ಬೆಂಗಳೂರು : ಲಾಡ್ಜ್‌ನಲ್ಲಿ ಮಹಿಳೆ ಹತ್ಯೆ ಪ್ರಕರಣಕ್ಕೆ ವಿಚಿತ್ರ ತಿರುವು!

ಬೆಂಗಳೂರು, ಫೆಬ್ರವರಿ 21 : ಮೊದಲ ಪತ್ನಿಯನ್ನು ಹತ್ಯೆ ಮಾಡಿ 11 ವರ್ಷದ ಶಿಕ್ಷೆ ಅನುಭವಿಸಿದ್ದ ವ್ಯಕ್ತಿ ಜೈಲಿನಿಂದ ಬಂದ ಎರಡು ದಿನದಲ್ಲಿ 2ನೇ ಪತ್ನಿಯನ್ನು ಹತ್ಯೆ ಮಾಡಿ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೋಲಾರ ಮೂಲದ ಶಂಕರ್ (41) ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿರುವ ವ್ಯಕ್ತಿ. ಗಾಂಧಿನಗರದ ಸೂರ್ಯ ನೆಸ್ಟ್ ಹೋಟೆಲ್‌ನಲ್ಲಿ ಹತ್ಯೆಯಾದ ಹಾಸನ ಮೂಲದ ರೇಣುಕಾ (31) ಶಂಕರ್ 2ನೇ ಪತ್ನಿ. ಶಂಕರ್‌ಗಾಗಿ ಉಪ್ಪಾರಪೇಟೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಗಾಂಧಿನಗರದ ಸೂರ್ಯ ನೆಸ್ಟ್ ಹೋಟೆಲ್‌ನಲ್ಲಿ ಕತ್ತು ಸೀಳಿ ಮಹಿಳೆ ಹತ್ಯೆ ಮಾಡಿದ ಪ್ರಕರಣಕ್ಕೆ ವಿಚಿತ್ರ ತಿರುವು ಸಿಕ್ಕಿದೆ. ಮೊದಲ ಪತ್ನಿಯನ್ನು ಕೊಂದು 11 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಶಂಕರ್, 2ನೇ ಪತ್ನಿಯನ್ನೂ ಕೊಂದು ಪರಾರಿಯಾಗಿದ್ದಾನೆ.

Man jailed for 1st wife murder, escapes to kill 2nd wife

ಪ್ರಕರಣವೇನು? : 2008ರಲ್ಲಿ ಶಂಕರ್ ಮೊದಲ ಪತ್ನಿ ಮಾಲಾರನ್ನು ಕಾಮಾಕ್ಷಿಪಾಳ್ಯದಲ್ಲಿ ಹತ್ಯೆ ಮಾಡಿದ್ದ, ಪೊಲೀಸರು ಬಂಧಿಸಿದ್ದರು. 2011ರಲ್ಲಿ ಆರೋಪ ಸಾಬೀತಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕರ್‌ ಪೆರೋಲ್ ಮೇಲೆ ಬಿಡುಗಡೆಯಾದಾಗ ರೇಣುಕಾ ಜೊತೆ ವಿವಾಹವಾಗಿದ್ದ.

ಸನ್ನಡೆತೆ ಆಧಾರದ ಮೇಲೆ ಫೆ.4ರಂದು ವಿಕ್ಟೋರಿಯಾ ಆಸ್ಪತ್ರೆಗೆ ಶಂಕರ್‌ನನ್ನು ಕಳುಹಿಸಲಾಗಿತ್ತು. ಆಸ್ಪತ್ರೆಗೆ ದಾಖಲಾಗುವ ಕೈದಿಗಳ ಯೋಗಕ್ಷೇಮ ನೋಡಿಕೊಳ್ಳವ ಕೆಲಸ ನೀಡಲಾಗಿತ್ತು. ಫೆ.16ರಂದು ಆಸ್ಪತ್ರೆಯಿಂದ ಶಂಕರ್ ಪರಾರಿಯಾಗಿದ್ದ. ಪೊಲೀಸರು ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ.

Man jailed for 1st wife murder, escapes to kill 2nd wife

2ನೇ ಪತ್ನಿಗೆ ಫೋನ್‌ ಮಾಡಿ ಹಾಸನದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದ ಶಂಕರ್, ಫೆ.18ರ ಸೋಮವಾರ ಗಾಂಧಿನಗರದ ಸೂರ್ಯ ನೆಸ್ಟ್ ಹೋಟೆಲ್‌ನಲ್ಲಿ ರೂಂ ಪಡೆದು ಅಲ್ಲಿಗೆ ರೇಣುಕಾಳನ್ನು ಕರೆತಂದಿದ್ದ. ನಂತರ ಆಕೆಯನ್ನು ಶಾಪಿಂಗ್ ಕರೆದುಕೊಂಡು ಹೋಗಿದ್ದ. ಹಲವಾರು ವಸ್ತುಗಳನ್ನು ಕೊಡಿಸಿ, ನಂತರ ರೂಂಗೆ ವಾಪಸ್ ಆಗಿದ್ದರು.

ಸೋಮವಾರ ಸಂಜೆ ರೂಂ ಅನ್ನು ಹೊರಗಿನಿಂದ ಲಾಕ್ ಮಾಡಿಕೊಂಡು ಶಂಕರ್ ಲಾಡ್ಜ್‌ನಿಂದ ಹೊರ ಹೋಗಿದ್ದ, ಬಳಿಕ ವಾಪಸ್ ಆಗಿರಲಿಲ್ಲ. ಬುಧವಾರ ರೂಂನಿಂದ ವಾಸನೆ ಬರುತ್ತಿರುವುದು ಗಮನಿಸಿದ ಸಿಬ್ಬಂದಿ ಬಾಗಿಲು ಒಡೆದು ನೋಡಿದಾಗ ರೇಣುಕಾ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ರೇಣುಕಾ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಉಪ್ಪಾರಪೇಟೆ ಪೊಲೀಸರು ಶಂಕರ್ ಬಂಧನಕ್ಕೆ ತಂಡ ರಚನೆ ಮಾಡಿದ್ದಾರೆ. 2ನೇ ಪತ್ನಿ ರೇಣುಕಾಳನ್ನು ಹತ್ಯೆ ಮಾಡಿರುವುದು ಏಕೆ? ಎಂಬುದು ಇನ್ನೂ ತಿಳಿದುಬಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+