Bengaluru Metro: ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ, ನಿಲ್ದಾಣದಲ್ಲಿ ಶಿಕ್ಷಕಿಗೆ ಮೈ, ಕೈ ಮುಟ್ಟಿದ ಯುವಕ
ಬೆಂಗಳೂರು, ಡಿಸೆಂಬರ್ 29: ಬೆಂಗಳೂರಿಗರಿಗೆ ಆರಾಮದಾಯಕ ಸಾರಿಗೆ ಸೇವೆ ನೀಡುತ್ತಿರುವ ನಮ್ಮ ಮೆಟ್ರೋ (Bengaluru Namma Metro) ರೈಲಿನಲ್ಲಿ ಇತ್ತೀಚಿನ ದಿನಗಳಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳು ಆಗಾಗ ನಡೆಯುತ್ತಲೇ ಇದ್ದು, ಇವುಗಳಿಗೆ ಕಡಿವಾಣ ಹಾಕಬೇಕಿದೆ. ಇದೀಗ ಮತ್ತೊಂದು ಅಂತದ್ದೇ ಪ್ರಕರಣದಲ್ಲಿ ಶಿಕ್ಷಕಿಯೊಬ್ಬರು ಯುವಕನಿಂದ ಲೈಂಗಿಕ ಕಿರುಕುಳ ಎದುರಿಸಿದ ಘಟನೆ ನಡೆದಿದ್ದು, ಇದು ತಡವಾಗಿ ಬೆಳಕಿದೆ ಬಂದಿದೆ.
ಹೌದು, ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷಕಿಯೊಬ್ಬರಿಗೆ ಯುವಕ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವ್ಯಕ್ತಿಯನ್ನು ಮನೋಜ್ (26) ಎಂದು ಗುರುತಿಸಲಾಗಿದೆ. ಶಿಕ್ಷಕಿ ನೀಡಿದ ದೂರಿನ ಮೇರೆಗೆ ಉಪ್ಪಾರಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.

ಇದೇ ತಿಂಗಳ ಡಿಸೆಂಬರ್ 25ರಂದು ಶಿಕ್ಷಕಿಯೊಬ್ಬರು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಯುವಕನಿಂದ ಲೈಂಗಿಕ ಕಿರುಕುಳ ಎದುರಿಸಿದ್ದಾರೆ. ಇವರು ಮೂಲತಃ ಶಂಕರಪುರ ಬಡಾವಣೆ ನಿವಾಸಿಯಾಗಿದ್ದು, ಘಟನೆ ದಿನ ಇವರು ವೈಟ್‌ಫಿಲ್ಡ್‌ಗೆ ಹೊರಟಿದ್ದರು. ಈ ಸಂಬಂಧ ಅವರು ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಿದ್ದರು. ಅದೇ ರೈಲಿನಲ್ಲಿ ಆರೋಪಿ ಮನೋಜ್ ಸಹ ಸಂಚರಿಸುತ್ತಿದ್ದ.
ಕೈ,ಮೈ ಮುಟ್ಟಿ ಅಸಭ್ಯ ವರ್ತನೆ
ಮೆಜೆಸ್ಟಿಕ್ ಜಂಕ್ಷನ್‌ನಲ್ಲಿ ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ರೈಲು ಬದಲಿಸಲು ಇಳಿದಾಗ ಈ ಮನೋಜ್ ಆ ಶಿಕ್ಷಕಿಯ ಮೈ, ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಇದರ ವಿರುದ್ಧ ಶಿಕ್ಷಕಿ ಕೂಡಲೇ ಮೆಟ್ರೋ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಆಗ ಸಿಬ್ಬಂದಿ ಅರೋಪಿಯನ್ನು ಹಿಸಿದು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದರು.
ಆರೋಪಿಯು ಮದ್ಯದ ಅಮಲಿನಲ್ಲಿದ್ದು, ಈ ಕೃತ್ಯ ನಡೆಸಿದ್ದಾನೆ ಎಂಬುದು ಪತ್ತೆ ಆಗಿದೆ. ಹೀಗಾಗಿ ಆತನಿಗೆ ಎಚ್ಚರಿಕೆ ಕೊಟ್ಟು, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ನವೆಂಬರ್ ತಿಂಗಳಲ್ಲಿ ಕಿರುಕುಳ ಘಟನೆ
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಜನರು ತುಂಬಿ ತುಳುಕುತ್ತಿದ್ದರು. ಈ ವೇಳೆ ಗುಂಪಿನಲ್ಲಿ ರೈಲು ಏರುವಾಗಿ ಹಿಂದಿನಿಂದ ವ್ಯಕ್ತಿಯೊಬ್ಬರು ಅವರನ್ನು ಮುಟ್ಟಿದ್ದಾರೆ. ಕೂಡಲೇ ಯುವತಿಗೆ ಅರಿವಿಗೆ ಬರದಿದ್ದರೂ, ನಂತರ ಅವರು ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಯುವತಿ ಸ್ನೇಹಿತರ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಡಿ. 8ರಂದು ರಾಜಾಜಿನಗರದಲ್ಲಿ ಘಟನೆ
ಈ ದಿನದಿಂದು ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಿದ್ದ 22 ವರ್ಷದ ಯುವತಿಯ ಕೈ, ಮೈಯಿ ಮುಟ್ಟಿದ್ದ ಆರೋಪಿ ಲೋಕೇಶ್ ಎಂಬಾತ ಪರಾರಿಯಾಗಲು ಯತ್ನಿಸಿದ್ದ. ಕೂಡಲೇ ಭದ್ರತಾ ಸಿಬ್ಬಂದಿಯು ಆತನನ್ನು ಹಿಡಿದು ಹತ್ತಿರ ಪೊಲೀಸ ಠಾಣೆಗೆ ನೀಡಿದ್ದರು. ಇಂತಹ ಘಟನೆಗಳು ನಮ್ಮ ಮೆಟ್ರೋ ನಿಲ್ದಾಣದಲ್ಲಿ ಮರುಕಳಿಸುತ್ತಲೇವೆ. ಮಹಿಳಾ ಸುರಕ್ಷತೆಗಾಗಿಯೇ ಮೆಟ್ರೋ ಪ್ಯಾನಿಕ್ ಬಟನ್, ಸಹಾಯವಾಣಿ ಆರಂಭಿಸಿದೆ. ಈ ಬಗ್ಗೆ ಪ್ರತಿ ಮಹಿಳೆಯು ಮಾಹಿತಿ ಪಡೆಯಬೇಕು. ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕು ಎಂಬುದು ನಮ್ಮ ಮೆಟ್ರೋ ಕಳಕಳಿಯಾಗಿದೆ.












Click it and Unblock the Notifications