Bengaluru Highway: ಹೆದ್ದಾರಿಗಳ ಟೋಲ್ ಶುಲ್ಕ ಇಳಿಕೆಗೆ ಮನವಿ: ಸಂಸದರು ಚರ್ಚಿಸಿದ ಯೋಜನೆಗಳ ಪಟ್ಟಿ
ಬೆಂಗಳೂರು, ಡಿಸೆಂಬರ್ 05: ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ರಾಜಕೀಯ ಹೆದ್ದಾರಿಗಳ ಟೋಲ್ ಇಳಿಕೆ, ರಸ್ತೆ ಅಭಿವೃದ್ಧಿ ಯೋಜನೆಗಳ ವಿಷಯವಾಗಿ ಬಿಜೆಪಿ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಕೆಂದ್ರದೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಅವರು ಕ್ಷೇತ್ರ ವ್ಯಾಪ್ತಿಯ ಹೆದ್ದಾರಿಗಳಿಗೆ ಸಂಬಂಧಿಸಿದಂತೆ ಮಹತ್ವ ಮನವಿ ಮಾಡಿಕೊಂಡಿದ್ದಾರೆ.
ಕೇಂದ್ರ ಸಚಿವರನ್ನು ದೆಹಲಿಯ್ಲಲಿ ಭೇಟಿ ಮಾಡಿದ್ದರ ಕುರಿತು ಸಂಸದರು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದರು ಕೆಲ ಕಾಲ ಚರ್ಚೆ ಮಾಡಿದರು. ಆದಷ್ಟು ಶೀಗ್ರವೇ ಎರಡು ಪ್ರಮುಖ ರಸ್ತೆ ಹೆದ್ದಾರಿಗಳ ಟೋಲ್ ಗೇಟ್ ಶುಲ್ಕ ಇಳಿಕೆ ಸಾಧ್ಯತೆ ಇದೆ.

ಸಂಸದರ ಮನವಿಗೆ ಕೇಂದ್ರ ಸಚಿವರು ಒಪ್ಪದಲ್ಲಿ ಬೆಂಗಳೂರಿನಿಂದ ಆನೆಕಲ್ ನಿಂದ ತಮಿಳುನಾಡು ಹೊಸೂರು ಕಡೆಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-44 (NH-44) ಮತ್ತು ಹೊಸ ರಾಷ್ಟ್ರೀಯ 844 (NH-844) ಯಲ್ಲಿ ಪ್ರವೇಶ ಶುಲ್ಕ ಕಡಿಮೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ನಿತ್ಯ ಜಮೀನುಗಳಿಗೆ ಓಡಾಡುವ ರೈತರಿಗೆ ಪ್ರವೇಶ ಶುಲ್ಕದಿಂದ ಓಡಾಡುವವರಿಗೆ ತೊಂದರೆ ಆಗುತ್ತಿದೆ. ಅವರಿಗೆ ಅನುಕೂಲ ಆಗುವಂತೆ ಟೋಲ್ ಶುಲ್ಕ ಕಡಿಮೆ ಮಾಡುವಂತೆ ಕೋರಲಾಗಿದೆ.
ಇನ್ನೂ ರಾಷ್ಟ್ರೀಯ ಹೆದ್ದಾರಿ NH 275 ರ ಕುಣಿಗಲ್ ಬೈಪಾಸ್‌ನಲ್ಲಿ ಸರ್ವಿಸ್ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಈ ರಸ್ತೆಯು ಅಭಿವೃದ್ಧಿಪಡಿಸಿದರೆ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ರಾಷ್ಟ್ರೀಯ ಹೆದ್ದಾರಿ NH 75 (ನೆಲಮಂಗಲ-ದೇವಿಹಳ್ಳಿ) ಅಲ್ಲಿ ಹೆಚ್ಚುವರಿ ಸೇತುವೆಗಳ ನಿರ್ಮಾಣ ಮಾಡಲು ಸರ್ಕಾರ ಅನುದಾನ ಕಲ್ಪಿಸಬೇಕೆಂದು ಅವರು ಕೋರಿದ್ದಾರೆ.
