2022ರ ಮಧ್ಯದಲ್ಲಿ ಚೀನಾದಿಂದ ಬೆಂಗಳೂರಿಗೆ ಬರಲಿವೆ ಮೆಟ್ರೋ ಬೋಗಿಗಳು
ಬೆಂಗಳೂರು, ಜನವರಿ 18: 2022ರ ಮಧ್ಯದಲ್ಲಿ ಚೀನಾದಿಂದ ಬೆಂಗಳೂರಿಗೆ ಮೆಟ್ರೋ ಬೋಗಿಗಳ ಸೇರ್ಪಡೆಯಾಗಲಿದೆ.
ಈ ಕುರಿತು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ. ಚೀನಾ ಹಾಗೂ ಭಾರತದ ಬಾಂಧವ್ಯ ಅಷ್ಟು ಚೆನ್ನಾಗಿಲ್ಲ ಒಂದೊಮ್ಮೆ ಚೀನಾವು ಮೆಟ್ರೋ ಬೋಗಿಗಳನ್ನು ನೀಡದಿದ್ದರೆ ಎನ್ನುವ ಗೊಂದಲ ಈಗ ದೂರವಾಗಿದೆ.
1600 ಕೋಟಿ ವೆಚ್ಚದಲ್ಲಿ 216 ಮೆಟ್ರೋ ಬೋಗಿಗಳನ್ನು ಚೀನಾ ಸರಬರಾಜು ಮಾಡಲಿದೆ. ಆಂಧ್ರಪ್ರದೇಶದಲ್ಲಿರುವ ಪ್ಲಾಂಟ್‌ನಲ್ಲಿ ಬೋಗಿಗಳ ಅಭಿವೃದ್ಧಿ ನಡೆಯುತ್ತಿದೆ.
2022ಕ್ಕೆ 216 ಮೆಟ್ರೋ ಬೋಗಿಗಳನ್ನು ಹಸ್ತಾಂತರಿಸಲಾಗುತ್ತದೆ, ಅದರಲ್ಲಿ 24 ಬೋಗಿಗಳು ಚೀನಾದಿಂದ ಬರಲಿವೆ.

ಉಳಿದ 192 ಬೋಗಿಗಳು ಭಾರತದಲ್ಲಿ ತಯಾರಾಗಲಿದೆ. ಮೆಟ್ರೋ ಬೋಗಿಗಳ ಪೂರೈಕೆ 2023ರವರೆಗೂ ನಡೆಯಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
216 ಮೆಟ್ರೋ ಬೋಗಿಗಳಲ್ಲಿ 126 ಬೋಗಿಗಳನ್ನು ನೇರಳೆ ಹಾಗೂ ಹಸಿರು ಮಾರ್ಗಕ್ಕೆ ನೀಡಲಾಗುತ್ತದೆ. ಉಳಿದ 90 ಬೋಗಿಗಳನ್ನು ಆರ್‌ವಿ ರಸ್ತೆ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗಕ್ಕೆ ನೀಡಲಾಗುತ್ತದೆ.
ಹೊಸ ನಮ್ಮ ಮೆಟ್ರೋ ಮಾರ್ಗದಿಂದ 75 ಸಾವಿರ ಮಂದಿಗೆ ಅನುಕೂಲವಾಗಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.ಕೆಲ ದಿನಗಳ ಹಿಂದೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರೈಲು ಸಂಚಾರ ಸೇವೆ ಆರಂಭಿಸಿ ಕೇಂದ್ರ ಸರ್ಕಾರ ಜನತೆಗೆ ಸಹಾಯ ಮಾಡಿತ್ತು. ಕಡಿಮೆ ದರದಲ್ಲಿ, ಸುಲಭವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುವುದು ಸಾಕಾರವಾಗಿದೆ.
ಈ ಮೆಟ್ರೋ ಮಾರ್ಗದಿಂದಾಗಿ ನಿತ್ಯ 75 ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.ಈ ಮಾರ್ಗದಲ್ಲಿ ಒಟ್ಟು ಐದು ಮಾರ್ಗಗಳು ಬರಲಿವೆ. ಇದೀಗ ನಗರದ ಸಂಚಾರಿಗಳಿಗೆ ಮತ್ತೊಂದು ಅಂತಹದ್ದೇ ರೀತಿಯ ಸೇವೆ ನೀಡುತ್ತಿರುವ ಸರ್ಕಾರದಿಂದ ಯೆಲಚೇನಹಳ್ಳಿಯಿಂದ ಸಿಲ್ಕ್ ಇನ್ಸ್ ಟಿಟ್ಯೂಟ್ ಗೆ ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೊ ಸಂಚಾರ ಆರಂಭವಾಗಲಿದೆ.












Click it and Unblock the Notifications