ಬಕ್ರೀದ್ ಹಬ್ಬದ ಸಂಭ್ರಮದಲ್ಲಿ ಮುಸಲ್ಮಾನ ಬಾಂಧವರು
ಬೆಂಗಳೂರು, ಸೆಪ್ಟೆಂಬರ್, 25 : ಒಂದೆಡೆ ಮೆಕ್ಕಾದ ಮಿನಾ ಎಂಬಲ್ಲಿ ಹಜ್ ಯಾತ್ರೆಗೆ ತೆರಳಿದ ಮುಸಲ್ಮಾನ ಬಾಂಧವರು ಕಾಲ್ತುಳಿತಕ್ಕೆ ಸಿಕ್ಕಿ ನಾಲ್ವರು ಭಾರತೀಯರು ಸೇರಿದಂತೆ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಕೆಲವು ದಿನಗಳ ಹಿಂದೆ ಮೆಕ್ಕಾ ಮಸೀದಿ ಮೇಲೆ ಕ್ರೇನ್ ಬಿದ್ದ ಪರಿಣಾಮ ಸಾವಿರಾರು ಮಂದಿ ಮರಣ ಹೊಂದಿದ್ದಾರೆ.
ಇನ್ನೊಂದೆಡೆ ದೇಶಾದ್ಯಂತ ಮುಸಲ್ಮಾನರು ಈದ್ ಮಿಲಾದ್ ಹಬ್ಬದ ಸಡಗರದಲ್ಲಿ ತೊಡಗಿದ್ದಾರೆ. ಈ ನಿಮಿತ್ತ ಟಗರು, ಕುರಿ ಹಾಗೂ ಒಣ ಹಣ್ಣುಗಳ ವ್ಯಾಪಾರ ಭರಾಟೆ ಜೋರಾಗಿಯೇ ನಡೆದಿದೆ. ಒಟ್ಟಿನಲ್ಲಿ ಈ ವರ್ಷ ಮುಸಲ್ಮಾನ ಬಾಂಧವರಿಗೆ ಸಿಹಿಗಿಂತ ಮಿಗಿಲಾಗಿ ಕಹಿಯೇ ದೊರೆಯುತ್ತಿದೆ.[ಭಾರತದ ಮೆಣಸಿನಕಾಯಿಗೆ ನಿಷೇಧ ಹೇರಿದ ಸೌದಿ ಅರೇಬಿಯಾ]
ನಗರದಲ್ಲಿ ಭಾರತೀಯ ಕ್ರಿಕೆಟಿಗರ ತಂಡ ದಕ್ಷಿಣ ಆಫ್ರಿಕಾದ ವಿರುದ್ಧದ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಜ್ಜಾಗುತ್ತಿದೆ. ಆಫ್ರಿಕಾ ತಂಡ ಮಣಿಸಲು ಬೇಕಾಗಿರುವ ಪೂರ್ವಭಾವಿ ಅಭ್ಯಾಸಕ್ಕಾಗಿ ಕ್ರಿಕೆಟಿಗರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಆದಾಯ ತೆರಿಗೆ ಇಲಾಖೆಯು ಕೋಟ್ಯಾಂತರ ಹಣವನ್ನು ತಮ್ಮ ಹತೋಟಿಗೆ ತೆಗೆದುಕೊಂಡಿದೆ. ಗುಜರಾತಿನ ಮೀಸಲಾತಿ ಹೋರಾಟದ ನೇತೃತ್ವ ವಹಿಸಿದ್ದ ಹಾರ್ದಿಕ್ ಪಟೇಲ್ ಗುಜರಾತಿನ ಹೈಕೋರ್ಟಿಗೆ ತೆರಳಿದ್ದಾರೆ.

ಪ್ರಾರ್ಥನೆಯಲ್ಲಿ ಮಗ್ನರಾದ ಮುಸಲ್ಮಾನ ಮಹಿಳೆಯರು
ನಾಡಿನಾದ್ಯಂತ ಬಕ್ರೀದ್ ಹಬ್ಬ ಆಚರಣೆ ಬಹಳ ಸಂತಸ ಸಡಗರದಿಂದ ನಡೆದಿದ್ದು, ಹಬ್ಬದ ದಿನ ಮುಂಜಾನೆ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಮಹಿಳೆಯರು ಕ್ಯಾಮರದ ಕಣ್ಣಿಗೆ ಕಂಡದ್ದು ಹೀಗೆ.

