ಮೇಲ್ದರ್ಜೆಗೇರಲಿವೆ ಭಾರತೀಯ ರೈಲ್ವೆಯ 90 ನಿಲ್ದಾಣಗಳು
ಬೆಂಗಳೂರು, ಮಾರ್ಚ್ 27: ಹೆಚ್ಚು ಪ್ರಯಾಣಿಕರನ್ನು ರೈಲ್ವೆ ಎಡೆಗೆ ಸೆಳೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಇಲಾಖೆಯು ತನ್ನ ವ್ಯಾಪ್ತಿಗೆ ಬರುವ 90 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಿದೆ.
ಭಾರತೀಯ ರೈಲ್ವೆ ಇಲಾಖೆಗೆ ಒಳಪಡುವ 90 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಿದೆ. ಖಾಸಗಿ ಸಹಭಾಗಿತ್ವದಲ್ಲಿ 90 ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಪ್ರೇಕ್ಷಣೀಯ ಸ್ಥಳಗಳು, ದೇವಸ್ಥಾನಗಳು ಇರುವ ಪ್ರದೇಶದಲ್ಲಿರುವ ರೈಲ್ವೆ ನಿಲ್ದಾಣ ಹಾಗೂ ಪ್ರತಿನಿತ್ಯ ಕನಿಷ್ಠ 45 ಸಾವಿರ ಪ್ರಯಾಣಿಕರು ಓಡಾಡುವ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತದೆ.
ಭಾರತೀಯ ರೈಲ್ವೆಯು ಈಗಾಗಲೇ 600 ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸುತ್ತಿದೆ. ಹಲವಾರು ನಿಲ್ದಾಣಗಳಲ್ಲಿ ದೇಶದ ಇತಿಹಾಸ, ಸ್ಥಳೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ಮಾಡಲು ತಯಾರಿ ನಡೆಸಲಾಗುತ್ತಿದೆ.

ಶೀಘ್ರದಲ್ಲಿ ಅಜಂತ, ಯಲ್ಲೋರ ರೀತಿಯಲ್ಲಿ ಔರಂಗಾಬಾದ್ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತದೆ. ತಾಜ್ ಮಹಲ್ ಹತ್ತಿರವಿರುವ ಕಾರಣ ಆಗ್ರಾ, ಮಹಾಕಾಳೇಶ್ವರ ದೇವಾಲಯ ಹತ್ತಿರವಿರುವ ಉಜ್ಜೈನ್ ನಿಲ್ದಾಣ, ಬೆಳಗಾವಿಯ ರೈಲ್ವೆ ನಿಲ್ದಾಣ ಕೂಡ ಇದರಲ್ಲಿ ಒಂದಾಗಿದೆ. ಲಖನೌನ ಚಾರ್‌ಬಾಗ್, ಗೋಮ್ಟಿ ನಗರ, ತಿರುಪತಿ ರೈಲ್ವೆ ನಿಲ್ದಾಣ, ಪಾಂಡಿಚೇರಿ, ಗೋವಾದಲ್ಲಿ ಕೋಟಾ ನೆಲ್ಲೂರು ಎರ್ನಾಕ್ಯುಲಮ್ ರೈಲ್ವೆ ನಿಲ್ದಾಣಗಳು ಹೊಸ ವಿನ್ಯಾಸವನ್ನು ಪಡೆಯಲಿವೆ.












Click it and Unblock the Notifications