ಕನ್ನಡ ನಟ ಚೇತನ್‌ರನ್ನು ಹಾಡಿ ಹೊಗಳಿದ ಶಶಿ ತರೂರ್

ಬೆಂಗಳೂರು, ಫೆಬ್ರವರಿ 8: ಕಾಂಗ್ರೆಸ್ ಮುಖಂಡ ಹಾಗೂ ಸಂಸದ ಶಶಿ ತರೂರ್ ಅವರು ಕನ್ನಡದ ನಟ ಹಾಗೂ ಪ್ರಗತಿಪರ ಚಿಂತನೆಯಲ್ಲಿ ತೊಡಗಿಸಿಕೊಂಡಿರುವ ಚೇತನ್ ಅವರನ್ನು ತುಂಬು ಮನಸ್ಸಿನಿಂದ ಹೊಗಳಿದ್ದಾರೆ.

ಇತ್ತೀಚೆಗೆ ನಟ ಚೇತನ್ ಸರಳವಾಗಿ ಮಾದರಿ ಎನ್ನುವಂತೆ ಮದುವೆಯಾದರು. ಈ ಬಗ್ಗೆ ತಿಳಿದುಕೊಂಡ ಶಶಿ ತರೂರ್, ಚೇತನ್ ಅವರ ಬಗ್ಗೆ ತಮ್ಮ ಟ್ವಿಟ್ಟರ್‌ನಲ್ಲಿ ಹೊಗಳಿದ್ದಾರೆ. ಟ್ವಿಟ್ಟರ್‌ನಲ್ಲಿ ತರೂರ್ 7.2 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

ಚೇತನ್ ಹಾಗೂ ಮೇಘಾ ಜೋಡಿಗೆ ಶುಭ ಕೋರಿರುವ ಶಶಿ ತರೂರ್ 'ಇದೊಂದು ಸಾಮಾಜಿಕ ಪ್ರಜ್ಞೆಯ ಮದುವೆ. ನವ ಜೋಡಿಗೆ ಶುಭವಾಗಲಿ' ಎಂದು ಹರಿಸಿದ್ದಾರೆ. ಅಲ್ಲದೇ ಮದುವೆಯಲ್ಲಿ ಭಾರತೀಯ ಸಂವಿಧಾನದ ಪುಸ್ತಕಗಳನ್ನು ಕೊಟ್ಟಿದ್ದು ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಪಣ ತೊಡುತ್ತೇವೆ ಎಂದು ಪ್ರಮಾಣವಚನ ತೆಗೆದುಕೊಂಡಿದ್ದನ್ನು ತುಂಬು ಮನಸ್ಸಿನಿಂದ ಹೊಗಳಿದ್ದಾರೆ.

MP Shashi Taroor Appreciate The Kannada Actor Chetan Marriage Style

ಇತ್ತೀಚೆಗೆ ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಚೇತನ್ ಅವರು ತಾವು ಮದುವೆ ಮಾಡಿಕೊಂಡ ಸರಳ ಬಗೆಯ ಬಗ್ಗೆ ಸಾಕಷ್ಟು ಮೆಚ್ಚುಗೆ ಗಳಿಸಿದ್ದರು. ಅವರು ಉತ್ತರ ಭಾರತ ಮೂಲದ ಮೇಘಾ ಅವರನ್ನು ವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+