ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking:ಮಾಜಿ ಸಿಎಂ ಎಚ್ಡಿಕೆ ವಿರುದ್ಧ ಸುಮಲತಾ ಅಂಬರೀಶ್ ಆಕ್ರೋಶ

|
Google Oneindia Kannada News

ಬೆಂಗಳೂರು, ಜುಲೈ 09: ಬೆಂಗಳೂರಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ದಿಢೀರ್ ಸುದ್ದಿಗೋಷ್ಠಿ ನಡೆಸಿ, ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಬರೀಶ್ ಹೆಸರು ದುರ್ಬಳಕೆ ಬಗ್ಗೆ ಬೇಸರ ವ್ಯಕ್ತಪಡಿಸಿ, ಭಾವುಕರಾಗಿ ಮಾತನಾಡಿದ್ದಾರೆ.

ಅಂಬರೀಶ್ ಹೆಸರು ಹೇಳಲು ಯೋಗ್ಯತೆ ಇಲ್ಲದವರು ಇಂದು ಹೆಸರು ಬಳಸಿ ರಾಜಕೀಯ ಮಾಡುತ್ತಿದ್ದಾರೆ. ಅಂಬರೀಶ್ ಕಾಲದಲ್ಲೇ ಅಕ್ರಮ ನಡೆದಿತ್ತು ಎಂದು ಆರೋಪ ಮಾಡುತ್ತಿದ್ದಾರೆ
ಅಂಬರೀಶ್ ಕಾಲದಲ್ಲಿ ಅಕ್ರಮ ನಡೆದಿದ್ದರೆ ದಾಖಲೆ ಸಮೇತ ದೂರು ನೀಡಲಿ, ಇಷ್ಟು ದಿನ ಸುಮ್ಮನೆ ಇದ್ದಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಅಂಬರೀಶ್ ಸ್ಮಾರಕ ವಿಚಾರವಾಗಿ ದೊಡ್ಡಣ್ಣ, ಶಿವರಾಮಣ್ಣ ಹೋಗಿದ್ದಾಗ ಇವರು ಮಾತನಾಡಿದ್ದು ಸ್ವಲ್ಪ ನೆನಪು ಮಾಡಿಕೊಳ್ಳಲಿ; ಹಾಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಹಿ ಹಾಕಿದ್ದು ನನಗೆ ನೆನಪಿದೆ. ಸ್ಮಾರಕ ನಿರ್ಮಾಣ ಅಭಿಮಾನಗಳ ಬೇಡಿಕೆ ಅದಕ್ಕೆ ಅಂದಿನ ಸರ್ಕಾರ ಸ್ಪಂದಿಸಿದ ರೀತಿ ಜನರಿಗೆ ಗೊತ್ತಿದೆ ಎಂದರು.

MP Sumalatha Ambareesh Press Meet Over Spar with HD Kumaraswamy and slammed leaders who misusing Ambareesh name.

ಅಂಬರೀಷ್ ಮೃತದೇಹವನ್ನು ಮಂಡ್ಯಕ್ಕೆ ಕೊಂಡೊಯ್ದ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಹೇಳಿದ್ದೇನು ಎಂಬುದು ಮಾಧ್ಯಮಗಳ ಬಳಿ ವಿಡಿಯೋಯಿದೆ, ಪರಿಶೀಲಿಸಿ ಎಂದ ಸುಮಲತಾ.

ಡೀಲಿಂಗ್ ಮಾಡೋದಕ್ಕೆ ಯಾರನ್ನು ನಾನು ಎಡ ಬಲ ಇಟ್ಟುಕೊಂಡಿಲ್ಲ, ಪಿಎಂಜಿಎಸ್ ವೈ ಅನುಷ್ಠಾನಗೊಳಿಸುವುದು ಸಂಸದರ ಕೆಲಸ, ಈ ಬಗ್ಗೆ ಪ್ರಶ್ನಿಸಿದರೆ ಭ್ರಷ್ಟಾಚಾರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಉಲ್ಟಾ ಛೋರ್ ಕೊತ್ವಾಲ್ ಗೋ ಡಾಟೆ, ಕಳ್ಳನಾದವನು ಪೊಲೀಸರ ವಿರುದ್ಧವೇ ದೂರು ನೀಡುತ್ತಾನೆ ಎಂಬ ಮಾತಿದೆ. ನಾನು ಅಕ್ರಮ ಗಣಿಗಾರಿಕೆ, ಕೆಆರ್ ಎಸ್ ಅಣೆಕಟ್ಟಿಗೆ ಅಪಾಯ ಇರುವ ಬಗ್ಗೆ ಕಳವಳ ವ್ಯಕ್ತ

ಫೋನ್ ಟ್ಯಾಪಿಂಗ್ ಬಗ್ಗೆ ಸೂಕ್ತ ದಾಖಲೆಯಿದೆ. ಯಾವುದೇ ಒತ್ತಡಕ್ಕೆ ಒಳಗಾಗದೆ ತನಿಖೆ ನಡೆಸುತ್ತೇವೆ ಎಂದು ಪೊಲೀಸರ ಅಧಿಕಾರಗಳು ನನ್ನ ಬಳಿ ಹೇಳಿದ್ದಾರೆ. ಶ್ರೀಗಳ ಫೋನ್ ಟ್ಯಾಪ್ ಮಾಡಿದ್ದರು ಎಂದು ಸುಮಲತಾ ಹೇಳಿದರು.

Recommended Video

ಇದು ದ್ರಾವಿಡ್ ಪಾಲಿಗೆ ದೊಡ್ಡ ಅಗ್ನಿ ಪರೀಕ್ಷೆ | Oneindia Kannada

2+2=4 ಆಗುತ್ತೆ 2+2 = 5 ಆಗಲ್ಲ, ಸುಳ್ಳು ಹೆಚ್ಚು ದಿನ ನಿಲ್ಲಲ್ಲ, ಜನಕ್ಕೆ ಯಾರು ಏನು ಎಂಬುದು ಗೊತ್ತಾಗುತ್ತದೆ. ಬೇನಾಮಿ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಸಿಎಂ ಯಡಿಯೂರಪ್ಪರ ಬಳಿ ಮಾತನಾಡುವೆ ಎಂದು ಸುಮಲತಾ ಹೇಳಿದರು.

English summary
MP Sumalatha Ambareesh Press Meet Over Spar with HD Kumaraswamy and slammed leaders who misusing Ambareesh name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X