61 ಬಾರಿ ಸಂಚಾರಿ ನಿಯಮ ಉಲ್ಲಂಘನೆ; ಸವಾರನಿಗೆ ತರಬೇತಿ!
ಬೆಂಗಳೂರು, ನವೆಂಬರ್ 05: ಬೆಂಗಳೂರು ಸಂಚಾರಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಬೈಕ್ ಸವಾರನಿಗೆ ದಂಡ ಹಾಕಿದ್ದಾರೆ, ಬೈಕ್ ವಶಕ್ಕೆ ಪಡೆದು ಆತನನ್ನು ತರಬೇತಿಗಾಗಿ ಸಹ ಕಳುಹಿಸಲಾಗಿದೆ.
ಬುಧವಾರ ಸಂಚಾರ ಪೂರ್ವ ವಿಭಾಗದ ಕೆ. ಆರ್. ಪುರ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಮನಾಯಕ್ ಬೈಕ್ ಸವಾರನನ್ನು ಹಿಡಿದಿದ್ದರು.
ಪರಿಶೀಲನೆ ನಡೆಸಿದಾಗ ಸುಮಾರು 61 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ದ್ವಿ ಚಕ್ರ ವಾಹನದ ಮಾಲೀಕರಿಗೆ 32,000 ರೂ. ದಂಡವನ್ನು ವಿಧಿಸಿದರು.

ದಂಡದ ಜೊತೆಗೆ ಬೈಕ್ ಸವಾರನಿಗೆ ಸಂಚಾರಿ ನಿಯಮ ಪಾಲನೆ ಬಗ್ಗೆ ಅರಿವು ನೀಡಲು ತರಬೇತಿಗಾಗಿ ಕಳುಹಿಸಲಾಗಿದೆ. ತರಬೇತಿ ಪೂರ್ಣಗೊಂಡು ಅಧಿಕಾರಿಗಳು ಪ್ರಮಾಣ ಪತ್ರ ನೀಡಿದ ಬಳಿಕ ಬೈಕ್ ವಾಪಸ್ ಕೊಡಲಾಗುತ್ತದೆ.
ವಾಹನ ಸವಾರರಿಗೆ ತರಬೇತಿ; ಬೆಂಗಳೂರು ನಗರದಲ್ಲಿ ಪದೇ ಪದೇ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ತರಬೇತಿಯನ್ನು ನೀಡಲಾಗುತ್ತದೆ. 10ಕ್ಕಿಂತ ಹೆಚ್ಚು ಬಾರಿ ನಿಯಮ ಉಲ್ಲಂಘನೆ ಮಾಡಿದಲ್ಲಿ ದಂಡ ಕಟ್ಟುವ ಜೊತೆಗೆ ತರಬೇತಿ ಪಡೆಯಬೇಕು.
ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದಂತಹ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಸವಾರ ತರಬೇತಿ ಪಡೆದು ಪರೀಕ್ಷೆ ಎದುರಿಸಬೇಕು. ಶೇ 60ಕ್ಕಿಂತ ಹೆಚ್ಚು ಅಂಕ ಪಡೆದರೆ ಮಾತ್ರ ವಾಹನ ವಾಪಸ್ ಕೊಡಲಾಗುತ್ತದೆ.
ಥಣಿಸಂದ್ರದಲ್ಲಿರುವ ಕೇಂದ್ರದಲ್ಲಿ ಹೋಂಡಾ ಕಂಪನಿಗಳು ಪ್ರತಿನಿಧಿಗಳು ತರಬೇತಿ ನೀಡಲಿದ್ದಾರೆ. ಕಳೆದ ವಾರ 108 ವಾಹನ ಸವಾರರು ತರಬೇತಿಯನ್ನು ಪಡೆದಿದ್ದಾರೆ.
ಇಂದು ಸಂಚಾರ ಪೂರ್ವ ವಿಭಾಗದ ಕೆ.ಆರ್.ಪುರಂ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ. ರಾಮನಾಯಕ್ ರವರು ಸುಮಾರು 61 ಬಾರಿ ಸಂಚಾರ ಉಲ್ಲಂಘನೆ ಮಾಡಿದ್ದ ಕೆಎ-03-ಜೆಜೆಡ್-3801 ದ್ವಿ-ಚಕ್ರ ವಾಹನದ ಮಾಲೀಕರಿಂದ ರೂ.32,000/ ದಂಡವನ್ನು ಕಟ್ಟಿಸಿದರು.ಸದರಿಯವರನ್ನು ಸಂಚಾರ ಅರಿವು ತರಬೇತಿಯನ್ನು ಪಡೆಯಲು ಕಳುಹಿಸಲಾಯಿತು. pic.twitter.com/BzewTdx4cl
— DCP Traffic East (@DCPTrEastBCP) November 4, 2020












Click it and Unblock the Notifications