ಕನ್ನಡಿಗರಿಗೆ ಕೆಲಸ ಕೊಡಿ: ಕನ್ನಡ ಪರ ಸಂಘಟನೆಗಳ ಅಭಿಯಾನಕ್ಕೆ ಮೋಹನ್ ದಾಸ್ ಪೈ ಆಕ್ಷೇಪವೇಕೆ?
ಬೆಂಗಳೂರು: ಕನ್ನಡಪರ ಹೋರಾಟಗಾರರ ನಡೆಯನ್ನು ಉದ್ಯಮಿ ಮೋಹನ್‌ದಾಸ್ ಪ್ರಶ್ನೆ ಮಾಡಿದ್ದು, ಮೋಹನ್‌ದಾಸ್ ಪೈ ಅವರಿಗೆ ಕನ್ನಡಿಗರು ತಿರುಗೇಟು ಕೊಟ್ಟಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯು ಬೆಂಗಳೂರಿನ ಐಟಿ - ಬಿಟಿಯಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು ಹಾಗೂ ತಾರತಮ್ಯ ನೀತಿ ನಿಲ್ಲಬೇಕು ಎನ್ನುವ ಆಗ್ರಹ ಆರಂಭಿಸಿದೆ. ಇದಕ್ಕೆ ಆಗ್ರಹ ಅಭಿಯಾನವನ್ನು ಕರ್ನಾಟಕ ರಕ್ಷಣಾ ವೇದಿಕೆ ಪ್ರಾರಂಭಿಸಿದೆ. ಇದಕ್ಕೆ ಮೋಹನ್‌ದಾಸ್ ಪೈ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಗತ್ತು ಬೆಂಗಳೂರನ್ನು ತಂತ್ರಜ್ಞಾನ ರಾಜಧಾನಿಯನ್ನಾಗಿ ನೋಡುತ್ತಿರುವುದಕ್ಕೆ ಕಾರಣವೇ ಕನ್ನಡಿಗರು. ಕನ್ನಡಿಗರಿಗೇ ಉದ್ಯೋಗ ಇಲ್ಲದಿದ್ರೆ ಸುಮ್ನೆ ಬಿಡ್ತೀವಾ? ನಾವು ಬರುತ್ತಿದ್ದೇವೆ ಎಂದು ಕರವೇ ಹೇಳಿದೆ. ಆದರೆ, ಐಟಿ - ಬಿಟಿ ಕಂಪನಿಗಳಿಗೆ ಈ ರೀತಿ ಕರವೇ ಹೋಗಿ ಮನವಿ ಮಾಡುತ್ತಿರುವುದಕ್ಕೆ ಉದ್ಯಮಿ ಮೋಹನ್ ದಾಸ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಇರುವಾಗ, ರಾಜ್ಯದಲ್ಲಿ ಸ್ವಯಂಘೋಷಿತ ಕಾನೂನು ಪಾಲಕರ ಗುಂಪುಗಳು ಆಡಳಿತ ನಡೆಸುವಂತಿಲ್ಲ. ಇದಕ್ಕೆ ಇನ್ನು ಮುಂದೆ ಅವಕಾಶ ನೀಡಬಾರದು. ಈ ಪ್ರವೃತ್ತಿ ನಿಲ್ಲಲೇಬೇಕು ಎಂದೂ ಉದ್ಯಮಿ ಮೋಹನ್‌ದಾಸ್ ಪೈ ಹೇಳಿದ್ದಾರೆ. ಈ ಟ್ವೀಟ್ ಅನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಮೋಹನ್‌ದಾಸ್ ಪೈ ಟ್ವೀಟ್‌ಗೆ ಕನ್ನಡಿಗರು ಹೇಳಿದ್ದೇನು ?
