• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಡುಗರಿಗೂ ತೆರೆದುಕೊಂಡ ಮೌಂಟ್ ಕಾರ್ಮೆಲ್ ಬಾಗಿಲು!

By Mahesh
|

ಬೆಂಗಳೂರು ಜುಲೈ 16: ನಗರದ ಜನಪ್ರಿಯ ಮಹಿಳಾ ಕಾಲೇಜುಗಳಲ್ಲಿ ಒಂದೆನಿಸಿರುವ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಹುಡುಗರಿಗೂ ವ್ಯಾಸಂಗ ಮಾಡುವ ಅವಕಾಶ ಲಭ್ಯವಾಗುವ ಕಾಲ ಬಂದಿದೆ. ಸ್ನಾತಕೋತ್ತರ ಪದವಿ ಮಾಡಬಯಸುವ ವಿದ್ಯಾರ್ಥಿಗಳಿಗೆ ಕಾಲೇಜು ಬಾಗಿಲು ತೆರೆಯುವ ಸಾಧ್ಯತೆಗಳಿವೆ.

ಮುಂಬರುವ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತವರ ಪದವಿ ವಿಷಯಕ್ಕೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಬಯಸಿದ್ದು, ಇದಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳ ಅನುಮತಿ ಕೋರಲಾಗಿದೆ ಎಂದು ಕಾಲೇಜಿನ ಅರ್ಪಣಾ ಹೇಳಿದ್ದಾರೆ.

ಈ ಬಗ್ಗೆ ಅನುಮತಿ ಕೋರಿ ಉನ್ನತ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ವಿವಿ ಕುಲಪತಿಗಳಿಗೆ ಮನವಿ ಪತ್ರವನ್ನು ಮಾರ್ಚ್ ತಿಂಗಳಲ್ಲಿ ಕಳಿಸಲಾಗಿದೆ. ವಿವಿಗಳ ಕೌನ್ಸಿಲ್ ಸಭೆಯಲ್ಲೂ ಇದಕ್ಕೆ ಅನುಮತಿ ಸಿಕ್ಕಿದೆ. ಎಲ್ಲವೂ ಸರಿಯಾಗಿ ಕೂಡಿ ಬಂದರೆ 1948ರ ನಂತರ ಇದೇ ಮೊದಲ ಬಾರಿಗೆ ಮುಂಬರುವ ಶೈಕ್ಷಣಿಕ ವರ್ಷದಿಂದ ಹುಡುಗಿಯರ ಕಾಲೇಜಿನಲ್ಲಿ ಹುಡುಗರು ವಿದ್ಯಾಭ್ಯಾಸ ನಾಂದಿ ಹಾಡಲಾಗುತ್ತದೆ. [ಮಾಯವಾಗಲಿದೆ ಪುಟಗಟ್ಟಲೇ ಬರೆಯುವ ಪರಿಪಾಠ]

ಬೆಂಗಳೂರು ವಿವಿಯ ಕುಲಪತಿ ಪ್ರೊ ಬಿ ತಿಮ್ಮೇಗೌಡ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಮತಿ ನೀಡಲು ವಿವಿಯ ಅಭ್ಯಂತರವೇನು ಇಲ್ಲ. ವಿವಿಯಿಂದ ಸಂಪೂರ್ಣ ಒಪ್ಪಿಗೆ ನೀಡಲಾಗಿದೆ. ಕರ್ನಾಟಕ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ ಎಂದಿದ್ದಾರೆ. [ದಯವಿಟ್ಟು ಈ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಡಿ]

ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪ್ರವೇಶಾತಿ ಅನುಪಾತ ಬಗ್ಗೆ ಕಾಲೇಜು ಮಂಡಳಿ ನಿರ್ಧರಿಸಲಿದೆ. ಈ ಬಗ್ಗೆ ವಿವಿ ಕೂಡಾ ಅನುಮತಿ ನೀಡಿದೆ. ವಸಂತ ನಗರ ಕ್ಯಾಂಪಸ್ ನಲ್ಲಿ ತರಗತಿಗಳು ನಡೆಯಲಿವೆ. ಕಾಲೇಜಿಗೆ ಸ್ವಾಯುತ್ತತೆ ಇದ್ದರೂ ವಿವಿಯ್ ಪೂರ್ವಾನುಮತಿ ಪಡೆಯಬೇಕಾಗುತ್ತದೆ ಎಂದು ಪ್ರಿನಿಸಿಪಾಲ್ ಅರ್ಪಣಾ ಹೇಳಿದ್ದಾರೆ.

ಪ್ರವೇಶಾತಿ ಅನುಪಾತದಲ್ಲಿ ವಿದ್ಯಾರ್ಥಿನಿಗಳಿಗೆ ಹೆಚ್ಚಿನ ಪಾಲು ಸಿಕ್ಕರೆ ಸಾಕು, ವಿದ್ಯಾರ್ಥಿಗಳ ಜೊತೆ ವ್ಯಾಸಂಗದಿಂದ ನಮಗೇನೂ ತೊಂದರೆಯಿಲ್ಲ ಎಂದು ಕಾಲೇಜಿನ ವಿದ್ಯಾರ್ಥಿನಿ ಸೌಮ್ಯ ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಇಲ್ಲಿ ತನಕ ಕಾಲೇಜಿನ ಗೇಟ್ ಹೊರಗೆ ಸುತ್ತುತ್ತಿದ್ದ ಬೈಕುಗಳು ಹಾಗೂ ಅದರ ಸವಾರರು ಕಾಲೇಜಿನೊಳಗೆ ಅಧಿಕೃತವಾಗಿ ಎಂಟ್ರಿ ಕೊಡಬಹುದು. ಮೌಂಟ್ ಕಾರ್ಮೆಲ್ ಕಾಲೇಜಿನ ಬಗ್ಗೆ ಇನ್ನಷ್ಟು ವಿವರಗಳಿಗೆ ವೆಬ್ ಸೈಟ್ ನೋಡಿ (ಒನ್ ಇಂಡಿಯಾ ಸುದ್ದಿ)

English summary
One of the Bengaluru’s premier women’s colleges, Mount Carmel College, is looking to open its doors to boys for post-graduate courses, and has filed an application for the same with the Higher Education Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more