• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮ್ಮಿಶ್ರ ಸರ್ಕಾರ ಬೀಳಿಸುವುದರಲ್ಲಿ ನನ್ನ ಸಣ್ಣ ಪಾತ್ರ ಇತ್ತು: ಎಸ್‌ಎಂ ಕೃಷ್ಣ

|
Google Oneindia Kannada News

Recommended Video

   Ex CM S M Krishna press meet in BJP office | Oneindia Kannada

   ಬೆಂಗಳೂರು, ಡಿಸೆಂಬರ್ 3: ಸಮ್ಮಿಶ್ರ ಸರ್ಕಾರವನ್ನು ಬೀಳಿಸುವುದರಲ್ಲಿ ನನ್ನದು ಸಣ್ಣ ಪಾತ್ರವಿತ್ತು ಎಂದು ಬಿಜೆಪಿ ಹಿರಿಯ ಮುಖಂಡ ಎಸ್‌ಎಂ ಕೃಷ್ಣ ಹೇಳಿದ್ದಾರೆ.

   ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸರ್ಕಾರ ಬೀಳಿಸಿದ್ದು ನಾನೇ ಅಂತಾ ನಾನು ಎಲ್ಲಿಯೂ ಹೇಳಿಲ್ಲ. ಬೀಳಿಸುವುದರಲ್ಲಿ ನನ್ನ ಸಣ್ಣ ಪಾತ್ರವೂ ಇದೆ ಅಂತಾ ಹೇಳಿದ್ದೆ, ಈಗಲೂ ಅದೇ ಹೇಳುತ್ತೇನೆ ಎಂದರು.

   ಶಾಸಕರ ರಾಜೀನಾಮೆ ಕೊಡಿಸಿದವರಲ್ಲಿ ನಾನೂ ಒಬ್ಬ: ಎಸ್‌.ಎಂ.ಕೃಷ್ಣಶಾಸಕರ ರಾಜೀನಾಮೆ ಕೊಡಿಸಿದವರಲ್ಲಿ ನಾನೂ ಒಬ್ಬ: ಎಸ್‌.ಎಂ.ಕೃಷ್ಣ

   ನಾನೂ ಕೂಡಾ ಬೇರೆ ಸಂಸ್ಕೃತಿಯಲ್ಲಿ ಬೆಳೆದು ಬಂದವನು, ನಾನು ಈಗ ಬಿಜೆಪಿಯಲ್ಲಿ ಒಡನಾಟ ಇಟ್ಟುಕೊಂಡಿದ್ದೇನೋ ಅದೇ ರೀತಿ ಗೆದ್ದು ಬರುವ ಶಾಸಕರು ಪಕ್ಷದಲ್ಲಿ ಒಡನಾಟ ಇಟ್ಟುಕೊಳ್ಳುತ್ತಾರೆ.

   ಯಡಿಯೂರಪ್ಪ ಸರ್ಕಾರ ಮೂರೂವರೆ ವರ್ಷ ಪೂರ್ಣಗೊಳಿಸುತ್ತದೆ. ಮಹಾರಾಷ್ಟ್ರದಲ್ಲಿ ಪಕ್ಷಾಂತರ ಮಾಡಿದ ಶಾಸಕರು ಗೆಲ್ಲುವುದಿಲ್ಲ ಎಂಬ ಉದಾಹರಣೆಗೆ ಕರ್ನಾಟಕಕ್ಕೆ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಮರು ಮೈತ್ರಿ ಬಗ್ಗೆ ಕಾಂಗ್ರೆಸ್-ಜೆಡಿಎಸ್ ನಾಟಕ

