Bengaluru: ಮುಂಗಾರಿನಿಂದಾ ಸಾಂಕ್ರಾಮಿಕ ರೋಗ ಭೀತಿ, ಜ್ವರ ಲಸಿಕೆಗಳಿಗೆ ಬೇಡಿಕೆ ಅಧಿಕ

ಬೆಂಗಳೂರು, ಜುಲೈ 17: ರಾಜ್ಯದಲ್ಲಿ ಮುಂಗಾರು ಮಳೆ ನಿರಂತರ ಸಕ್ರಿಯತೆಯಿಂದಾಗ ಸೊಳ್ಳೆಗಳ ಉತ್ಪತ್ತಿ ಹೆಚ್ಚುತ್ತಿದೆ. ಮಲೀನ ನೀರಿನಿಂದ, ಪ್ರಾಣಿಗಳಿಂದ ಮನುಷ್ಯರಿಗೆ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ. ಈಗಾಗಲೇ ಸೊಳ್ಳೆ ಕಡಿತದಿಂದ ಟೈಫಡ್, ಹೆಪಟೈಟಿಸ್ ಎ, ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾದ ಬಗ್ಗೆ ವರದಿಯಾಗಿವೆ.

ಕಲುಷಿತ ನೀರು ಮತ್ತು ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ಕಾಯಿಲೆಗಳ ಹೆಚ್ಚಾಗುವ ಭೀತಿಯಿಂದ ಬೆಂಗಳೂರು ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜನರು ಲಸಿಕೆ (ಚುಚ್ಚುಮದ್ದು) ತೆಗೆದುಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಚುಚ್ಚುಮದ್ದುಗೆ ಬೇಡಿಕೆಯು ಹೆಚ್ಚಾಗುತ್ತಿದೆ.

Monsoon Trigger Infectious Disease: Demand Increase Of Flu Vaccination In Bengaluru

ಕೊರೊನಾ ರೋಗದ ನಂತರ ಜನರು ಸಾಂಕ್ರಾಮಿಕ ರೋಗಗಳಿಂದ ಹೆಚ್ಚು ಜಾಗರೂಕರಾಗಿದ್ದಾರೆ. ಆರೋಗ್ಯ ಕಾಳಜಿ ವಹಿಸುತ್ತಿರುವ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಮನಸ್ಸು ಮಾಡುತ್ತಿದ್ದಾರೆ ಎಂದು ಆಸ್ಟರ್ ಸಿಎಂಐ ಹಿರಿಯ ಸಲಹೆಗಾರರಾದ ಡಾ.ಪರಿಮಳಾ ತಿರುಮಲೇಶ್ ತಿಳಿಸಿದ್ದಾರೆ.

ಇತ್ತೀಚೆಗೆ ಸಾಂಕ್ರಾಮಿಕ ರೋಗದ ಭೀತಿಗಳಿಂದ ಇಡೀ ಕುಟುಂಬಗಳು ಜ್ವರ ಚುಚ್ಚು ಮದ್ದು (ಫ್ಲೂ ಶಾಟ್) ತೆಗೆದುಕೊಳ್ಳುತ್ತಿವೆ. ಕಳೆದ ಒಂದು ವಾರದಲ್ಲಿ 25-30 ಡೋಸ್‌ಗಳನ್ನು ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪಡೆಯುವ ಸಾಧ್ಯತೆ ಇದೆ. ಹೀಗಾಗಿಯೇ ಸಾಕಷ್ಟು ಲಸಿಕೆ ದಾಸ್ತಾನು ಇಡಲಾಗಿದೆ ಎಂದು ಅವರು ತಿಳಿಸಿದರು.

ಲಸಿಕೆ ಕೆಲಸ ಮತ್ತು ವೈದ್ಯರ ಸಲಹೆ

ಸಾಂಕ್ರಾಮಿಕ ರೋಗ ತುತ್ತಾಗುವವರಿಗೆ ಕೂಡಲೇ ಲಸಿಕೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರು. ಆದರೆ ಮುಂಗಾರು ಮಳೆಯ ಕಾರಣದಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಲಿದೆ. ಕೆಲವು ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಂಭವವಿದೆ. ಹೀಗಾಗಿ ಎಲ್ಲರೂ ಪ್ರತಿ ವರ್ಷ ಲಸಿಕೆ ಪಡೆಯುವಂತೆ ಸಲಹೆ ನೀಡಿದ್ದೇವೆ.

