ವಿಜಯ ಕುಮಾರ್ ಹಠಾತ್ ನಿಧನಕ್ಕೆ ಭಾವುಕರಾದ ಅಭಿಮಾನಿಗಳು
ಬೆಂಗಳೂರು, ಮೇ 04: ಯಾವ ವಿವಾದವನ್ನೂ ತಮ್ಮ ಮೇಲೆ ಎಳೆದುಕೊಳ್ಳದ, ಯಾರಿಗೂ ಕೇಡು ಬಯಸದ ಸರಳ, ಸಜ್ಜನ ರಾಜಕಾರಣಿ ಬಿ ಎನ್ ವಿಜಯ ಕುಮಾರ್.
60 ವರ್ಷ ಎಂದರೆ ಸಾಯುವ ವಯಸ್ಸೇನಲ್ಲ. ಆದರೆ ಚುನಾವಣೆಯ ಹೊತ್ತಿನ ದಣಿವರಿಯದ ಕೆಲಸ, ಪರಿಶ್ರಮದಿಂದ ಅವರು ಹೃದಯಾಘಾತದಿಂದ ಮೃತರಾಗಿದ್ದಾರೆ. ಈ ಮೊದಲೇ ಅವರಿಗೆ ಸ್ಟೆಂಟ್ ಅಳವಡಿಸಲಾಗಿತ್ತು. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದರೂ, ಜಯನಗರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ವಿಜಯಕುಮಾರ್ ನಿರಂತರ ಪ್ರಚಾರದಲ್ಲಿ ತೊಡಗಿದ್ದರು.
ಜನಾನುರಾಗಿ ನಾಯಕ ಎನ್ನಿಸಿಕೊಂಡಿದ್ದ ವಿಜಯ ಕುಮಾರ್ ಅವರ ಅಕಾಲಿಕ ನಿಧನಕ್ಕೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರ ಈ ಸಂತಾಪ, ಶಾಸಕರು ಜನಮನದಲ್ಲಿ ಗಳಿಸಿದ್ದ ಸ್ಥಾನ ಯಾವುದು ಎಂಬುದನ್ನು ತೋರಿಸಿಕೊಟ್ಟಿದೆ.
ಚಿತ್ರಗಳಲ್ಲಿ: ಸಜ್ಜನ ರಾಜಕಾರಣಿ ವಿಜಯಕುಮಾರ್ ಗೆ ಅಂತಿಮ ನಮನ
ಗುರುವಾರ ಚುನಾವಣಾ ಪ್ರಚಾರ ನಡೆಸುತ್ತಿದ್ದ ಜಯನಗರ ಕ್ಷೇತ್ರದ ಹಾಲಿ ಶಾಸಕ ಮತ್ತು ಬಿಜೆಪಿ ಅಭ್ಯರ್ಥಿ ಬಿ ಎನ್ ವಿಜಯ ಕುಮಾರ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಹೃದಯಾಘಾತದಿಂದ ಕುಸಿದು ಬಿದ್ದ ಅವರನ್ನು ತಕ್ಷಣವೇ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗಿನ ಜಾವ 1 ಗಂಟೆಗೆ ನಿಧನರಾದರು.
| Array |
ಸ್ವಚ್ಛ ರಾಜಕೀಯದ ದಂತಕತೆ
ಶುದ್ಧ ರಾಜಕಾರಣದ ದಂತಕತೆಯಾಗಿದ್ದ ಬಿ ಎನ್ ವಿಜಯಕುಮಾರ್ ಸರಳ ವ್ಯಕ್ತಿ. ಎಂಟು ವರ್ಷದ ಹಿಂದೆ ನಾನು ಅವರಿಗೆ ಕರೆ ಮಾಡಿದ್ದೆ. ಆಗ ಅವರು ಫೋನ್ ತೆಗೆದುಕೊಂಡಿರಲಿಲ್ಲ. ಆದರೆ ಮಿಸ್ಡ್ ಕಾಲ್ ನೋಡಿ ಅವರೇ ಹಿಂತಿರುಗಿ ಫೋನಾಯಿಸಿದ್ದರು. ಭಾರತಕ್ಕೆ ಇಂಥ ವಿಧೇಯ ರಾಜಕಾರಣಿಗಳು ಹೆಚ್ಚು ಹೆಚ್ಚು ಬೇಕಾಗಿದೆ. ಓಂ ಶಾಂತಿ ಎಂದಿದ್ದಾರೆ ನರೇಂದ್ರ ಮೂರ್ತಿ ಎಂಬುವವರು.
