ನಡುರಸ್ತೆಯಲ್ಲೇ 16 ಬಾರಿ ಚಾಕುವಿನಿಂದ ಇರಿದು ಕೊಂದ ಸ್ನೇಹಿತ

ಬೆಂಗಳೂರು, ಫೆಬ್ರವರಿ 2: ನಡುರಸ್ತೆಯಲ್ಲೇ ಸ್ನೇಹಿತನಿಗೆ 16 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತನ್ನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕುಡಿದ ಮತ್ತಿನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಅರುಳ್ ರಾಜ್ ಹತ್ಯೆಯಾದವರು, ಅರುಣ್ ಎಂಬಾತ ಚಾಕುವಿನಿಂದ ಇರಿದಿರುವ ಆರೋಪಿಯಾಗಿದ್ದಾರೆ. ನೀಲಸಂದ್ರ ಬಳಿಯ ರೋಸ್ ಗಾರ್ಡನ್ 6ನೇ ಕ್ರಾಸ್ ನಲ್ಲಿ ಡಿಸೆಂಬರ್ 25 ರಂದು ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅರುಣ್ ನಡೆದುಕೊಂಡು ಬರುತ್ತಿದ್ದ ಅರುಳ್ ರಾಜ್ ಮೇಲೆ ಚಾಕುವಿನಿಂದ ದಾಳಿ ಮಾಡಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಈ ಕುರಿತು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ಅರುಣ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Man kills friend over illicit relationship with his wife

ಅರುಳ್ ರಾಜ್ ಮತ್ತು ಅರುಣ್ ಇಬ್ಬರು ಸ್ನೇಹಿತರಾಗಿದ್ದರು. ಅರುಣ್ ಪತ್ನಿಯೊಂದಿಗೆ ಅರುಳ್ ರಾಜ್ ಅಕ್ರಮ ಸಂಬಂಧದ ಹೊಂದಿದ್ದ ಹಾಗಾಗಿ ಅವರ ಮಧ್ಯೆ ಗಲಾಟೆ ನಡೆದಿದ್ದು, ಕುಡಿದ ಅಮಲಿನಲ್ಲಿ ಕೊಲೆ ಮಾಡಿದ್ದಾನೆ.

ಡಿಸೆಂಬರ್ 25 ರಾತ್ರಿ ಇಬ್ಬರು ಒಟ್ಟಿಗೆ ಬಾರ್ ಗೆ ಹೋಗಿ ಕುಡಿದು ಇದೇ ವಿಚಾರಕ್ಕೆ ಜಗಳ ಕೂಡ ಮಾಡಿದ್ದಾರೆ. ಬಳಿಕ ಇಬ್ಬರು ಬಾರ್ ನಿಂದ ಒಟ್ಟಿಗೆ ಹೊರ ಬಂದಿದ್ದು, ಏಕಾಏಕಿ ನಡುರಸ್ತೆಯಲ್ಲೇ ಅರುಳ್ ರಾಜ್ ನನ್ನನ್ನು 16 ಬಾರಿ ಚಾಕುವಿನಿಂದ ಇರಿದು ಅರುಣ್ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+