ಬೆಂಗಳೂರಲ್ಲಿ ಪತ್ನಿಯ ಕೊಂದು, ಕೊಲ್ಕತ್ತದಲ್ಲಿದ್ದ ಅತ್ತೆಯನ್ನು ಕೊಂದು ತಾನೂ ಆತ್ಮಹತ್ಯೆ
ಬೆಂಗಳೂರು, ಜೂನ್ 23: ನಗರದಲ್ಲಿ ಪತ್ನಿ ಹಾಗೂ ಮಗನೊಂದಿಗೆ ವಾಸವಿದ್ದ ವ್ಯಕ್ತಿ ಅತ್ತೆಯನ್ನು ಕೊಲೆ ಮಾಡಲು ಕೊಲ್ಕತ್ತದವರೆಗೆ ವಿಮಾನದಲ್ಲಿ ಪ್ರಯಾಣಿಸಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ.
42 ವರ್ಷದ ವ್ಯಕ್ತಿ ಆತ್ಮಹತ್ಯೆಗೂ ಮುನ್ನ ಪತ್ನಿಯನ್ನು ಕೊಲೆ ಮಾಡಿ, ಅತ್ತೆಯನ್ನು ಕೊಲ್ಲಲು ಕೊಲ್ಕತ್ತಕ್ಕೆ ಹೋಗಿದ್ದ ಅಲ್ಲಿ ಅತ್ತೆಗೆ ಗುಂಡು ಹಾರಿಸಿ, ಮಾವನನ್ನೂ ಹತ್ಯೆ ಮಾಡಲು ಯತ್ನಿಸಿದ್ದ ಆದರೆ ಮಾವ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು, ಹಾಗೆಯೇ ವ್ಯಕ್ತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದ, ಆತನ ಬಳಿ ದೊರೆತ ಡೆತ್‌ನೋಟ್‌ನಲ್ಲಿ ಆತ ಬೆಂಗಳೂರು ಮನೆಯಲ್ಲಿ ಪತ್ನಿಯನ್ನು ಹತ್ಯೆ ಮಾಡಿ, ಕೊಲ್ಕತ್ತಕ್ಕೆ ಬಂದು ಅತ್ತೆಯನ್ನು ಹತ್ಯೆಮಾಡಿರುವುದಾಗಿ ಬರೆದುಕೊಂಡಿದ್ದ.

ಅಮಿತ್ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಶಿಲ್ಪಿ ಎಂಬುವವರನ್ನು ಕಳೆದ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದ. ಇಬ್ಬರು ವಿಚ್ಛೇದಕ್ಕೆ ಅರ್ಜಿ ಸಲ್ಲಿಸಿದ್ದರು.
ಅಮಿತ್ ಕೊಲ್ಕತ್ತದಲ್ಲಿರುವ ಮಾನವ ಮನೆಗೆ ಹೋಗಿದ್ದ, ಅಲ್ಲಿ ಜಗಳ ತಾರಕಕ್ಕೇರಿತ್ತು, ಬಳಿಕ ಅತ್ತೆಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದ, ಮನೆಯ ಬಾಗಿಲು ಲಾಕ್ ಮಾಡಿ ಮಾವ ಮನೆಯಿಂದ ಓಡಿ ಹೋಗಿದ್ದರು. ಆತನ ಮಾವ ಸುರಕ್ಷಿತವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications