ಪಾದರಾಯನಪುರದಲ್ಲಿ 'ಮಾಸ್' ಟೆಸ್ಟಿಂಗ್ ಶುರು: ಮಹತ್ವದ ಆಪರೇಷನ್ ಗೆ ಬಿಬಿಎಂಪಿ ಸಜ್ಜು!

ಬೆಂಗಳೂರು, ಮೇ 13: ಮಾರಣಾಂತಿಕ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಬೆಂಗಳೂರಿನಲ್ಲಿ ಅತಿ ಹೆಚ್ಚು ದಾಖಲಾಗಿರುವುದು ಪಾದರಾಯನಪುರ ವಾರ್ಡ್ ನಲ್ಲಿ. ಇಲ್ಲಿಯವರೆಗೂ ಪಾದರಾಯನಪುರದಲ್ಲಿ ಒಟ್ಟು 49 ಸೋಂಕಿತರು ಪತ್ತೆಯಾಗಿದ್ದಾರೆ.

ಹೀಗಾಗಿ, ಪಾದರಾಯನಪುರದಲ್ಲಿ ನೆಲೆಸಿರುವ ಎಲ್ಲರನ್ನೂ ಕೋವಿಡ್-19 ಪರೀಕ್ಷೆಗೆ ಒಳಪಡಿಸಲು ಬಿಬಿಎಂಪಿ ಮುಂದಾಗಿದೆ. ಇಂದಿನಿಂದ ಪಾದರಾಯನಪುರದಲ್ಲಿ ಎಲ್ಲರ ಗಂಟಲು ದ್ರವ ಪರೀಕ್ಷೆ ನಡೆಯಲಿದೆ.

ಪಾದರಾಯನಪುರದ 14, 15 ಮತ್ತು 16 ನೇ ಕ್ರಾಸ್ ಗಳಲ್ಲಿ ಹೆಚ್ಚಿನ ಪಾಸಿಟಿವ್ ಕೇಸ್ ಗಳು‌ ದೃಢಪಟ್ಟಿವೆ. ಆದ್ದರಿಂದ, ಈ ಮೂರು ರಸ್ತೆಗಳು ಮತ್ತು ಅದರ ಸುತ್ತ 100 ಮೀಟರ್ ವಿಸ್ತೀರ್ಣದ ಒಳಭಾಗದಲ್ಲಿರುವ ರಸ್ತೆಯಲ್ಲಿರುವವರನ್ನು ಮೊದಲು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗುತ್ತದೆ.

Mass Testing For Covid 19 To Take Place In Padarayanapura From Today

ಪಾದರಾಯನಪುರದಲ್ಲಿ ನೆಲೆಸಿರುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ಪರೀಕ್ಷೆ ನಡೆಸಲು ಬಿಬಿಎಂಪಿ ಸಜ್ಜಾಗಿದೆ.

ವೋಟರ್ ಲಿಸ್ಟ್ ಪ್ರಕಾರ, ಬಿಬಿಎಂಪಿ ತಂಡ ಮನೆ ಮನೆಗೂ ತೆರಳಿ ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+