ಮೂರನೇ ಮಹಡಿಯಿಂದ ಮಗಳನ್ನು ನೂಕಿ ಕೊಂದ ತಾಯಿ

ಬೆಂಗಳೂರು, ಆಗಸ್ಟ್. 28 : ಒಂಭತ್ತು ವರ್ಷದ ಮಗಳನ್ನು ತಾಯಿಯೇ ಮೂರನೇ ಮಹಡಿಯಿಂದ ತಳ್ಳಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ತಾಯಿಯನ್ನು ಸಾರ್ವಜನಿಕರು ರಕ್ಷಿಸಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ.

ಜರಗನಹಳ್ಳಿ ನಿವಾಸಿ ಸಾಕ್ಷಿ ಕಾಂಚನ್ ಸರ್ಕಾರ್ ಪುತ್ರಿ ಶ್ರೇಯಾ ಸರ್ಕಾರ್‌ಳನ್ನು ಮೂರನೇ ಮಹಡಿಯಿಂದ ತಳ್ಳಿ ಹತ್ಯೆ ಮಾಡಿದ್ದಾರೆ. ಕೃತ್ಯದ ಬಳಿಕ ಅದೇ ಕಟ್ಟಡದಿಂದ ಹಾರಲು ಯತ್ನಿಸಿದ ಸಾಕ್ಷಿಯನ್ನು ಜನರು ರಕ್ಷಣೆ ಮಾಡಿ, ಪುಟ್ಟೇನಹಳ್ಳಿ ಪೊಲೀಸರಿಗೆ ಒಪ್ಪಿಸಿದರು.

Mother pushes her daughter to death

ಪಶ್ಚಿಮ ಬಂಗಾಳ ಮೂಲದ ಸಾಕ್ಷಿ ಎಚ್‌.ಪಿ.ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಂಚನ್ ಸರ್ಕಾರ್ ಎಂಬುವವರನ್ನು ವಿವಾಹವಾಗಿದ್ದರು. ಎರಡು ವರ್ಷದಿಂದ ಗಂಡ-ಹೆಂಡತಿ ಬೇರೆ-ಬೇರೆಯಾಗಿದ್ದರು. ಪ್ರತಿ ತಿಂಗಳು ಪತಿ ಜೀವನಾಧಾರಕ್ಕೆ ಹಣ ನೀಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಭಾನುವಾರ ಮಧ್ಯಾಹ್ನ ಸಾಕ್ಷಿ ಮಗಳಿಗೆ ಊಟ ಮಾಡಲು ಹೇಳಿದ್ದರು. ಆದರೆ, ಆಕೆ ಅಳುತ್ತಿದ್ದಳು, ಎಷ್ಟು ಸಮಾಧಾನ ಮಾಡಿದರೂ ಆಕೆ ಸುಮ್ಮನಾಗಿರಲಿಲ್ಲ. ಇದರಿಂದ ಕೋಪಗೊಂಡ ಆಕೆ ಮೂರನೇ ಮಹಡಿಯಿಂದ ಮಗಳನ್ನು ತಳ್ಳಿದ್ದು, ಸ್ಥಳದಲ್ಲಿಯೇ ಶ್ರೇಯಾ ಸಾವನ್ನಪ್ಪಿದ್ದಾಳೆ.

ಪುಟ್ಟೇನಹಳ್ಳಿ ಪೊಲೀಸರು ಸಾಕ್ಷಿ ಸರ್ಕಾರ್ ಅವರನ್ನು ವಶಕ್ಕೆ ಪಡೆದಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ 302ರ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+