ಇದೇ ವೇಳೆ ಬೆಂಗಳೂರು ಗ್ರಾಮೀಣ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ NH 209ರ ಕಗ್ಗಲಿಪುರ ಮತ್ತು ಉದಯಪುರದಲ್ಲಿ ಬೈಪಾಸ್ ಜೊತೆಗೆ ವಾಹನಗಳಿಗೆ ಅಂಡರ್ ಪಾಸ್ ನಿರ್ಮಾಣದ ಅಗತ್ಯವಿದೆ. ಇದು ಸೇರಿದಂತೆ ಯೋಜನೆಗಳ ಅಗತ್ಯ, ರಸ್ತೆ ಸುಧಾರಣೆ ಬಗ್ಗೆ ಸಚಿವರಿಗೆ ವಿವರಿಸಿದರು.
ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಆನೇಕಲ್ ತಾಲೂಕಿನ ನೇರಲೂರಿನಲ್ಲಿ NH-44 ಮತ್ತು ಹೊಸ NH -844ರ ಟ್ರಂಪೆಟ್ ಇಂಟರ್‌ಚೇಂಜ್ ಯೋಜನೆಗೆ ಒಂದಷ್ಟು ಬದಲಾವಣೆಗಳನ್ನು ತರಲು ಅವರು ಕೋರಿದ್ದಾರೆ.
ಕುಣಿಗಲ್ ತಾಲೂಕು ನೆಲಮಂಗಲ ಮತ್ತು ದೇವಿಹಳ್ಳಿ ವಿಭಾಗದ ರಾಷ್ಟ್ರೀಯ ಹೆದ್ದಾರಿ NH-75 ರಸ್ತೆ ವ್ಯಾಪ್ತಿಯಲ್ಲಿ ಅಗ್ರಹಾರ ಗೇಟ್‌ನಲ್ಲಿ ವಿಯುಪಿ ನಿರ್ಮಾಣ ಯೋಜನೆ ಕೈಗೊಳ್ಳಬೇಕಿದೆ. ಭಾರತಮಾಲಾ 2 ಯೋಜನೆಯಡಿಯಲ್ಲಿ ಕರ್ನಾಟಕ ಗಡಿಯಿಂದ ಹುಣಸಹಳ್ಳಿ-ಕೋಡಿಹಳ್ಳಿ-ಕನಕಪುರ-ರಾಮನಗರ-ಮಾಗಡಿ-ಪಾವಗಡ ಮಾರ್ಗವಾಗಿ ಆಂಧ್ರಪ್ರದೇಶದ ಗಡಿವರೆಗೆ ಸುವ್ಯವಸ್ಥಿತಗೊಳಿಸಲು ಸುಮಾರು 170 ಕಿಮಿ ದ್ವಿಪಥದ ರಾಜ್ಯ ಹೆದ್ದಾರಿ ರಸ್ತೆಗೆ ಅಗಲೀಕರಗೊಳಿಸಬೇಕಿದೆ. ಇದರಿಂದ ಹೆದ್ದಾರಿ ಸಂಪರ್ಕಿಸಲು ಸಹಾಯವಾಗುತ್ತದೆ. ಈ ಮನವಿ ಪ್ರಸ್ತಾವಗಳಿಗೆ ತಾವು ಅನುಮೋದನೆ ನೀಡಬೇಕು ಎಂದು ಅವರು ವಿನಂತಿಸಿಕೊಂಡರು.
ಸಂಸದರ ಜೊತೆಗಿನ ಕೆಲವು ಹೊತ್ತಿನ ಚರ್ಚೆ ಬಳಿಕ ಹೆದ್ದಾರಿ ಅಭಿವೃದ್ಧೀ ಯೋಜನೆಗಳ ಸಾಕಾರಕ್ಕೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.












Click it and Unblock the Notifications