Lalbagh Mango Mela: ಲಾಲ್‌ಬಾಗ್‌ನಲ್ಲಿ ಮಾವು-ಹಲಸು ಮೇಳ ಆರಂಭ: ಬಾಯಲ್ಲಿ ನೀರೂರಿಸುವ ಹಣ್ಣುಗಳ ಖರೀದಿ ಜೋರು
ಬೆಂಗಳೂರು ಮೇ 24: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಇಂದು (ಮೇ 24) ಮಾವು ಹಲಸು ಮೇಳ ಆರಂಭವಾಗಿದೆ. ಇದು ಜೂನ್ 10ರವರೆಗೆ ನಡೆಯಲಿದೆ. ಮೇಳವನ್ನು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಆಯೋಜಿಸಿದೆ.
ಗ್ರಾಹಕರಿಗೆ ಹಣ್ಣುಗಳನ್ನು ಖರೀದಿಸಲು ಅನುಕೂಲವಾಗುವಂತೆ 74 ಮಳಿಗೆಗಳನ್ನು ಮಾವು ಬೆಳೆಗಾರರಿಗೆ, 9 ಮಳಿಗೆ ಹಲಸು ಬೆಳೆಗಾರರಿಗೆ ಮತ್ತು 14 ಮಳಿಗೆಗಳನ್ನು ಇತರೆ ಹಣ್ಣಿನ ಉತ್ಪನ್ನಗಳ ಮಾರಾಟಕ್ಕೆ ಒದಗಿಸಲಾಗಿದೆ. ಮೇಳ ಪ್ರತಿದಿನ ಬೆಳಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ನಡೆಯಲಿದೆ.

ಮಾವು, ಹಲಸನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದಾಗಿದೆ ಘೋಷಿಸಿಲ್ಲ. ಈ ಮೇಳದಲ್ಲಿ ಸಹಜವಾಗಿ ಮಾಗಿದ ಅಥವಾ ಇಥಲೀನ್ ಉಪಚರಿಸಿ ಮಾಗಿಸಿದ ಹಣ್ಣುಗಳನ್ನಷ್ಟೆ ಮಾರಾಟಕ್ಕೆ ಅವಕಾಶ ಕಲ್ಪಸಲಾಗಿದೆ.
ಬಾದಾಮಿ, ಮಲ್ಲಿಕಾ, ಅಮ್ರಪಾಲಿ, ದಶೇರಿ, ಬಂಗನಪಲ್ಲಿ, ರಸಪುರಿ, ಇಮಾಮ್‌ಪಸಂದ್, ಸಕ್ಕರೆಗುತ್ತಿ, ಕಾಲಪಾಡ್, ಕೇಸರ್, ಮಲಗೋವ, ಸೇಂದೂರ, ತೋತಾಪುರಿ, ನೀಲಂ ತಳಿಗಳು ಹಾಗೂ ಆಕಾರ, ಗಾತ್ರದ ಕಾರಣದಿಂದ ಭೌಗೋಳಿಕ ಸೂಚನೆ ಟ್ಯಾಗ್ ಪಡೆದಿರುವ ಉತ್ತರಕನ್ನಡ ಜಿಲ್ಲೆಉ ಅಂಕೋಲಾ ತಾಲೂಕಿನ ಕರಿಇಶಾದ್ ಮಾವು ಮೇಳದಲ್ಲಿ ಲಭ್ಯವಿರಲಿದೆ. ಹಲಸಿನ ಹಣ್ಣುಗಳು ಕೂಡ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಗ್ರಾಹಕರು ವ್ಯಾಪಾರ ಮಾಡಬಹುದಾಗಿದೆ. ಮೇಳದ ಅವಧಿಯಲ್ಲಿ, ಗ್ರಾಹಕರು ಯೋಗ್ಯ ಬೆಲೆಗೆ ತಾಜಾ ಹಣ್ಣುಗಳನ್ನು ಕೊಂಡುಕೊಳ್ಳಬಹುದಾಗಿದೆ. ಸಹಜವಾಗಿ ಮಾಗಿದ ಅಥವಾ ಇಥಲೀನ್ ಉಪಚರಿಸಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರುವ ಅವಕಾಶವನ್ನು ಕಲ್ಪಿಸಲಾಗಿದೆ.
ಮಾವಿನ ಮೇಳಕ್ಕೆ ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ, ಹಾವೇರಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ಮಾವು ಬೆಳೆಗಾರರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಈ ಬೃಹತ್ ಮಾವು ಹಾಗೂ ಹಲಸಿನ ಮೇಳದಲ್ಲಿ ಭಾಗಿಯಾಗಲು ಸಿಲಿಕಾನ್ ಸಿಟಿ ಜನರು ಉತ್ಸಾಹದಿಂದ ಆಗಮಿಸುತ್ತಿದ್ದಾರೆ.
ನೀವು ಕೂಡ ರಾಜ್ಯದ ವಿವಿದೆಡೆಯಿಂದ ಬರುವ ಮಾವು ಹಾಗೂ ಹಲಸಿನ ಹಣ್ಣಿನ ರುಚಿ ನೋಡಬೇಕು ಅಂದು ಕೊಂಡಿದ್ದರೆ ಲಾಲ್‌ಬಾಗ್‌ಗೆ ಭೇಟಿ ನೀಡಬಹುದು. ಒಂದೇ ಸೂರಿನಡಿ ಬಗೆ ಬಗೆಯ ಮಾವಿನ ಹಣ್ಣುಗಳನ್ನು ಖರೀದಿಸಿ ಸವಿಯಬಹುದು. ಅಲ್ಲದೇ ಮಾವು ಮತ್ತು ಹಲಸು ಬೆಳೆಗಾರರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಿ ಬೆಳಗಾರರಿಗೆ ಯೋಗ್ಯವಾದ ಬೆಲೆ ಒದಗಿಸಲು ಮೇಳ ನಡೆಯುತ್ತಿದೆ.
ರಾಜ್ಯದಲ್ಲಿ ಮಾವು ಬೆಳೆಯನ್ನು ಸುಮಾರು 1.49 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆಯುತ್ತಿದ್ದು, ಸರಾಸರಿ ಪ್ರತಿವರ್ಷ 12-14 ಲಕ್ಷ ಟನ್‌ಗಳಷ್ಟು ಇಳುವರಿ ಬರುತ್ತಿದೆ. ಪ್ರಸಕ್ತ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಾವು ಉತ್ಪಾದನೆ ಕಡಿಮೆಯಾಗಿದ್ದು ಸರಾಸರಿ ಶೇ. 30 ರಷ್ಟು ಫಸಲು ಮಾತ್ರ ಲಭ್ಯವಾಗಲಿದೆ ಎಂದು ನೀರಿಕ್ಷಿಸಲಾಗಿದೆ.












Click it and Unblock the Notifications