಣ ನಿರ್ಮಾಣಕ್ಕೆ 140 ಕೋಟಿ ರೂ. ಅನುದಾನ ಬೇಕು ಎಂದು ಅಂದಾಜಿಸಿದ್ದರು.

ಅನುದಾನದ ಕೊರತೆ: ಬಿಎಂಆರ್‌ಸಿಎಲ್ ಬೆಂಗಳೂರು ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸಲು 'ನೀಲಿ' ಮಾರ್ಗವನ್ನು ವಿನ್ಯಾಸಗೊಳಿಸಿದೆ. 36.44 ಕಿ. ಮೀ. ಉದ್ದದ ಈ ಮಾರ್ಗವು 17 ನಿಲ್ದಾಣಗಳನ್ನು ಒಳಗೊಂಡಿದೆ. ಈ ಮಾರ್ಗದಲ್ಲಿ ಬಾಗಲೂರು ಕ್ರಾಸ್ ಮತ್ತು ದೊಡ್ಡಜಾಲ ನಿಲ್ದಾಣಗಳ ನಡುವೆ ಚಿಕ್ಕಜಾಲ ಮತ್ತು ಬೆಟ್ಟಹಲಸೂರು ನಿಲ್ದಾಣಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು.

ನಮ್ಮ ಮೆಟ್ರೋ 2ನೇ ಬಿ ಹಂತದ ಯೋಜನೆಯ ಡಿಪಿಆರ್‌ನಲ್ಲಿ ಚಿಕ್ಕಜಾಲ ಮತ್ತು ಬೆಟ್ಟಹಲಸೂರು ನಿಲ್ದಾಣಗಳು ಇರಲಿಲ್ಲ. ಆದರೆ ಸ್ಥಳೀಯರ ಒತ್ತಡ ಸೇರಿದಂತೆ ವಿವಿಧ ಕಾರಣಕ್ಕೆ ಈ ನಿಲ್ದಾಣಗಳನ್ನು ಬಳಿಕ ಸೇರಿಸಲಾಯಿತು. 2019ರ ಜನವರಿಯಲ್ಲಿ ರಾಜ್ಯ ಸಚಿವ ಸಂಪುಟ ಈ ಯೋಜನೆಗೆ ಒಪ್ಪಿಗೆ ನೀಡಿತ್ತು.

ಆದರೆ ಮೂಲ ಡಿಪಿಆರ್‌ನಲ್ಲಿ ಇಲ್ಲದ ಕಾರಣಕ್ಕೆ ಚಿಕ್ಕಜಾಲ ಮತ್ತು ಬೆಟ್ಟಹಲಸೂರು ನಿಲ್ದಾಣಗಳ ನಿರ್ಮಾಣಕ್ಕೆ ನಮ್ಮ ಮೆಟ್ರೋ ಯೋಜನೆ ನಿರ್ಮಾಣದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವೆಚ್ಚ ಹಂಚಿಕೆ ಅನ್ವಯವಾಗುತ್ತಿರಲಿಲ್ಲ. ಆದ್ದರಿಂದ ಸಂಪೂರ್ಣ ಅನುದಾನ ರಾಜ್ಯ ಸರ್ಕಾರದಿಂದಲೇ ಬರಬೇಕಿತ್ತು. ಈ ಅನುದಾನದ ಕುರಿತು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಕೆ ಮಾಡಿರುವ ಪ್ರಸ್ತಾವನೆ ವರ್ಷಗಳಿಂದಲೂ ಅನುಮತಿ ಸಿಗದೆ ಉಳಿದಿದೆ.

ಸರ್ಕಾರ ಈಗಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಈ ಎರಡು ನಿಲ್ದಾಣಗಳ ನಿರ್ಮಾಣಕ್ಕೆ ಅನುದಾನವನ್ನು ನೀಡುವುದಿಲ್ಲ. ಆದ್ದರಿಂದ ಬಿಎಂಆರ್‌ಸಿಎಲ್ ಚಿಕ್ಕಜಾಲ ಮತ್ತು ಬೆಟ್ಟಹಲಸೂರು ನಿಲ್ದಾಣಗಳನ್ನು ಹೊರತುಪಡಿಸಿ ಮೂಲ ಡಿಪಿಆರ್‌ ಮಾದರಿಯಲ್ಲಿಯೇ ಉಳಿದ ಕಾಮಗಾರಿಗಳನ್ನು ವೇಗವಾಗಿ ಮುಗಿಸುವತ್ತ ಗಮನಹರಿಸಿದೆ.

ಈ ಮಾರ್ಗದಲ್ಲಿ ಬೆಟ್ಟಹಲಸೂರು ನಿಲ್ದಾಣ ನಿರ್ಮಾಣಕ್ಕೆ ಎಂಬೆಸಿ ಗ್ರೂಪ್ ಆಸಕ್ತಿ ತೋರಿಸಿತ್ತು. Sprawling Embassy Boulevard Complex ನಿವಾಸಿಗಳಿಗೆ ಅನುಕೂಲವಾಗುವಂತೆ ಮೆಟ್ರೋ ನಿಲ್ದಾಣ ಮಾಡಬೇಕು ಎಂದು ಒತ್ತಾಯಿಸಲಾಗಿತ್ತು. ಆದರೆ ಈಗ ಗ್ರೂಪ್ ಸಹ ಅನುದಾನ ಒದಗಿಸಲು ಆಸಕ್ತಿ ತೋರಿಸುತ್ತಿಲ್ಲ. ಈ ನಿಲ್ದಾಣವೂ ಏರ್‌ಪೋರ್ಟ್‌ ಮಾರ್ಗದಲ್ಲಿ ನಿರ್ಮಾಣವಾಗುವುದಿಲ್ಲ. ಬಿಎಂಆರ್‌ಸಿಎಲ್ ಅಧಿಕಾರಿಗಳು ಈ ಕುರಿತು ಎಂಬೆಸಿ ಗ್ರೂಪ್ ಜೊತೆ ಇನ್ನೊಮ್ಮೆ ಚರ್ಚಿಸಲು ಸಹ ಬಯಸಿದ್ದಾರೆ.

ಏಪ್ರಿಲ್ 2020ರಲ್ಲಿ ಎಂಬೆಸಿ ಗ್ರೂಪ್ ಬೆಟ್ಟಹಲಸೂರು ನಿಲ್ದಾಣಕ್ಕೆ ಕೈ ಜೋಡಿಸಲು ಬಿಎಂಆರ್‌ಸಿಎಲ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಬಳಿಕ ಅದು ಹಿಂದೆ ಸರಿದ ಕಾರಣ 2022ರಲ್ಲಿ ನಿಲ್ದಾಣ ನಿರ್ಮಾಣ ಕೈಬಿಡಲಾಯಿತು. ಜುಲೈ 2023ರಲ್ಲಿ ಮತ್ತೆ ಗ್ರೂಪ್ ನಿಲ್ದಾಣ ನಿರ್ಮಾಣಕ್ಕೆ ಆಸಕ್ತಿ ತೋರಿಸಿತು. 140 ಕೋಟಿ ಅನುದಾನದ ಒಪ್ಪಂದ ಆಯಿತು, 1 ಕೋಟಿ ಟೋಕನ್ ಅಡ್ವಾನ್ ಸಹ ಪಾವತಿ ಮಾಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+