Monsoon Trigger Infectious Disease: Demand Increase Of Flu Vaccination In Bengaluru

ಇತ್ತೀಚಿನ ದಿನಗಳಲ್ಲಿ ಜನರು ಜ್ವರ ಚುಚ್ಚುಮದ್ದು (ಫ್ಲೂ ಶಾಟ್) ‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಲಸಿಕೆ ಕೇವಲ 70 ಪ್ರತಿಶತದಷ್ಟು ಪರಿಣಾಮಕಾರಿಯನ್ನು ಹೊಂದಿದ್ದರೂ ರೋಗದ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಗಂಭೀರ ಕಾಯಿಲೆ ಬರದಂತೆ ತಡೆಯುವ ಜೊತೆಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ರೋಗಗಳು ಹರಡುವುದನ್ನು ತಡೆಯುತ್ತದೆ ಎಂದು ಅವರು ವಿವರಿಸಿದರು.

ಮಳೆಗಾಲ ಆರಂಭವಾಗಿ ಒಂದೂವರೆ ತಿಂಗಳ ಕಳೆದಿದೆ. ಮುಂದಿನ ಎರಡು ತಿಂಗಳು ಜ್ವರ, ಶೀತ, ಆಗಾಗ ಅನಾರೋಗ್ಯದಂತ ಸಮಸ್ಯೆಗಳು ಕಂಡು ಬರುತ್ತದೆ. ವೈದ್ಯರು ಸಹ ಜ್ವರ ಚುಚ್ಚುಮದ್ದು ಹಾಕಿಕೊಳ್ಳುವಂತೆ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗಳಲ್ಲಿ ಪ್ರತಿದಿನ 20-30 ರೋಗಿಗಳ ಲಸಿಕೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಲಸಿಕೆ ಬೇಡಿಕೆ ಹೆಚ್ಚಳ, ಆಂತರಿಕವಾಗಿ ಸದೃಢವಾಗಲು ಸೂಚನೆ

ಬೇಸಿಗೆ ರಜೆಗಳ ಬಳಿಕ ಶಾಲೆಗಳು ಆರಂಭವಾಗಿವೆ, ಇದು ಸಹ ಜ್ವರ ಚುಚ್ಚುಮದ್ದು ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ಎಂ

ಹಿಂದಿನ ಎರಡು ವಾರಗಳಲ್ಲಿ ಜ್ವರ ಚುಚ್ಚುಮದ್ದು ಲಸಿಕೆಗಳ ಬೇಡಿಕೆಯಲ್ಲಿ 30 ಪ್ರತಿಶತದಷ್ಟು ಏರಿಕೆ ಆಗಿದ್ದನ್ನು ನಾವು ಗಮನಿಸಿದ್ದೇವೆ ಎಂದು AASRA ಆಸ್ಪತ್ರೆಯ ಅಧ್ಯಕ್ಷ ಡಾ ಜಗದೀಶ್ ಹಿರೇಮಠ ಮಾಹಿತಿ ನೀಡಿದರು.

ಸಾಂಕ್ರಾಮಿಕ ರೋಗಗಳ ವಿರುದ್ಧ ಈ ಚುಚ್ಚುಮದ್ದು ಕೆಲಸ ಮಾಡಿದರೂ ಸಹಿತ ಆಂತರಿಕವಾಗಿ ರೋಗ ನಿರೋಧ ಶಕ್ತಿ ಹೆಚ್ಚಿಸಿಕೊಳ್ಳಲು ಆದ್ಯತೆ ನೀಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಉತ್ತಮ ಆಹಾರ ಸೇವನೆಯಿಂದ ನೈಸರ್ಗಿಕವಾಗಿಯೇ ಪ್ರತಿರಕ್ಷೆ ಹೊಂದಲು ಸಾಧ್ಯವಾಗುತ್ತದೆ. ಜನರು ಜಂಕ್ ಫುಡ್ ತಿನ್ನಲು ಒಗ್ಗಿಕೊಂಡಿರುತ್ತಾರೆ. ನಿರಂತರ ವ್ಯಾಯಾಮ ಮಾಡದಿರುವುದು, ವ್ಯಕ್ತಿಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಕಾರಣ ಇದು ಬಹಳ ನಿರ್ಣಾಯಕವಾಗಿದೆ ಎಂದು ವೈದ್ಯರು ಹೇಳಿದರು.

ನೆರೆ ರಾಜ್ಯ ಕೇರಳದಲ್ಲಿ ಕೆಲವು ದಿನಗಳಿಂದ ಜ್ವರ, ಡೆಂಗ್ಯೂ ನಂತರ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ. ರಾಜ್ಯ ಆರೋಗ್ಯ ಇಲಾಖೆಯೂ ಸಹ ಪ್ರಕರಣಗಳ ಹೆಚ್ಚಾಗದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಎಲ್ಲಿಯೂ ಸಹ ಸಾರ್ವಜನಿಕ ಆರೋಗ್ಯ ಮೇಲೆ ಗಂಭೀರ ಪ್ರಭಾವ ಭೀರುವಷ್ಟರ ಮಟ್ಟಿಗೆ ಕಾಯಿಲೆಗಳು ಏರುಗತಿಯಲ್ಲಿ ಕಂಡು ಬಂದಿಲ್ಲ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+