ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸಿಎಂ ಪರಮೇಶ್ವರ್‌ಗೆ ಇದೇನಿದು ಬಹುಮಹಡಿ ಕಟ್ಟಡದ ಕನಸು

|
Google Oneindia Kannada News

ಬೆಂಗಳೂರು, ನವೆಂಬರ್ 5: ಬಿಡಿಎ ಬಹುಮಹಡಿ ನಿರ್ಮಾಣಕ್ಕೆ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಚಿಂತನೆ ನಡೆಸಿದ್ದಾರೆ. ಪರಮೇಶ್ವರ ಅವರಿಗೆ ಕಟ್ಟಡ ನಿರ್ಮಾಣದ್ದೇ ಕನಸು, ಬಿಡಿಎ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿ ಸೇರಿದಂತೆ ವಿವಿಧ ಕಟ್ಟಡಗಳನ್ನು ಹೊಸದಾಗಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗೆ ಸೂಚನೆ ನೀಡಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಕ್ವೀನ್ಸ್ ರಸ್ತೆಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಮುಂದಾಗಿದ್ದರು. ಬಳಿಕ 20 ಅಂತಸ್ತುಗಳ ಪೊಲೀಸ್ ಭವನಕ್ಕೆ ನೀಲನಕ್ಷೆ ತಯಾರಾಗಿದೆ. ಇದೀಗ ಬಿಡಿಎ ಬಹುಮಹಡಿ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. ಈಗಿರುವ ಬಿಡಿಎ ಕಚೇರಿ ಕಟ್ಟಡ ಮೂರು ಭಾಗಗಳ ರೀತಿ ಗೋಚರಿಸುತ್ತದೆ.

 ಕೆಂಪೇಗೌಡ ಬಡಾವಣೆಯಲ್ಲಿ 100 ನಿವೇಶನಗಳು ಲಭ್ಯ: ಬೇಗ ಖರೀದಿಸಿ ಕೆಂಪೇಗೌಡ ಬಡಾವಣೆಯಲ್ಲಿ 100 ನಿವೇಶನಗಳು ಲಭ್ಯ: ಬೇಗ ಖರೀದಿಸಿ

ದಾಖಲೆಗಳು ಇರುವುದೇ ಬೇರೆ ಅಧಿಕಾರಿಗಳು ಇರುವುದೇ ಬೇರೆ ಎನ್ನುವಂತಾಗಿದೆ. ಇದು ಸುಲಭವಾಗಿ ಬಿಡಿಎ ಕೆಲಸ ಕಾರ್ಯಗಳು ನಡೆಯಲು ಸಮಸ್ಯೆಯನ್ನು ತಂದೊಡ್ಡುತ್ತಿದೆ.

 ಬಿಡಿಎ ಅಧಿಕಾರಿಗಳು ಒಂದುಕಡೆ, ಕಡತಗಳು ಇನ್ನೊಂದೆಡೆ

ಬಿಡಿಎ ಅಧಿಕಾರಿಗಳು ಒಂದುಕಡೆ, ಕಡತಗಳು ಇನ್ನೊಂದೆಡೆ

ಈಗಿರುವ ಬಿಡಿಎ ಕಟ್ಟಡವು ಸುಸಜ್ಜಿತವಾಗಿಲ್ಲ ಜತೆಗೆ ಮೂರು ವಿಭಾಗಗಳ ರೀತಿ ಕಂಡುಬರುತ್ತವೆ. ಒಂದು ಕಚೇರಿಯಲ್ಲಿ ಅಧಿಕಾರಿಗಳಿದ್ದರೆ ಇನ್ನೊಂದು ಕಚೇರಿಯಲ್ಲಿ ಕಡತಗಳರುತ್ತವೆ, ಪ್ರತಿನಿತ್ಯ ಅಧಿಕಾರಿಗಳು ಒಂದೆಡೆಯಿಂದ ಇನ್ನೊಂದೆಡೆ ಓಡಾಡುತ್ತಲೇ ಇರಬೇಕಾಗುತ್ತದೆ.ಹಾಗಾಗಿ ನೂತನ ಕಟ್ಟಡ ನಿರ್ಮಿಸಲು ಪರಮೇಶ್ವರ ಮುಂದಾಗಿದ್ದಾರೆ.

 ಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆ ಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆ

 ಬಿಡಿಎ ಕಚೇರಿ ಬೇರೆಡೆ ಸ್ಥಳಾಂತರ

ಬಿಡಿಎ ಕಚೇರಿ ಬೇರೆಡೆ ಸ್ಥಳಾಂತರ

ಬಿಡಿಎ ಕಚೇರಿಯನ್ನು ತಾತ್ಕಾಲಿಕವಾಗಿ ಬೇರೆ ಕಡೆಗೆ ಸ್ಥಳಾಂತರಿಸಿ ನೂತನ ಬಿಡಿಎ ಭವನ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲು ಸೂಚನೆ ನೀಡಿದ್ದಾರೆ. ಬಿಡಿಎ ಅಧಿಕಾರಿಗಳು 10 -15 ಮಹಡಿಗಳ ಸುಸಜ್ಜಿತ ಭವನ ನಿರ್ಮಾಣಕ್ಕೆ ಸರ್ಕಾರ ಪ್ರಸ್ತಾವನೆ ಸಲ್ಲಿಸಬೇಕಿದೆ.

 16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ 16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ

 ಪೊಲೀಸ್ ಭವನ ನಿರ್ಮಾಣ

ಪೊಲೀಸ್ ಭವನ ನಿರ್ಮಾಣ

ಪರಮೇಶ್ವರ ಗೃಹ ಸಚಿವರಾಗಿದ್ದಾಗ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯನ್ನು ಸುಸಜ್ಜಿತ ಆಧುನಿಕ ಸ್ಪರ್ಶ 18 ಮಹಡಿಗಳ ಕಟ್ಟಡ ಇರ್ಮಿಸಲು ಪ್ರಸ್ತಾವಣೆ ಸಲ್ಲಿಸುವಂತೆ ಸೂಚಿಸಿದ್ದರು. ಅಷ್ಟೇ ಅಲ್ಲದೆ ಪೊಲೀಸ್ ಭವನ ಹೇಗಿರಬೇಕು ಎಂಬುದರ ಬಗ್ಗೆ ಸಲ್ಲಿಸಲಾದ ನೀಲ ನಕ್ಷೆ ಅಂತಿಮಗೊಂಡಿದೆ.

 ಕಾಂಗ್ರೆಸ್ ಭವನ ನಿರ್ಮಾಣ

ಕಾಂಗ್ರೆಸ್ ಭವನ ನಿರ್ಮಾಣ

ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಹಿಂಆಗದಲ್ಲಿ ಸುಮಾರು 7 ಸಾವಿರ ಚದರ ಅಡಿ ಜಾಗದಲ್ಲಿ ನಿರ್ಮಾಣಗೊಂಡಿರುವ ಕಾಂಗ್ರೆಸ್ ಭವನ ಇದೀಗ ಉದ್ಘಾಟನೆ ಹಂತವನ್ನು ತಲುಪಿದೆ. ಈ ಹಿಂದೆ ಪರಮೇಶ್ವರ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಈ ಕಟ್ಟಡವನ್ನು ನಿರ್ಮಿಸಲು ಶ್ರಮಪಟ್ಟಿದ್ದರು.

English summary
Deputy chief minister Parameshwar instructed to BDA to build Multi stored building in Bengaluru for commercial purpose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X