• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಪಾರ್ಟ್‌ಮೆಂಟ್‌ಗಳಿಗೆ ಸಿಸಿ ಕ್ಯಾಮರಾ, ಮೆಟಲ್ ಡಿಟೆಕ್ಟರ್ ಕಡ್ಡಾಯ

|

ಬೆಂಗಳೂರು, ನವೆಂಬರ್ 13: ಅಪಾರ್ಟ್‌ಮೆಂಟ್‌ಗಳಲ್ಲಿ ಕಳ್ಳತನ, ಕೊಲೆ ಇನ್ನಿತರೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರಾ ಹಾಗೂ ಮೆಟಲ್ ಡಿಟೆಕ್ಟರ್ ಅಳವಡಿಕೆ ಕಡ್ಡಾಯಗೊಳಿಸುವಂತೆ ಪೊಲೀಸ್ ಇಲಾಖೆ ನೋಟಿಸ್ ಜಾರಿಮಾಡಿದೆ.

ನಿತ್ಯ 100ಕ್ಕಿಂತ ಹೆಚ್ಚು ಮಂದಿ ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡುತ್ತಾರೆ, ಕರ್ನಾಟಕದ ಸಾರ್ವಜನಿಕ ಸುರಕ್ಷತೆ ಜಾರಿ ನಿಯಮ2018ರ ಅನ್ವಯ ಬಸವೇಶ್ವರ ನಗರದ ಠಾಣೆ ಪೊಲೀಸರು ಇತ್ತೀಚೆಗೆ ಕುರುಬರಹಳ್ಳಿಯ ಅಪಾರ್ಟ್‌ಮೆಂಟ್‌ವೊಂದಕ್ಕೆ ಈ ರೀತಿಯ ನೋಟಿಸ್ ಜಾರಿಗೊಳಿಸಲಾಗಿದೆ.

KSRTC:ಕೇಂದ್ರೀಯ ವಿಭಾಗದಲ್ಲಿ 184 ಸಿಸಿಟಿವಿ ಕಣ್ಗಾವಲು

ನಮಗೆ ಇತ್ತೀಚೆಗೆ ಪೊಲೀಸ್ ಠಾಣೆಯಿಂದ ಇಂತದ್ದೊಂದು ನೋಟಿಸ್ ಬಂದಿದೆ. ಅತಿ ಹೆಚ್ಚು ಪ್ರಖರತೆಯುಳ್ಳ ಸಿಸಿಟಿವಿ, ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ ಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ನಿವಾಸಿಗಳಿಗೆ ಗುರುತಿನ ಚೀಟಿ ನೀಡಬೇಕು ಎಂದು ಕೂಡ ಉಲ್ಲೇಖಿಸಲಾಗಿದೆ.

ರಂಗೋಲಿ ಮೆಟ್ರೋ ಕಲಾಕೇಂದ್ರಕ್ಕೆ ಸಂಜೆ 7ರ ನಂತರ ಪ್ರವೇಶ ನಿರ್ಬಂಧ

ಕನಿಷ್ಠ 4ರಿಂದ 5 ಲಕ್ಷ ರೂ ವೆಚ್ಚ ತಗುಲುತ್ತದೆ. ಕೇವಲ ವಾಣಿಜ್ಯ ಕಾರ್ಯಗಳಿಗೆ ಬಳಸುವ ಅಪಾರ್ಟ್ ಮೆಂಟ್ ಗಳಲ್ಲಿ ಮಾತ್ರ ಇಂತಹ ನಿಯಮ ಪಾಲಿಸುವಂತೆ ಸರ್ಕಾರದ ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿದೆ. ಆರೆ ಇಂತಹ ನಿಯಮಗಳನ್ನು ನಾವೇಕೆ ಪಾಲಿಸಬೇಕು ಎಂದು ಅಪಾರ್ಟ್ ಮೆಂಟ್ ನಿವಾಸಿಗಳು ಪ್ರಶ್ನಿಸಿದ್ದಾರೆ.

English summary
Apartments like visiting more than 100 people everyday should have install metal detector, human body and belongings scanner are mandatory apart from CCTV cameras in Bangalore. Police have issued notice several apartments recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X