ಕೆಲಸ ಸಿಗುತ್ತೆ ಎಂದು ತಾಳಿಯನ್ನೇ ಬಿಚ್ಚಿಕೊಟ್ಟು ಮೋಸ ಹೋದ ಮಹಿಳೆ

ಬೆಂಗಳೂರು, ಜನವರಿ 29: ಯಾವ್ಯಾವ ರೀತಿ ಜನರಿಗೆ ಮೋಸ ಮಾಡಬಹುದು ಎಂದು ಕೆಲವರು ಹೊಂಚು ಹಾಕುತ್ತಾ ಕುಳಿತಿರುತ್ತಾರೆ. ಸಾಲ ಕೊಡಿಸುವುದಾಗಿ ಹೇಳಿ ತಾಳಿ ಬಿಚ್ಚಿಸಿಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರಲ್ಲೇ ನಡೆದಿದೆ.

ಕನಕಪುರ ರಸ್ತೆಯಲ್ಲಿರುವ ಮೆಟ್ರೀ ಕ್ಯಾಷ್ ಅಂಡ್ ಕ್ಯಾರಿ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಗೃಹಿಣಿಯೊಬ್ಬರ ಕೊರಳಿನಲ್ಲಿದ್ದ ತಾಳಿ ಸರ ಕೇಳಿ ಪಡೆದು ವಂಚಿಸಿರುವ ಬಗ್ಗೆ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಿಮ್ಮ ತಾಳಿಯನ್ನು ಬಿಚ್ಚಿಕೊಡಿ, ಬಡತನದಿಂದಾಗಿ ತಾಳಿ ಗಿರವಿ ಇಡಲು ಹೊರಟಿಸಿದ್ದಾರೆ ಎಂದು ಹೇಳಿ ಕನಿಕರದ ಆಧಾರದಲ್ಲಿ ನಿಮಗೆ ಕೆಲಸ ಕೊಡಿಸುತ್ತೇನೆ ಎಂದು ಅನುರಾಧ ಎಂಬುವವರನ್ನು ವ್ಯಕ್ತಿಯೊಬ್ಬರು ನಂಬಿಸಿ ಮೋಸ ಮಾಡಿದ್ದಾಎ, ತಾಳಿ ಪಡೆದ ತಕ್ಷಣ ಪರಾರಿಯಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.

Man cheated woman in the name of job

ಕೋಣನಕುಂಟೆ ಸಮೀಪದ ಗಣಪತಿಪುರ ಜಿಎಸ್‌ಎಸ್‌ ಶಾಲೆ ಹಿಂಭಾಗದಲ್ಲಿ ಅನುರಾಧ ಮತ್ತು ಗಂಗಾಧರ್ ದಂಪತಿ ಪುಟ್ಟದೊಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ.

ಮನೆಯಲ್ಲಿ ವಿಪರೀತಿ ಕಷ್ಟ ಇದ್ದ ಕಾರಣ ಅನುರಾಧ ಕೆಲಸ ಹುಡುಕುತ್ತಿದ್ದರು. ಅನುರಾಧ ಅವರಿಗೆ ವಂಚಕನ ಫೋನ್ ನಂಬರ್ ಕೊಟ್ಟಿದ್ದ ಯಶೋಧ ಅವರನ್ನೂ ಪೊಲೀಸರು ಕರೆ ತಂದು ವಿಚಾರಣೆ ನಡೆಸಿದ್ದಾರೆ. ಆ ವ್ಯಕ್ತಿ ಬಗ್ಗೆ ನನಗೆ ಹೆಚ್ಚಿನ ಪರಿಚಯವಿಲ್ಲ, ಬೀದಿಯಲ್ಲಿ ಪರಿಚಯವಾಗಿದ್ದ ಎಂದು ಹೇಳಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+