Bengaluru Fire Accident: ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: 19 ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುಟ್ಟು ಭಸ್ಮ
ಬೆಂಗಳೂರು, ಅಕ್ಟೋಬರ್ 2: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಅಕ್ಟೋಬರ್ 2) ಬೆಳ್ಳಂಬೆಳಗ್ಗೆ ಕಮರ್ಷಿಯಲ್ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ವೇಳೆ 19 ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಕನಕಪುರ ಮುಖ್ಯರಸ್ತೆಯಲ್ಲಿನ ಯಲಚೇನಹಳ್ಳಿಯ ಮೂರು ಅಂತಸ್ತಿನ ಕಮರ್ಷಿಯಲ್ ಕಟ್ಟಡದಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಇನ್ನು 19 ಇವಿ ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಡಾಮಿನೋಸ್ ಪಿಜ್ಜಾ ಪಾರ್ಕಿಂಗ್ ಆವರಣದಲ್ಲಿ ಇದ್ದ ಬೈಕ್‌ಗೆ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.

ಎಲೆಕ್ಟ್ರಿಕ್ ದ್ವಿಚಕ್ರವಾಹನ ಪ್ಲಗ್ ಪಾಯಿಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿದ್ದ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೊತ್ತಿ ಉರಿದಿವೆ. ಇದೇ ವೇಳೆ ನೆಲಮಹಡಿಯಲ್ಲಿದ್ದ 6 ಸಿಲಿಂಡರ್‌ಗಳು ಗ್ಯಾಸ್ ಸೋರಿಕೆಯಾಗಿ ಸ್ಫೋಟ ಆಗಿವೆ. ಸ್ಥಳೀಯರ ಮಾಹಿತಿ ಮೇರೆಗೆ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಯಲಚೇನಹಳ್ಳಿಯ ಕಮರ್ಷಿಯಲ್ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಇವಿ ಬೈಕ್‌ಗಳ ಚಾರ್ಜಿಂಗ್ ಪಾಯಿಂಟ್ ಇದ್ದು, ಅಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ ಎಂದು ಶಂಕಿಸಲಾಗಿದೆ. ಚಾರ್ಜ್ ಆಗುತ್ತಿದ್ದ ಬೈಕ್‌ಗ ಒಂದರಲ್ಲಿ ಓವರ್ ಹೀಟ್ ಆಗಿ ಬೆಂಕಿ ತಗುಲಿದ್ದು, ಅದು ಅಕ್ಕಪಕ್ಕದಲ್ಲಿದ್ದ ಇವಿ ಬೈಕ್‌ಗಳಿಗೆ ಹೊತ್ತಿ ಉರಿದಿದೆ.
ಅಲ್ಲದೆ, ಬೇಸ್‌ಮೆಂಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಾಯಿಂಟ್‌ನಲ್ಲಿದ್ದ ವೈರ್‌ಗೆ ಬೆಂಕಿ ತಗುಲಿ ಗ್ಯಾಸ್ ಲೀಕ್ ಉಂಟಾಗಿ, ಒಂದು ಸಿಲಿಂಡರ್ ಬ್ಲಾಸ್ಟ್ ಆಗಿತ್ತು. ಇದರಿಂದ ಸ್ಥಳೀಯರು ಬೆಂಕಿ ಭಯಭೀತರಾದ ಘಟನೆ ನಡೆದದಿದೆ. ಸ್ಥಳೀಯರ ಮಾಹಿತಿ ಪ್ರಕಾರ, ಬೆಳಗ್ಗೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿ ಹೊಗೆ ಉಸಿರಾಟಕ್ಕೆ ಭಾರೀ ತೊಂದರೆಯಾಗಿದ್ದು, ತಕ್ಷಣ ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿದೆವು ಎಂದು ತಿಳಿಸಿದರು.
ಸದ್ಯ ಘಟನೆಯಲ್ಲಿ ಯಾವುದೇ ಜೀವನ ಹಾನಿ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, 19 ಇವಿ ಬೈಕ್‌ಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಡೋಮಿನೋಸ್ ಪಿಜ್ಜಾ ಪಾರ್ಕಿಂಗ್‌ನಲ್ಲಿದ್ದ ಇತರ ವಾಹನಗಳು ಕೂಡ ಬೆಂಕಿ ಕೆನ್ನಾಲಿಗೆಗೆ ಹಾನಿಗೆ ಒಳಗಾಗಿವೆ ಎಂದು ತಿಳಿದುಬಂದಿದೆ.
ಕುಮಾರಸ್ವಾಮಿ ಲೇಔಟ್ ಪೊಲೀಸ್ ಇನ್‌ಸ್‌ಪೆಕ್ಟರ್ ಮಾತನಾಡಿದ್ದು, ಚಾರ್ಜಿಂಗ್ ಪಾಯಿಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಮತ್ತು ಗ್ಯಾಸ್ ಲೀಕ್ ಕಾರಣದಿಂದ ಅಗ್ನಿ ಅಪಘಡ ಸಂಭವಿಸಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ. ಕಟ್ಟಡ ಮಾಲೀಕರ ವಿರುದ್ಧ ಭದ್ರತಾ ನಿಯಮಗಳ ಉಲ್ಲಂಘನೆಯ ಕುರಿತು ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ. ಇನ್ನೂ ಇಂತಹ ಅಗ್ನಿ ಅವಘಡಗಳು ನಡೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಹ ಎಲೆಕ್ಟ್ರಿಕ್ ಸ್ಕೂಟಿಗಳು ನಡುರಸ್ತೆಯಲ್ಲೇ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಘಟನೆಗಳು ನಡೆದಿವೆ.

Click it and Unblock the Notifications