ಹಾಡುಹಗಲೇ ಬೆಂಗಳೂರಲ್ಲಿ ಯುವಕನ ಮೇಲೆ ಮಚ್ಚು, ಲಾಂಗ್‌ನಿಂದ ಹಲ್ಲೆ
ಬೆಂಗಳೂರು, ಜೂನ್ 4: ಹಾಡುಹಗಲೇ ಯುವಕನೊಬ್ಬನಿಗೆ ಮಚ್ಚು ಲಾಂಗಿನನಿಂದ ಹಲ್ಲೆ ಮಾಡಿರುವ ಘಟನೆ ಆಡುಗೋಡಿಯ ರಾಜೇಂದ್ರ ನಗರದಲ್ಲಿ ಸೋಮವಾರ ನಡೆದಿದೆ.
ಮನೋಜ್ ಹಲ್ಲೆಗೊಳಗಾದ ಯುವ, ಕಾರ್ತಿಕ್ ಹಾಗೂ ಪ್ರದೀಪ್ ಗ್ಯಾಂಗ್‌ನಿಂದ ಮನೋಜ್ ಮೇಲೆ ಹಲ್ಲೆ ನಡೆದಿದೆ. ಮನೋಜ್ ಆಡುಗೋಡಿ ನಿವಾಸಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಕಾರ್ತಿಕ್ ಗೆಳೆಯ ಸೂರ್ಯ ತಂದೆ ಸಾವನ್ನಪ್ಪಿದ್ದರು. ಸೂರ್ಯ ತಂದೆ ಕಣ್ಣನ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ತಂದೆ ಸಾವಿಗೆ ಮನೋಜ್ ಕಾರಣ ಎಂದು ಕಾರ್ತಿಕ್ ಆರೋಪ ಮಾಡಿದ್ದರು.

ಗೆಳೆಯ ಸೂರ್ಯನ ಮಾತು ಕೇಳಿ ಮನೋಜ್ ಮನೆಗೆ ನುಗ್ಗಿ ದಮ್ಕಿ ಹಾಕಿದ್ದರು. ಮನೆಗೆ ನುಗ್ಗಿ ಧಮ್ಕಿ ಹಾಕಿದ್ದಕ್ಕೆ ಕೋಪಗೊಂಡ ಕಾರ್ತಿಕ್ ಮನೋಜ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದ್ದು, ಹಲ್ಲೆ ಮಾಡಿದ ಐವರು ಆರೋಪಿಗಳನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಮನೋಜ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.











Click it and Unblock the Notifications