ಸುರೇಶ್ ರೈನಾ ಸ್ವಲ್ಪ ನಿಧಾನ ನಗ್ರೀ
ಭಾರತ ತಂಡವು ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯುವ ಹಲವು ಪಂದ್ಯಾವಳಿಯಲ್ಲಿ ಅಕ್ಟೋಬರ್ 2ರಂದು ಟಿ-20 ಪಂದ್ಯ ಆರಂಭವಾಗಲಿದೆ. ಈ ನಿಮಿತ್ತ ಪೂರ್ವ ಭಾವಿ ಅಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದೆ. ತರಬೇತಿಯಲ್ಲಿರುವ ತಂಡ ಕ್ರೀಡಾಂಗಣದಲ್ಲಿನ ಅಭ್ಯಾಸದಿಂದ ಉಂಟಾದ ದಣಿವನ್ನು ಕಡಿಮೆ ಮಾಡಿಕೊಳ್ಳಲು ತರಬೇತುದಾರ ಸಂಜೀವ್ ಬಂಗಾರ್ ಅವರೊಂದಿಗೆ ಎಂ.ಎಸ್ ಧೋನಿ, ಸುರೇಶ್ ರೈನಾ, ಮೋಹಿತ್ ಶರ್ಮ 'ಕಿಸ್ ಕಿಸ್ ಸೆ ಪ್ಯಾರ್ ಕರು' ಎಂಬ ಹಿಂದಿ ಸಿನಿಮಾ ವೀಕ್ಷಣೆ ಸಂದರ್ಭದಲ್ಲಿ ಭಾರತೀಯ ಕ್ರಿಕೆಟಿಗರು ಕಂಡ ಬಗೆ.

ಝಣ ಝಣ ಕಾಂಚಾಣ
ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಆದಾಯ ತೆರಿಗೆ ಇಲಾಖೆಯು ಬೀರು, ಗೋಣಿ ಚೀಲದಲ್ಲಿ ತುಂಬಿಟ್ಟಿದ್ದ ಕೊಲ್ಕತ್ತಾದಲ್ಲಿ ಸುಮಾರು 45ಕೋಟಿ ರೂ ವನ್ನು ಕಲ್ಕತ್ತಾದಲ್ಲಿ ವಶಪಡಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ತನಿಖೆ ಕೈಗೊರ್ಳಳು ವಿಶೇಷ ಅಧಿಕಾರಿಗಳನ್ನು ನೇಮಿಸಲಾಗಿದೆ.

ಸಮಾಜ ಸೇವೆಯೇ ಜೀವನ
ಮುಸಲ್ಮಾನ ಬಾಂಧವರು ಹಜ್ ಯಾತ್ರೆ ವೇಳೆಯಲ್ಲಿ ಕಾಲ್ಉಳಿತಕ್ಕೆ ತುತ್ತಾಗಿದ್ದು, ಭಾರತೀಯರು ಒಳಗೊಂಡಂತೆ 717ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಕೆಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಶುಶ್ರೂಷೆ ಮಾಡುತ್ತಿರುವ ಸೇವಾ ಸಿಬ್ಬಂಧಿ

ಒಣಹಣ್ಣುಗಳ ಸಂತೆ
ಮುಸಲ್ಮಾನ ಬಾಂಧವರ ಹಬ್ಬ ಹರಿದಿನದ ಸಂದರ್ಭದಲ್ಲಿ ಒಣಗಣ್ಣುಗಳು ತೀವ್ರವಾಗಿಯೇ ಮಾರಾಟಗೊಳ್ಳುತ್ತದೆ. ಒಣಹಣ್ಣು ಇಡೀ ದೇಹವನ್ನು ಸದಾ ಉಲ್ಲಾಸ ಭರಿತವನ್ನಾಗಿ ಮಾಡುತ್ತದೆ ಎಂದು ನಂಬಿದ್ದರಿಂದ ಒಣಹಣ್ಣುಗಳು ಇವರ ಹಬ್ಬದ ದಿನಗಳಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತದೆ. ಈದ್ ಮಿಲಾದ್ ಪ್ರಯುಕ್ತ ಒಣಹಣ್ಣುಗಳ ಮಾರಾಟದಲ್ಲಿ ನಿರತವಾದ ಮಹಿಳೆ

ಶಾಂತಿದೂತನಾಗಿ ಹಾರ್ದಿಕ್ ಪಟೇಲ್
ಸುಮಾರು ದಿನಗಳಿಂದ ನಡೆಯುತ್ತಿದ್ದ ಪಟೇಲ್ ಸಮುದಾಯದ ಮೀಸಲಾತಿ ಹೋರಾಟ ಸ್ವಲ್ಪ ಶಾಂತಿ ಪಡೆದುಕೊಂಡಿದೆ. ಇದರ ಸಂಚಾಲಕನಾದ ಹಾರ್ದಿಕ್ ಪಟೇಲ್ ಅವರು ಗುಜರಾತಿನ ಹೈಕೋರ್ಟ್ ಗೆ ಶಾಂತಿ ಧೂತನಾಗಿ ತೆರಳುತ್ತಿದ್ದಾರೆ

ಇದು ನನ್ನ ಕುರಿ
ಇಂದು ಬಕ್ರೀದ್ ಹಬ್ಬದ ಪ್ರಯುಕ್ತ ಕುರಿ ಟಗರು ಗಳ ಮಾರಾಟ ಜೋರಾಗಿ ನಡೆಯುತ್ತಿದ್ದು, ಕುರಿ ಟಗರುಗಳನ್ನು ಮಾರುತ್ತಿರುವ ಬಾಲಕ.












Click it and Unblock the Notifications