ಕುಟುಂಬ ನಿರ್ವಹಣೆಗಾಗಿ ರಿಕ್ಷಾ ಓಡಿಸುವ ತಾಯಿ

ಪುಣೆ ಮುಲದ ವೈಶಾಲಿ ಈ ಸಾಧನೆ ಮಾಡಿದ ಮಹಿಳೆ. ಪತಿಯ ಆದಾಯದಿಂದ ಕುಟುಂಬ ನಿರ್ವಹಣೆ ಕಷ್ಟ ಎಂದು ತಿಳಿದು ರಿಕ್ಷಾ ಓಡಿಸಲು ಆರಂಭಿಸಿದ ವೈಶಾಲಿಯವರು 2010ರಲ್ಲಿ ಪತಿ ಜೊತೆ ಸೇರಿ ಶಾಲಾ ಮಕ್ಕಳಿಗಾಗಿ ಆಟೋ, ಬಸ್ಸುಗಳ ವ್ಯವಸ್ಥೆಗಾಗಿ ಟೂರ್ ಅಂಡ್ ಟ್ರಾವೆಲ್ಸ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.
ವೈಶಾಲಿ ಪತಿ ಶಾಲೆಯೊಂದರಲ್ಲಿ ಬಸ್ ಚಾಲಕ ವೃತ್ತಿ ಮಾಡುತ್ತಿದ್ದು 2002ರಲ್ಲಿ ಜೀವನ ಸಾಗಿಸುವುದೇ ಕಷ್ಟವಾಗಿತ್ತು. ಆ ಸಂದರ್ಭದಲ್ಲಿ ಪುಣೆಯಲ್ಲಿ ರಿಕ್ಷಾ ಓಡಿಸಿ ಪತಿಗೆ ಸಹಕಾರ ನೀಡಬಾರದು ಯೋಚಿಸಿ ಈ ನಿರ್ಧಾರಕ್ಕೆ ಬಂದ ವೈಶಾಲಿ ಅವರು ಇದೀಗ ಪುಣೆಯಲ್ಲಿ ಯಶಸ್ವಿ ರಿಕ್ಷಾ ಡ್ರೈವರ್ ಆಗಿಯೂ ಪ್ರಸಿದ್ದರಾಗಿದ್ದಾರೆ.
ವೈಶಾಲಿ ಮಗಳು ಶ್ರುತಿಕಾ, ಬಿಎಸ್ಸಿ ಮೊದಲ ವರ್ಷವನ್ನು ಪ್ರತಿಷ್ಠಿತ ಕಾಲೇಜಿನಲ್ಲಿ ಕಲಿಯುತ್ತಿದ್ದು ಅವರ ತಾಯಿ ರಿಕ್ಷಾ ಡ್ರೈವರ್ ಎಂದು ಯಾವ ಸ್ನೇಹಿತರಿಗೂ ಹೇಳಿರಲಿಲ್ಲವಂತೆ. ಆದರೆ ಹೇಗೂ ವಿಚಾರ ತಿಳಿದ ಸ್ನೇಹಿತರು ಸಾಧನೆಯನ್ನು ಹೊಗಳಲು ಆರಂಭಿಸಿದ್ದಾರೆ. ಅಷ್ಟೇ ಅಲ್ಲದೇ ಅವರ ರೋಲ್ ಮಾಡೆಲ್ ಆಗಿ ನಾವು ನೋಡುತ್ತೇವೆ ಎಂದು ಹೇಳುತ್ತಿದ್ದರಂತೆ.
ಸಂಸ್ಥೆಯನ್ನು ಸ್ಥಾಪಿಸಿದರೂ "ಆಟೋ ರಿಕ್ಷಾ ಓಡಿಸುವುದು ನನ್ನ ಇಷ್ಟದ ಉದ್ಯೋಗ. ಈ ವೃತ್ತಿಯಲ್ಲೇ ಮುಂದುವರೆಯುತ್ತೇನೆ" ಅಂತ ವೈಶಾಲಿಯವರು ಹೇಳುತ್ತಾರೆ.
ಸುದ್ದಿ ಕೃಪೆ: mid-day.com
#Pune: Mother of three drives an auto to run her family http://t.co/Mf6zVeIj0Y pic.twitter.com/2AL1Qv1Xmu
— mid-day Infomedia (@mid_day) June 30, 2014 











Click it and Unblock the Notifications