|
ಜನ ಮೆಚ್ಚಿದ ನಾಯಕ
ಬೆಂಗಳೂರಿನ ಸರಳ, ಆತ್ಮೀಯ ರಾಜಕಾರಣಿಗಳಲ್ಲಿ ಅತೀ ಹೆಚ್ಚು ಜನ ಮೆಚ್ಚುಗೆ ಗಳಿಸಿದವರು ಬಿ ಎನ್ ವಿಜಯಕುಮಾರ್. ಜಯನಗರದಿಂದ ಎರಡು ಭಾರಿ ಶಾಸಕರಾಗಿದ್ದ ವಿಜಯ ಕುಮಾರ್ ಇಂದು ಬೆಳಿಗ್ಗೆ ನಿಧನರಾದರು. ಇದು ಬಿಜೆಪಿಗೆ ಅತೀ ದೊಡ್ಡ ನಷ್ಟ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಸರ್ ಎಂದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ ರಾಘು.
|
ಅವರು ಶಾಸಕ ಎಂದು ಅನ್ನಿಸುತ್ತಲೇ ಇರಲಿಲ್ಲ
ವಿಜಯ ಕುಮಾರ್ ಅವರ ಅಗಲಿಕೆ ನಿಜಕ್ಕೂ ಬಹಳ ಬೇಸರವನ್ನುಂಟು ಮಾಡಿದೆ. ಅವರೊಬ್ಬ ಪ್ರಾಮಾಣಿಕ, ಉತ್ತಮ ಶಾಸಕ. ಅವರನ್ನು ನಾನು ಹಲವು ಬಾರಿ ಭೇಟಿಯಾಗಿದ್ದೇನೆ, ಮಾತನಾಡಿದ್ದೇನೆ. ಆದರೆ ಅವರೊಂದಿಗೆ ಮಾತನಾಡುವಾಗ ಎಂದಿಗೂ, ನಾನೊಬ್ಬ ಶಾಸಕರೊಂದಿಗೆ ಮಾತನಾಡುತ್ತಿದ್ದೇನೆ ಎನ್ನಿಸುತ್ತಲೇ ಇರಲಿಲ್ಲ. ಅವರು ನಮ್ಮ ನೆರೆ ಮನೆಯ ಅಂಕಲ್ ಎಂಬಷ್ಟೇ ಆತ್ಮೀಯತೆಯಿಂದ ಮಾತನಾಡುತ್ತಿದ್ದರು ಎಂದು ಅವರೊಡನೆ ಒಡನಾಡಿದ ಅನುಭವವನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ.
|
ಜನರ ಶಾಸಕರನ್ನು ಕಳೆದುಕೊಂಡಿದ್ದೇವೆ!
ನಿಜಕ್ಕೂ ಅತ್ಯಂತ ನೋವಿನ ಸಂಗತಿ. ನಾವು ಒಬ್ಬ ವಿದೇಯ, ಪ್ರಾಮಾಣಿಕ ಮತ್ತು ಜನರ ಶಾಸಕರನ್ನು ಕಳೆದುಕೊಂಡಿದ್ದೇವೆ ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ ಅಶ್ವಿನ್ ಕಣ್ಣನ್.
|
ದೇವರಂಥ ವ್ಯಕ್ತಿ
ಭಾರತೀಯ ರಾಜಕಾರಣದಲ್ಲಿ ನನಗೆ ತಿಳಿದ ದೇವರಂಥ ಶುದ್ಧ ವ್ಯಕ್ತಿ ಎಂದರೆ ವಿಜಯ ಕುಮಾರ್. ಅವರು ಪ್ರತಿಯೊಬ್ಬರಿಗೂ ಅಪರಿಮಿತ, ನಿಸ್ವಾರ್ಥ ಪ್ರೀತಿ ತ್ತು ಸೇವೆ ಸಲ್ಲಿಸಿದವರು. ಜೀವನದುದ್ದಕ್ಕೂ ಅವರು ಹಾಗೆಯೇ ಬದುಕಿದರು. ಭಾರತ ಒಬ್ಬ ಒಳ್ಳೆಯ ಮಗನನ್ನು ಕಳೆದುಕೊಂಡಿದೆ ಎಂದಿದ್ದಾರೆ ವರಾ ಕುಮಾರ್.
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ












Click it and Unblock the Notifications