ಹಲಾಲ್ ಮಾಂಸ ನಮ್ಮ ದೇವರಿಗೆ ಎಂಜಲು; ಸಿ.ಟಿ. ರವಿ

ಬೆಂಗಳೂರು, ಮಾರ್ಚ್ 29: ಹಲಾಲ್ ಅನ್ನುವುದು ಆರ್ಥಿಕ ಜಿಹಾದ್‌ಗೆ ಸಮಾನವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಬೆಂಗಳೂರಿನ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಲವು ಹಿಂದೂ ಗುಂಪುಗಳು ಈಗ ಹಲಾಲ್ ಮಾಂಸವನ್ನು ಬಹಿಷ್ಕರಿಸುವಂತೆ ಕರೆ ನೀಡುತ್ತಿವೆ. ಕಳೆದ ಕೆಲವು ದಿನಗಳಿಂದ, ಸಾಮಾಜಿಕ ಮಾಧ್ಯಮಗಳಲ್ಲಿ ಹಲಾಲ್ ಮಾಂಸವನ್ನು ದೂರವಿಡುವಂತೆ ಹಿಂದೂಗಳಿಗೆ ಮನವಿ ಮಾಡುವ ಸಂದೇಶಗಳ ಮಹಾಪೂರವೇ ಇತ್ತು ಎಂದರು.

"ವಿಶೇಷವಾಗಿ ಹಿಂದೂಗಳ ಹೊಸ ವರ್ಷದ ಹಬ್ಬವಾದ ಯುಗಾದಿಯ ಒಂದು ದಿನದ ನಂತರ, ಮಾಂಸಾಹಾರಿ ಹಿಂದೂಗಳ ಒಂದು ವಿಭಾಗವು ದೇವರಿಗೆ ಮಾಂಸವನ್ನು ಅರ್ಪಿಸಿ ಹೊಸ ವರ್ಷವನ್ನು ಆಚರಿಸುತ್ತಾರೆ. ಬಲಪಂಥೀಯ ಕಾರ್ಯಕರ್ತರು ಈಗ ಆಚರಣೆಯನ್ನು ಬಿಟ್ಟುಬಿಡುವಂತೆ ಜನರನ್ನು ಕೇಳುತ್ತಿದ್ದಾರೆ''.

Muslims Halal Meat is Economic Jihad Says BJP National General Secretary CT Ravi

ಹಲಾಲ್ ಮಾಂಸಕ್ಕೆ ಹಿಂದೂ ಸಂಘಟನೆಗಳು ಬಹಿಷ್ಕಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಆರ್ಥಿಕ ಜಿಹಾದ್ ಅಂದರೆ ಮುಸ್ಲಿಮರು ಇನ್ನೊಬ್ಬರ ಜೊತೆ ವ್ಯಾಪಾರ ಮಾಡಬಾರದು ಎಂದು ಒಂದು ಎಕಾನಾಮಿಕ್ ಜಿಹಾದ್ ತರಹ ಉಪಯೋಗಿಸುತ್ತಾರೆ. ಹಲಾಲ್ ಮಾಂಸವನ್ನು ಉಪಯೋಗಿಸಬಾರದು ಅಂದರೆ ತಪ್ಪೇನು. ಹಲಾಲ್ ಮಾಂಸ ಅವರ ದೇವರಿಗೆ ಒಪ್ಪಿಸಿದ್ದು, ಅವರಿಗೆ ಪ್ರಿಯ, ಆದರೆ ನಮ್ಮ ದೇವರಿಗೆ ಎಂಜಲು ಎಂದು ಹೇಳಿದರು.

"ಹಲಾಲ್ ಮಾಂಸ ಉಪಯೋಗಿಸಿ ಅಂತ ಹೇಳುವುದಕ್ಕೆ ಹೇಗೆ ಹಕ್ಕು ಇದೆಯೋ ಹಾಗೆ, ಅದನ್ನು ಬಹಿಷ್ಕರಿಸಿ ಅಂತ ಹೇಳುವ ಹಕ್ಕು ನಮಗೆ ಇದೆ. ಹಲಾಲ್ ಅಂದರೆ ಮುಸ್ಲಿಂರ ಧಾರ್ಮಿಕ ಕ್ರಿಯೆ, ಅದು ಅವರಿಗೆ ಪ್ರಿಯವಾಗಿರುತ್ತದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಅಂತೆನಾದರೂ ಇದೆಯಾ. ಸಾಮರಸ್ಯವನ್ನು ಹೇರುವುದಕ್ಕೆ ಬರುವುದಿಲ್ಲ, ಹಾಗಂತ ಸಾಮರಸ್ಯ ಒನ್ ವೇ ಅಲ್ಲ, ಅದು ಟೂ ವೇ," ಎಂದು ತಿಳಿಸಿದರು.

ಮುಸ್ಲಿಮರು ಹಿಂದೂಗಳಿಂದ ಮಾಂಸವನ್ನು ಖರೀದಿಸಲು ನಿರಾಕರಿಸಿದಾಗ, ಹಿಂದೂಗಳು ಅವರಿಂದ ಖರೀದಿಸಲು ನೀವು ಏಕೆ ಒತ್ತಾಯಿಸಬೇಕು? ಇದನ್ನು ಕೇಳಲು ಅವರಿಗೆ ಯಾವ ಹಕ್ಕಿದೆ? ಎಂದು ಸಿ.ಟಿ. ರವಿ ಪ್ರಶ್ನಿಸಿದರು.

