ಬೆಂಗಳೂರಲ್ಲಿ ರಾತ್ರೋ ರಾತ್ರಿ ವೈದ್ಯನ ಅಪಹರಣ, ಚಿನ್ನಾಭರಣ ಲೂಟಿ
ಬೆಂಗಳೂರು, ಫೆಬ್ರವರಿ 22: ರಾತ್ರೋ ರಾತ್ರಿ ವೈದ್ಯರೊಬ್ಬರನ್ನು ಅಪಹರಿಸಿ ಚಿನ್ನಾಭರಣ ಲೂಟಿ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ನಿಮ್ಮ ಹತ್ಯೆಗೆ 5 ಲಕ್ಷ ರೂ ಸುಪಾರಿ ನೀಡಿದ್ದಾರೆ ಎಂದು ಆಯುರ್ವೇದಿಕ್ ವೈದ್ಯರಿಗೆ ಬೆದರಿಕೆ ಒಡ್ಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.ಅಗ್ರಹಾರ ದಾಸರಹಳ್ಳಿ ನಿವಾಸಿ ಡಾ. ರವಿಕುಮಾರ್ ಎಂಬುವವರು ಹಲ್ಲೆಗೊಳಗಾದ ವೈದ್ಯ ಅವರು ರಾತ್ರಿ ಕ್ಲಿನಿಕ್‌ನಿಂದ ಮನೆಗೆ ತೆರಳುವಾಗ ಈ ಘಟನೆ ನಡೆದಿದೆ.
ಬೆಂಗಳೂರಿಂದ ಉತ್ತರ ಪ್ರದೇಶಕ್ಕೆ ಹೊರಟಿದ್ದ ತಾಯಿ-ಮಗಳು ಕಿಡ್ನ್ಯಾಪ್
ಮಾಗಡಿ ರಸ್ತೆ ಕೆಎಚ್‌ಬಿ ಕಾಲೊನಿಯ ಕೆಳಸೇತುವೆಯಲ್ಲಿ ವೈದ್ಯರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಬಳಿಕ ಅವರನ್ನು ಕಾರಿನಲ್ಲಿ ಮಾಗಡಿ ಹಾಗೂ ರಾಮನಗರದಲ್ಲಿ ಸುತ್ತಾಡಿಸಿ ರಾತ್ರಿ 1.30ರ ಸುಮಾರಿಗೆ ನಾಗರಬಾವಿ ಸರ್ಕಲ್ ಕೆರೆ ಬಳಿ ತಂದು ಬಿಟ್ಟು ಹೋಗಿದ್ದಾರೆ.
vಸಾಲ ವಾಪಸ್ ನೀಡದ್ದಕ್ಕೆ ಸ್ನೇಹಿತನ ಹೆಂಡತಿಯನ್ನೇ ಮದುವೆಯಾದ ಭೂಪ
ವೈದ್ಯರ ವಜ್ರದ ಉಂಗುರ ಸೇರಿ ಚಿನ್ನಾಭರಣ ದೋಚಿದ್ದಾರೆ ಅವರ ಬಳಿಕ 12 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.