• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮನೆ ಪೂಜೆಗಾಗಿ ಪೂಜಾರಿ ಹುಡುಕಲು ಬಂತು ಮೊಬೈಲ್ ಆ್ಯಪ್

|

ಬೆಂಗಳೂರು, ಅಕ್ಟೋಬರ್ 29: ಈವರೆಗೆ ದೇವರ ದರ್ಶನಕ್ಕೆ ಆನ್‌ಲೈನ್ ಟಿಕೆಟ್ ಬುಕ್ ಮಾಡಿಸುವ ಪದ್ಧತಿ ಇರುವುದು ಎಲ್ಲರಿಗೂ ಗೊತ್ತು, ಇನ್ನುಮುಂದೆ ಮನೆಯಲ್ಲಿ ನಡೆಯುವ ಶುಭ ಕಾರ್ಯಗಳು, ಧಾರ್ಮಿಕ ಆಚರಣೆಗೆ ಬೇಕಾಗುವ ಪೂಜಾರಿಗಳು ಆನ್‌ಲೈನ್ ಮೂಲಕ ಕರೆದರೆ ಮನೆ ಬಾಗಿಲಿಗೆ ಬರುವ ಹೊಸ ಸೇವೆಯೊಂದು ಬೆಂಗಳೂರಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಎಕ್ಸಲೆಂಟ್ ಎಂಜಿನಿಯರಿಂಗ್ ಅಂಡ್ ಕಾರ್ಪೊರೇಟ್ ಸರ್ವೀಸಸ್ ಎಂಬ ಸಂಸ್ಥೆಯು ಮನೆಬಾಗಿಲಿಗೆ ಪೂಜಾರಿಗಳ್ನು ಕಳುಹಿಸಿಕೊಡಲು ಆನ್‌ಲೈನ್ ಪೋರ್ಟಲ್ ಹಾಗೂ ಮೊಬೈಲ್ ಅಪ್ಲಿಕೇಷನ್ ಸೇವೆ 'ಪೂಜಾರಿ ಸರ್ವೀಸಸ್' ಅಕ್ಟೋಬರ್ 29ರಂದು ಪರಿಚಯಿಸುತ್ತಿವೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಉರುಳು ಸೇವೆ ಮಾಡಿದ ಕ್ರೀಡಾಪಟು ಪೂವಮ್ಮ

ನ್ನಮುಂದೆ ಯಾವುದೇ ಧಾರ್ಮಿಕ ಕಾರ್ಯಕ್ರಮ ಹಾಗೂ ಶುಭಾರಂಭಗಳಿಗೆ ಪೂಜಾರಿಗಳು ಬೇಕಾದರೆ ಅಲೆದಾಡಿ ಹುಡುಕುವ ಬದಲು ಮೊಬೈಲ್ ಅಪ್ಲಿಕೇಷನ್ ನಲ್ಲಿ ಸರ್ಚ್ ಮಾಡಿ ತಮಗೆ ಬೇಕಾದ ಪೂಜಾರಿಗಳನ್ನು ಮನೆಗೆ ಆಹ್ವಾನಿಸಬಹುದು. ಅದಕ್ಕಾಗಿ ಸಾಕಷ್ಟು ಮೊದಲೇ ಬುಕಿಂಗ್ ಮಾಡಿಕೊಳ್ಳಬಹುದು. ಬುಕಿಂಗ್ ಸಾಧ್ಯವಾಗದಿದ್ದರೆ ಆನ್ಲೈನ್ ಬುಕಿಂಗ್ ಮಾಡಿಕೊಳ್ಳಬಹುದು. ಬೆಂಗಳೂರಿನ ವಿವಿಧೆಡೆ ಲಭ್ಯವಿರುವ ಪೂಜಾರಿಗಳ ವಿವರಗಳನ್ನು ಪಡೆಯಬಹುದಾಗಿದೆ.

ಮನೆಯ ಗೃಹಪ್ರವೇಶ, ಮದುವೆ, ನಾಮಕರಣ, ಉಪನಯನ, ಸತ್ಯನಾರಾಯಣ ಕತೆ ಏನೇ ಶುಭ ಕಾರ್ಯಗಳಿರಲಿ ಸುಲಭವಾಗಿ ಪೂಜಾರಿಗಳನ್ನು ಹುಡುಕಬಹುದಾಗಿದೆ. ಹಳ್ಳಿಗಳಲ್ಲಾದರೆ ಮನೆಯ ಪುರೋಹಿತರು ಇರುತ್ತಾರೆ, ಅಥವಾ ಪರಿಚಯಸ್ತರಿರುತ್ತಾರೆ ಆದರೆ ಬೆಂಗಳೂರಲ್ಲಿ ಪೂಜಾರಿಗಳನ್ನು ಎಲ್ಲಿ ಅಂತಾ ಹುಡುಕೋದು ಎನ್ನುವುದು ಹಲವು ಮಂದಿಯ ಬೇಜಾರದ ಮಾತಾಗಿತ್ತು. ಕೆಲವೊಂದು ಸಲ ಕಾರ್ಯಕ್ಕೆ ಒಪ್ಪಿಕೊಂಡು ಬಳಿಕ ನಾಳೆ ಬೇರೆಡೆ ಕಾರ್ಯಕ್ರಮವಿದೆ ಎಂದು ಕೈಕೊಡುತ್ತಿದ್ದರು. ಆದರೆ ಇನ್ನುಮುಂದೆ ಹಾಗಾಗುವುದಿಲ್ಲ.

ಮತ್ತೆ ಭುಗಿಲೆದ್ದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸರ್ಪ ಸಂಸ್ಕಾರ, ಆಶ್ಲೇಷ ಪೂಜಾ ವಿವಾದ

ಆಯಾ ಪ್ರದೇಶಕ್ಕೆ ಅನುಸಾರವಾಗಿ ಹತ್ತಿರದಲ್ಲಿರುವ ಪೂಜಾರಿಗಳನ್ನು ಭಕ್ತರು ಆಯ್ಕೆ ಮಾಡಿಕೊಳ್ಳಬಹುದು, ಪೂರ್ವ ನಿಗದಿತ ದಿನಾಂಕ ಹಾಗೂ ಮಾಹಿತಿ ಹಂಚಿಕೊಂಡರೆ ಪೋರ್ಟಲ್ ಸರ್ವೀಸ್ ಮೂಲಕವೇ ಮಾಹಿತಿ ಲಭ್ಯವಾಗಲಿದೆ.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಪ್ಲಿಕೇಷನ್ ಲೋಕಾರ್ಪಣೆಗೊಳಿಸಲಿದ್ದಾರೆ. ಹಿರಿಯ ನಟಿ ತಾರಾ ಅನುರಾಧ ಕಾರ್ಯಕ್ರಮಕ್ಕೆ ಮುಖ್ಯ ಅರ್ತಿಗಳಾಗಿ ಆಗಮಿಸಲಿದ್ದಾರೆ. ಶಾರದಾ ಸ್ತ್ರೀ ಸಮಾಜದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Excellent Engineering and Corporate Services is launching an online portal and mobile application for priests service to door step of Bhaktas on October 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more