ಚೀನಾ ವಾರ್‌ನಲ್ಲಿ ಮಡಿದವರ ವೀರಗಲ್ಲು ಶೀಘ್ರ ಸ್ಥಳಾಂತರ: ಪರಮೇಶ್ವರ

ಬೆಂಗಳೂರು, ನವೆಂಬರ್ 12: ನ್ಯಾಷನಲ್ ಮಿಲಿಟರಿ ಸ್ಮಾರಕಕ್ಕೆ ಶೀಘ್ರವೇ ವೀರಗಲ್ಲು ಸ್ಥಳಾಂತರಿಸುವ ಕೆಲಸವನ್ನು ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಭಾರತ ಮತ್ತು ಚೀನಾ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿ ಹುತಾತ್ಮರಾದ ವೀರಯೋಧರ ಸ್ಮರಣಾರ್ಥವಾಗಿ ಇಂದು ನ್ಯಾಷನಲ್ ಮಿಲಿಟರಿ ಸ್ಮಾರಕದಲ್ಲಿ ಪುಷ್ಪ ಸಮರ್ಪಿಸುವ ಮೂಲಕ ಗೌರವ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಚೀನಾ ಹಾಗೂ ಪಾಕಿಸ್ತಾನದ ಗಡಿ ಕಾಯುವ ಯೋಧರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ್ದಾರೆ. ಅವರನ್ನು ಪ್ರತಿ ವರ್ಷ ಸ್ಮರಿಸಲೆಂದೇ ನಗರದಲ್ಲಿ ಸ್ಮಾರಕ ಉದ್ಯಾನವನ ನಿರ್ಮಿಸಿದ್ದೇವೆ. ಈ ಮೂಲಕ ಅವರಿಗೆ ಪ್ರತಿ ವರ್ಷ ಗೌರವ ಸಲ್ಲಿಸಬೇಕು ಎಂದರು.

Martyrs stones will be shifted military memoire

ಈ ಸ್ಮಾರಕ ಉದ್ಯಾನವನಕ್ಕಾಗಿ 1 ಕೋಟಿ ರು. ವೆಚ್ಚ ಮಾಡಿದ್ದು ಇದರ ನಿರ್ವಹಣೆಗೂ ಪ್ರತಿ ವರ್ಷ ಹಣ ಬಿಡುಗಡೆ ಮಾಡಲಾಗುತ್ತದೆ. ಜೊತೆಗೆ ಎನ್‌ಡಬ್ಲ್ಯುಎನ್‌ ಗೂ ಪ್ರತಿ ವರ್ಷ 57 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು. ಶೀಘ್ರ ವೀರಗಲ್ಲು ಸ್ಥಳಾಂತರಿಸುವ ಕಾರ್ಯವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+