ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ: ನಾಗಾಲ್ಯಾಂಡ್ ಮೂಲದ ಯುವತಿ ಬಂಧನ

ಬೆಂಗಳೂರು, ಜನವರಿ 5: ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಗಾಲ್ಯಾಂಡ್ ಮೂಲದ ಯುವತಿಯನ್ನು ಶುಕ್ರವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕ್ಯಾಟಿ ರೂಡಿ(29) ಬಂಧಿತ ಮಹಿಳೆ, ಮಸಾಜ್ ಪಾರ್ಲರ್ ತೆರೆದು ವೇಶ್ಯಾವಾಟಿಕೆ ನಡೆಸುತ್ತಿದ್ದಳು, ಪೊಲೀಸರು ಮೂವರು ಯುವತಿಯರನ್ನು ರಕ್ಷಿಸಿದ್ದಾರೆ. ಆರೋಪಿ ಜಯನಗರದ 9ನೇ ಬ್ಲಾಕ್‌ನ ಕಟ್ಟಡವೊಂದರಲ್ಲಿ ಸ್ಪಾ ನಡೆಸುತ್ತಿದ್ದಳು. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Nagaland woman arrested for prostitution at Spa in Bengaluru

ನಾಗಾಲ್ಯಾಂಡ್‌ ಕೊಹಿಮಾ ಜಿಲ್ಲೆಯ ಕ್ಯಾಟಿ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದಳು, ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಸ್ಥಳೀಯ ಹುಡುಗಿಯರನ್ನು ಪರಿಚಯಿಸಿಕೊಂಡಿದ್ದಳು. ನಂತರ ಕೆಲಸ ಕೊಡಿಸುವುದಾಗಿ ಕರೆಸಿ ದುಡ್ಡಿನ ಆಮಿಷವೊಡ್ಡಿ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದಳು. ಗಿರಾಕಿಗಳಿಂದ ಹೆಚ್ಚಿನ ಹಣ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದಳು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+