ಹೆಂಡತಿ ಮೇಲೆ ಆಸಿಡ್ ಎರಚಿದ ಪತಿರಾಯ
ಬೆಂಗಳೂರು, ಸೆ. 22 : ಪತಿಯೇ ಪತ್ನಿ ಮೇಲೆ ಆಸಿಡ್ ಎರಚಿರುವ ಅಮಾನವೀಯ ಘಟನೆ ವರ್ತೂರಿನ ಗಾಂಧಿ ವೃತ್ತದ ಬಳಿ ಶನಿವಾರ ನಡೆದಿದೆ.
ಉಲ್ಫತ್ ಬಾನು (27) ಆಸಿಡ್ ದಾಳಿಗೊಳಗಾದ ಮಹಿಳೆ. ಈಕೆಯ ಪತಿ ಫೈರೋಜ್ ಖಾನ್ ಆಸಿಡ್ ದಾಳಿ ಮಾಡಿದ್ದು ಆತನನ್ನು ಬಂಧಿಸಲಾಗಿದೆ. ದಾಳಿಯಿಂದ ಉಲ್ಫತ್ ಬಾನು ಅವರಿಗೆ ಗಂಭೀರ ಗಾಯಗಳಾಗಿದೆ.(ಭಗ್ನ ಪ್ರೇಮ: ಯುವತಿಯ ಮುಖಕ್ಕೆ ಆಸಿಡ್)

ಶನಿವಾರ ಸಂಜೆ ಮತ್ತೆ ಗಲಾಟೆ ನಡೆದಿದ್ದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ವೇಳೆ ತಾಳ್ಮೆ ಕಳೆದುಕೊಂಡ ಫೈರೋಜ್ ಖಾನ್ ಟಾಯ್ಲೆಟ್ ಸ್ವಚ್ಛ ಮಾಡಲು ತಂದಿದ್ದ ಆಸಿಡ್‌ನ್ನು ಹೆಂಡತಿಯ ಮೇಲೆ ಎರಚಿದ್ದಾನೆ. ಕಿರುಚಿಕೊಳ್ಳುತ್ತಾ ಬೀದಿಗೆ ಬಂದ ಉಲ್ಫತ್ ಬಾನು ಅವರನ್ನು ಅಕ್ಕಪಕ್ಕದವರು ನಿಮ್ಹಾನ್ಸ್‌ಗೆ ದಾಖಲಿಸಿದ್ದಾರೆ. ಮುಖ, ಭುಜ ಮತ್ತು ಎದೆಯ ಭಾಗದಲ್ಲಿ ಗಂಭೀರ ಗಾಯಗಳಾಗಿರುವ ಉಲ್ಫತ್ ಬಾನು ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ.(c)
ಉಮಾಶ್ರೀ ಭೇಟಿ
ಆಸ್ಪತ್ರೆಗೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ಸಂತ್ರಸ್ತೆಗೆ ತಕ್ಷಣ ಒಂದು ಲಕ್ಷ ರೂ. ಪರಿಹಾರ ಘೋಷಿಸಿದರು. ಘಟನೆಯ ಸಂಪೂರ್ಣ ತನಿಖೆ ನಡೆಸಲಾಗುವುದು. ಇಂಥ ಘಟನೆಗಳು ನಾಗರಿಕ ಸಮಾಜಕವನ್ನು ಅಪಹಾಸ್ಯ ಮಾಡುತ್ತವೆ, ಈ ಬಗ್ಗೆ ರಾಜ್ಯ ಮಹಿಳಾ ಘಟಕದೊಂದಿಗೂ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.












Click it and Unblock the Notifications