ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಪಿಂಗ್ ಮಾಡುವ ಭರದಲ್ಲಿ ಮಗನನ್ನೇ ಮರೆತು ಮನೆಗೆ ನಡೆದ ತಾಯಿ

|
Google Oneindia Kannada News

ಬೆಂಗಳೂರು, ಏ.29: ಶಾಪಿಂಗ್ ತಲೆಯಲ್ಲಿ ಪರ್ಸ್, ಕ್ರೆಡಿಟ್, ಡೆಬಿಟ್‌ ಕಾರ್ಡ್‌ಗಳು, ಬ್ಯಾಗ್ ಇತರೆ ವಸ್ತುಗಳನ್ನು ಮರೆತು ಮನೆಗೆ ಹೋಗುವುದು ಸಾಮಾನ್ಯ.

ಆದರೆ ಇಲ್ಲೊಬ್ಬ ತಾಯಿ ಮಗುವನ್ನೇ ಮಾಲ್‌ನಲ್ಲಿ ಮರೆತು ಮನೆಗೆ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ರಸ್ತೆಬದಿಯಲ್ಲಿ ಅಳುತ್ತಾ ನಿಂತಿದ್ದ ಬಾಲಕನನ್ನು ಬಸವನಗುಡಿ ಸಂಚಾರ ಪೊಲೀಸರು ರಕ್ಷಿಸಿ ಹೆತ್ತವರಿಗೆ ಒಪ್ಪಿಸಿದ್ದಾರೆ.

ಬೆಂಗಳೂರು ಟೆಕ್ಕಿ ಅಜಿತಾಬ್ ನಾಪತ್ತೆ : ವರದಿ ಕೇಳಿದ ಪ್ರಧಾನಿ ಕಾರ್ಯಾಲಯ ಬೆಂಗಳೂರು ಟೆಕ್ಕಿ ಅಜಿತಾಬ್ ನಾಪತ್ತೆ : ವರದಿ ಕೇಳಿದ ಪ್ರಧಾನಿ ಕಾರ್ಯಾಲಯ

ಹೊಸಕೆರೆಹಳ್ಳಿಯ ಮಹಿಳೆಯೊಬ್ಬರು ಮೂರು ವರ್ಷದ ಮಗ ಮತ್ತು ಸಂಬಂಧಿಕರ ಜೊತೆ ಭಾನುವಾರ ಶಾಪಿಂಗ್‌ಗೆ ಬಂದಿದ್ದರು. ವಸ್ತುಗಳನ್ನು ಖರೀದಿಸಿದ ತಾಯಿ ಮತ್ತು ಇತರರು ಅಲ್ಲಿ ಆಟವಾಡುತ್ತಿದ್ದ ಬಾಲಕನನ್ನು ಮರೆತು ಸ್ಕೂಟರ್‌ನಲ್ಲಿ ತೆರಳಿದ್ದರು.

Mother forgot her child after shopping

ಬಾಲಕ ಅವರ ಬಳಿ ಇರಬೇಕೆಂದು ಇವರು, ಇವರ ಬಳಿ ಇರಬೇಕೆಂದು ಅವರು ಒಬ್ಬರನ್ನೊಬ್ಬರು ನೋಡಿಕೊಮಡಾಗ ಬಾಲಕ ಇಲ್ಲದಿರುವುದು ತಿಳಿದುಬಂದಿದೆ. ಅಷ್ಟರಲ್ಲಿ ಅಮ್ಮನನ್ನ ಹುಡುಕಿಕೊಂಡು ಬಾಲಕ ರಸ್ತೆಯ ಪಕ್ಕದಲ್ಲಿ ಬಂದಿದ್ದು, ಅಳುತ್ತಾ ನಿಂತಿದ್ದ, ಬಸವನಗುಡಿ ಸಂಚಾರ ಪೇದೆ ರವೀಂದ್ರ ಗೌಡಪಾಟೀ್ ಮತ್ತು ದಿಲೀಪ್ ಬಾಲಕನ್ನು ಎತ್ತಿಕೊಂಡು ಧೈರ್ಯ ಹೇಳಿ ಅಲ್ಲಿಯೇ ನಿಂತಿದ್ದರು. ಬಳಿಕ ಪೋಷಕರು ಬಂದು ಮಗುವನ್ನು ಕರೆದುಕೊಂಡು ಹೋಗಿದ್ದಾರೆ.

English summary
A mother was busy with shopping, forgot own child. Leter police handed over the child to the parents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X