ಕರ್ನಾಟಕ ರಕ್ಷಣಾ ವೇದಿಕೆಯ ನಡೆಗೆ ಉದ್ಯಮಿ ಮೋಹನ್‌ದಾಸ್ ಪೈ ಅವರು ವಿರೋಧಿಸಿರುವುದಕ್ಕೆ ಕನ್ನಡಿಗರು ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಿಮಗೇನು ಸಮಸ್ಯೆ? ಯಾವುದೇ ಅನಗತ್ಯ ಗಲಾಟೆ ಇಲ್ಲದೆ, ಇದು ಒಂದು ಸೌಹಾರ್ದಯುತ ಭೇಟಿಯಂತೆ ಇದು ಕಾಣುತ್ತಿದೆ. ಮರಾಠಿ ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡಿದಾಗ ನಿಮ್ಮ ಮರಾಠಿ ಸ್ನೇಹಿತರು ಪುಣೆ ಮತ್ತು ಮುಂಬೈನಲ್ಲಿ ಹಲವು ಬಾರಿ ಕಚೇರಿಗಳನ್ನು ಧ್ವಂಸಗೊಳಿಸಿದ್ದಾರೆ. ಅಂತಹದ್ದೇ ಘಟನೆ ನಡೆಯಬೇಕೆಂದು ನೀವು ನಿರೀಕ್ಷಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಸಂದೀಪ್ ಕಂಬಿ ಎನ್ನುವವರು ಪ್ರತಿಯೊಬ್ಬರಿಗೂ ಕೇಳುವ ಹಕ್ಕಿದೆ. ಅವರು ಸರಿಯಾದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಮತ್ತು ಕಾನೂನಿನ ಚೌಕಟ್ಟಿನೊಳಗೆ ಕನ್ನಡಿಗರ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಸಮಸ್ಯೆ ಏನು ಎಂದು ಕೇಳಿದ್ದಾರೆ. ಕನ್ನಡಿಗರನ್ನು ಕೆರಳಿಸುವುದು ಒಳ್ಳೆಯ ಕೆಲಸ, ಇದು ಕನ್ನಡಿಗರ ಏಕೀಕರಣಕ್ಕೆ ಒಳ್ಳೆಯದು. ನಿಮ್ಮ ಪ್ರಬಲ ಸ್ಥಾನ ಕಳೆದುಕೊಳ್ಳುವವರೆಗೂ ಕನ್ನಡ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಲೇ ಇರಿ ಎಂದೂ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.
ಕರ್ನಾಟಕದಲ್ಲಿರುವ ಐಟಿ ಮತ್ತು ಬಿಟಿ ಕಂಪನಿಗಳು ತಮ್ಮ ಉದ್ಯೋಗಿಗಳ ವಿವರಗಳ ಬಗ್ಗೆ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಒಟ್ಟು ಉದ್ಯೋಗಿಗಳ ಸಂಖ್ಯೆ, ಅವರಲ್ಲಿ ಕರ್ನಾಟಕದವರು ಮತ್ತು ಇತರ ರಾಜ್ಯಗಳವರು ಎಷ್ಟು ಮಂದಿ ಹಾಗೂ ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರುವ ಉದ್ಯೋಗಿಗಳ ಸಂಖ್ಯೆ ಎಷ್ಟಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಬೇಕು.
ರಾಜ್ಯ ಸರ್ಕಾರವು ಸಂಬಂಧಪಟ್ಟ ಇಲಾಖೆಯ ಮೂಲಕ ಈ ಮಾಹಿತಿಯನ್ನು ಕಡ್ಡಾಯವಾಗಿ ಪ್ರಕಟಿಸುವಂತೆ ಸೂಚಿಸಬೇಕು. ಇಲ್ಲವೇ ಕಂಪನಿಗಳು ಸ್ವಯಂಪ್ರೇರಣೆಯಿಂದ ಈ ವಿವರಗಳನ್ನು ಪ್ರಕಟಿಸಲು ಪ್ರೋತ್ಸಾಹಿಸಬೇಕು. ಕರ್ನಾಟಕದ ಅಭಿವೃದ್ಧಿಗೆ ನಿಜವಾಗಿಯೂ ಬದ್ಧವಾಗಿರುವ ಮತ್ತು ಮರೆಮಾಚಲು ಏನೂ ಇಲ್ಲದ ಕಂಪನಿಗಳು ಇಂತಹ ಪಾರದರ್ಶಕತೆಗೆ ವಿರೋಧ ವ್ಯಕ್ತಪಡಿಸಬಾರದು.
ನೇಮಕಾತಿಯಲ್ಲಿ ಅನ್ಯಾಯ ನಡೆಯುತ್ತಿದೆ ಎಂಬ ವಿಶ್ವಾಸಾರ್ಹ ಆತಂಕಗಳಿರುವಾಗ, ಉದ್ಯೋಗಕ್ಕೆ ಸಂಬಂಧಿಸಿದ ಅಂಕಿಅಂಶಗಳು ಮತ್ತು ಹೊಣೆಗಾರಿಕೆಯನ್ನು ಕೇಳುವ ಹಕ್ಕು ಕರ್ನಾಟಕದ ಜನರಿಗಿದೆ ಎಂದು ನಾಗೇಂದ್ರ ರಾವ್ ಎನ್ನುವವರು ಆಗ್ರಹಿಸಿದ್ದಾರೆ.


Click it and Unblock the Notifications