Muslims Halal Meat is Economic Jihad Says BJP National General Secretary CT Ravi


ಈ ಮಧ್ಯೆ, ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಇಂತಹ ಪ್ರವೃತ್ತಿಗಳನ್ನು ಖಂಡಿಸಿದ್ದು, "ಸರ್ವ ಜನಾಂಗದ ಶಾಂತಿ ಮತ್ತು ನಂಬಿಕೆಯ ತೋಟ ಆಗಿರುವ ರಾಜ್ಯವನ್ನು ಹಾಳು ಮಾಡಬೇಡಿ," ಎಂದು ಹಿಂದೂಗಳಿಗೆ ಕೇಳಿಕೊಂಡಿದ್ದಾರೆ.

"ನೀವು ರಾಜ್ಯವನ್ನು ಎಲ್ಲಿಗೆ ಕರೆದೊಯ್ಯಲು ಬಯಸುತ್ತೀರಿ ಎಂದು ನಾನು ಸರ್ಕಾರವನ್ನು ಕೇಳಲು ಬಯಸುತ್ತೇನೆ. ರಾಜ್ಯವನ್ನು ಹಾಳು ಮಾಡಬೇಡಿ ಎಂದು ನಾನು ಕೈಮುಗಿದ ಹಿಂದೂ ಯುವಕರನ್ನು ಕೇಳುತ್ತೇನೆ," ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

"ಮುಂದೆ ಸಂಕಷ್ಟದ ದಿನಗಳು ಬರುವುದರಿಂದ ಶಾಂತಿ ಕದಡುವವರಿಂದ ಯುವಕರು ದೂರವಿರಬೇಕು ಎಂದು ಮನವಿ ಮಾಡಿದರು. ಕೋಮು ರಾಜಕೀಯದ ಏರಿಕೆಗೆ ಜೆಡಿಎಸ್ ಪಕ್ಷವು ಕಾಂಗ್ರೆಸ್ ಅನ್ನು ಹೊಣೆಗಾರರನ್ನಾಗಿ ಮಾಡಿದೆ".

ಇಂತಹ ಸರ್ಕಾರವನ್ನು ಕಾಂಗ್ರೆಸ್ ರಾಜ್ಯದಲ್ಲಿ ತಂದಿದ್ದು, ಈಗ ಬಿಜೆಪಿ ಸರಕಾರವನ್ನು ಅನೈತಿಕ ಎಂದು ಕಾಂಗ್ರೆಸ್ ಹೇಳುತ್ತಿದೆ. ಅದಕ್ಕೆ ಯಾರು ಹೊಣೆ? ಸದ್ಯದ ಪರಿಸ್ಥಿತಿಗೆ ಜೆಡಿಎಸ್ ಅಥವಾ ಎಚ್‌.ಡಿ. ಕುಮಾರಸ್ವಾಮಿ ಹೊಣೆಗಾರರಲ್ಲ. ಕಾಂಗ್ರೆಸ್‌ನ ಚಿತ್ರಹಿಂಸೆಯಿಂದ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದರು.

Muslims Halal Meat is Economic Jihad Says BJP National General Secretary CT Ravi

ಇದೇ ವೇಳೆ ಕೆ. ಮರಳುಸಿದ್ದಪ್ಪ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಬೊಳ್ವಾರ್ ಮಹಮದ್ ಕುಂಞ, ಡಾ. ವಿಜಯಾ ಸೇರಿದಂತೆ ರಾಜ್ಯದ 61 ಪ್ರಗತಿಪರ ಚಿಂತಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಧಾರ್ಮಿಕ ದ್ವೇಷ ತಡೆಯುವಂತೆ ಮನವಿ ಮಾಡಿದ್ದಾರೆ.

"ಸರ್ವ ಜನಾಂಗದ ಶಾಂತಿಯ ತೋಟವೆಂದು ನಾಡಗೀತೆ ಹಾಡಿರುವ ಈ ನೆಲದಲ್ಲಿ ಉದ್ದೇಶಪೂರ್ವಕವಾಗಿ ಧಾರ್ಮಿಕ ದ್ವೇಷವನ್ನು ಹುಟ್ಟುಹಾಕುವುದು ನಾಚಿಕೆಗೇಡಿನ ಕೆಲಸ," ಎಂದು ಪ್ರಗತಿಪರ ಚಿಂತಕರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಹಬ್ಬಗಳು ರಾಜ್ಯದಾದ್ಯಂತ ನಡೆಯುತ್ತವೆ ಮತ್ತು ಎಲ್ಲಾ ಆರ್ಥಿಕ ಮತ್ತು ಸಾಂಸ್ಕೃತಿಕ ಆಯಾಮಗಳು ಯಾವುದೇ ಮುಸ್ಲಿಂ ಸಂಬಂಧಿಕರನ್ನು ಶ್ರೀಮಂತರನ್ನಾಗಿ ಮಾಡುವುದಿಲ್ಲ ಎಂದು ಅವರು ಹೇಳಿದರು.

Recommended Video

      ಡಿನೋಟಿಫಿಕೇಷನ್ ಕೇಸ್ - ಯಡಿಯೂರಪ್ಪ ಗೆ ದೊಡ್ಡ ತಲೆ ನೋವು ! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+