ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾವ್ಯಾವ ರೈಲುಗಳು ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಶಿಫ್ಟ್‌?

|
Google Oneindia Kannada News

ಬೆಂಗಳೂರು, ಜೂನ್ 4: ನಗರದ ಯಶವಂತಪುರ ಹಾಗೂ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಹೆಚ್ಚು ರೈಲುಗಳನ್ನು ನಿಲ್ಲಿಸಲು ಇಕ್ಕಟ್ಟಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ರೈಲುಗಳನ್ನು ಬೈಯಪ್ಪನಹಳ್ಳಿಗೆ ಶಿಫ್ಟ್ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ನೈಋತ್ಯ ರೈಲ್ವೆಯು 32 ಜೊತೆ ರೈಲುಗಳನ್ನು ಬೈಯಪ್ಪನಹಳ್ಳಿಗೆ ಸ್ಥಳಾಂತರಿಸುವಂತೆ ಕೋರಿದೆ. ಹುಬ್ಬಳ್ಳಿಯಲ್ಲಿರುವ ನೈಋತ್ಯ ರೈಲ್ವೆಯ ಮುಖ್ಯ ಖಚೇರಿಯಿಣದ ಮೇ 20 ಪತ್ರ ರವಾನಿಸಲಾಗಿದೆ. ಅಲ್ಲಿಂದ ರೈಲ್ವೆ ಮಂಡಳಿಗೆ ರವಾನಿಸಲಾಗಿದೆ.

ಬೆಂಗಳೂರಲ್ಲಿ ರೈಲ್ವೆ ಪ್ರಯಾಣಿಕರ ಮೊಬೈಲ್ ಕದಿಯೋದು ಇವರೇ ನೋಡಿ ಬೆಂಗಳೂರಲ್ಲಿ ರೈಲ್ವೆ ಪ್ರಯಾಣಿಕರ ಮೊಬೈಲ್ ಕದಿಯೋದು ಇವರೇ ನೋಡಿ

ಹೌರಾ ಎಕ್ಸ್‌ಪ್ರೆಸ್, ಗುವಾಹಟಿ ಎಕ್ಸ್‌ಪ್ರೆಸ್, ಎರ್ನಾಕ್ಯುಲಮ್ ಎಕ್ಸ್‌ಪ್ರೆಸ್, ಕೋಚುವೇಲಿ ಎಕ್ಸ್‌ಪ್ರೆಸ್ ಇನ್ನು ಪ್ರಮುಖ ರೈಲುಗಳು ಬೈಯಪ್ಪನಹಳ್ಳಿಗೆ ಸ್ಥಳಾಂತರವಾಗಬೇಕಿದೆ.

Many trains to shifts Baiyappanahalli

ಯಶವಂತಪುರದಿಂದ 19 ಜೊತೆ ರೈಲುಗಳು ಸ್ಥಳಾಂತರಗೊಳ್ಳುವ ಕುರಿತು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಗೊಳ್ಳಿಯ ರಾಯಣ್ಣ ರೈಲ್ವೆ ನಿಲ್ದಾಣದಿಂದ ಕೇವಲ ಎರಡು ಜೋಡಿ ರೈಲುಗಳು ಮಾತ್ರ ಶಿಫ್ಟ್ ಆಗಲಿದೆ.

ಬಾಣಸವಾಡಿ ಹಾಗೂ ಕಂಟೋನ್ಮೆಂಟ್ ಇಂದ ಐದು ಜೊತೆ ರೈಲು, ಒಂದು ರೈಲು ಕೆಆರ್ ಪುರಂ ನಿಂದ ಶಿಫ್ಟ್ ಆಗಲಿದೆ. ನಗರದಲ್ಲಿ ಹೆಚ್ಚು ಮಳೆ ಹೊಯ್ದರೆ ನಿಗದಿತ ಸಮಯದಲ್ಲಿ ನಿಲ್ದಾಣದಿಂದ ರೈಲು ಹೊರಡಲು ಸಾಧ್ಯವಾಗುವುದಿಲ್ಲ ಎಂದು ರೈಲ್ವೆ ಇಲಾಖೆಯ ವಾದವಾಗಿದೆ.

English summary
Due to congession in Cities Railway stations So South western Railways plan to shift Many trains to Baiyappanahalli Railway station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X