   ಮರು ಮೈತ್ರಿ ಬಗ್ಗೆ ಕಾಂಗ್ರೆಸ್-ಜೆಡಿಎಸ್ ನಾಟಕ

   ನನ್ನ ಯೋಗಕ್ಷೇಮ ವಿಚಾರಿಸಲು ಬಂದವರೊಂದಿಗೆ ನಾನು ರಾಜ್ಯದ ಯೋಗಕ್ಷೇಮ ಮಾತಾಡಿದ್ದೇನೆ. ಮರು ಮೈತ್ರಿಯ ಬಗ್ಗೆ ಕಾಂಗ್ರೆಸ್, ಜೆಡಿಎಸ್ ನಾಟಕ ಅಂತಾ ಹೇಳಿದ್ದೇನೆ.ವಿಪಕ್ಷದಲ್ಲಿರುವವರು ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುತ್ತಿದ್ದಾರೆ.ಕೆಲವರಿಗೆ ಮಧ್ಯಂತರ ಚುನಾವಣೆ ಬೇಕು.ಇನ್ನು ಪಕ್ಷ ಬೀಳಿಸುವ ಬಗ್ಗೆ ಮಾತಾಡುತ್ತಿದ್ದಾರೆ. ಆದರೆ ಅವರಿಗೆ ಶಕ್ತಿ ಬೇಕಲ್ವಾ ಎಂದು ಪ್ರಶ್ನಿಸಿದರು.

    ನಮ್ಮದು ಯಡಿಯೂರಪ್ಪ ಸರ್ಕಾರ ಗಟ್ಟಿಯಾಗಿಸುವ ಕನಸು

   ನಮ್ಮದು ಯಡಿಯೂರಪ್ಪ ಸರ್ಕಾರ ಗಟ್ಟಿಯಾಗಿಸುವ ಕನಸು

   ಯಡಿಯೂರಪ್ಪ ಸರ್ಕಾರವನ್ನು ಗಟ್ಟಿಯಾಗಿಸುವ ಕನಸ್ಸನ್ನು ನಾವು ಕಾಣುತ್ತಿದ್ದೇವೆ, ಆದರೆ ವಿರೋಧ ಪಕ್ಷದವರು ಹಗಲು ಕನಸು ಕಾಣುತ್ತಿದ್ದಾರೆ. ನನಗೆ ಸಮ್ಮಿಶ್ರ ಸರ್ಕಾರದ ಬಗ್ಗೆ ಯಾವುದೇ ವ್ಯಕ್ತಿಗತ ಅಸಮಾಧಾನ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

    ಅವಸರದ ತೀರ್ಮಾನ ಕಾಲಾತೀತ ಆಗುವುದಿಲ್ಲ

   ಅವಸರದ ತೀರ್ಮಾನ ಕಾಲಾತೀತ ಆಗುವುದಿಲ್ಲ

   ಸಮ್ಮಿಶ್ರ ಸರ್ಕಾರ ಅವಸರದಿಂದ ತೆಗೆದುಕೊಂಡ ತೀರ್ಮಾನ,ಅವಸರದ ತೀರ್ಮಾನ ಕಾಲಾತೀತ ಆಗುವುದಿಲ್ಲ.ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ, ಹಾಗಾಗಿ ತನಿಖೆ ಮುಗಿಯುವವರೆಗೆ ಕಾಯಬೇಕಾಗುತ್ತದೆ ಎಂದರು.

    ಮಾಧುಸ್ವಾಮಿ ಜಾತಿ ಆಧಾರದಲ್ಲಿ ಮತ ಕೇಳಿಲ್ಲ

   ಮಾಧುಸ್ವಾಮಿ ಜಾತಿ ಆಧಾರದಲ್ಲಿ ಮತ ಕೇಳಿಲ್ಲ

   ನನಗೆ ತಿಳಿದಂತೆ ಯಡಿಯೂರಪ್ಪ ಅಥವಾ ಮಾಧುಸ್ವಾಮಿ ಜಾತಿ ಆಧಾರದಲ್ಲಿ ಮತ ಕೇಳಿಲ್ಲ.ನಾವೆಲ್ಲರೂ ಬಿಜೆಪಿಗೆ ಮತ ಕೊಡಿ ಅಂತಾನೇ ಕೇಳುತ್ತೇವೆ.ಬಿಜೆಪಿ ಸರ್ಕಾರವನ್ನು ಬೀಳಿಸುವುದಿಲ್ಲ ಎಂದು ಯಾರಾದರೂ ಹೇಳಿದರೆ ಅದನ್ನು ನಾನು ಸ್ವಾಗತಿಸುತ್ತೇನೆ .ಮಾಜಿ ಪ್ರಧಾನಿ ಬಾಯಿಂದ ಬಂದಿರುವ ಮಾತಿಗೆ ಕಿಮ್ಮತ್ತು ಇರಬೇಕು ಅಂತಾ ನಂಬುವವರಲ್ಲಿ ನಾನೂ ಒಬ್ಬ ಎಂದು ಹೇಳಿದರು.

   English summary
   Senior BJP leader SM Krishna said I had played a small role in bringing down the coalition government.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X