• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೊಲೀಸರ ಅತಿಥಿಯಾದ ಮ್ಯಾಟ್ರೊಮನಿ ವಂಚಕ ಅಳಿಯ !

|

ಬೆಂಗಳೂರು, ನವೆಂಬರ್ 28: ಅಂತರ್ಜಾಲ ವೆಬ್ ತಾಣದಲ್ಲಿ ವಿವಾಹ ಸಂಬಂಧ ಹುಡುಕುವಾಗ ಹೆಣ್ಣು ಮಕ್ಕಳು ಹುಷಾರಾಗಿರಬೇಕು. . ಅಂಗೈನಲ್ಲಿ ಆಕಾಶ ತೋರಿಸಿ ಕೈಯಲ್ಲಿರುವ ದುಡ್ಡು ಖಾಲಿ ಮಾಡಿಸಿ ಟೋಪಿ ಹಾಕುವ ವಂಚಕರು ಜಾಲವೇ ದೊಡ್ಡದಿದೆ. ಅಂತರ್ಜಾಲ ತಾಣದ ಮೂಲಕ ಯುವತಿಯ ಪರಿಚಯ ಮಾಡಿಕೊಂಡ ವಂಚಕ ಉಡುಗೊರೆ ಕಳಿಸುವ ನೆಪದಲ್ಲಿ ಲಕ್ಷ ಲಕ್ಷ ಹಣ ಪಡೆದು ಮೋಸ ಮಾಡಿದ್ದಾನೆ. ಬೆಂಗಳೂರಿನ ಯುವತಿ ಜತೆ ಆನ್‌ಲೈನ್‌ ನಲ್ಲೇ ಮದುವೆ ಮಾತುಕತೆ ಮುಗಿಸಿ ಪ್ರೀತಿಯ ಉಡುಗೊರೆ ಕೊಡುವ ಸೋಗಿನಲ್ಲಿ ಬ್ಯಾಂಕ್‌ ಖಾತೆಯಲ್ಲಿದ್ದ 24 .50 ಲಕ್ಷ ಎಗರಿಸಿದ್ದಾನೆ. ಮ್ಯಾಟ್ರಮೊನಿ ಅಳಿಯ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಈ ಕಿಲಾಡಿ ವಂಚಕನ ಹೆಸರು ಬ್ರೈಟ್‌, ದೆಹಲಿಯ ಮೋಹನ್ ಗಾರ್ಡನ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿದ್ದ ಈತನನ್ನು ಡ ವೈಟ್‌ಫೀಲ್ಢ್ ಸಿಇಎನ್ ಪೊಲೀಸ್‌ ಠಾಣೆ ಸಿಬ್ಬಂದಿ ಬಂಧಿಸಿದ್ದಾರೆ. ಸ್ವೈನ್ ರಾಜ್ ಕಿಶೋರ್ ಹೆಸರಿನಲ್ಲಿ ಮೋಸ ಮಾಡಿದ್ದ ಈತನಿಂದ ನಾಲ್ಕು ಲ್ಯಾಪ್‌ಟಾಪ್ ಹತ್ತು ಮೊಬೈಲ್ ಹಾಗೂ ವಿವಿಧ ಬ್ಯಾಂಕ್‌ ಗಳಲ್ಲಿದ್ದ ಎಂಟೂವರೆ ಲಕ್ಷ ರೂಪಾಯಿ ನಗದು ಹಣ ವಶಪಡಿಸಕೊಂಡಿದ್ದಾರೆ. ಈತ ವಿದೇಶಿ ಬ್ಯಾಂಕುಗಳು ಸೇರಿದಂತೆ 38 ಬ್ಯಾಂಕ್‌ ಗಳಲ್ಲಿ ಲಕ್ಷಾಂತರ ರೂಪಾಯಿ ಹಣಕಾಸಿನ ವಹಿವಾಟು ನಡೆಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈತನ ಸಹಚರರ ದೊಡ್ಡ ಜಾಲವಿದ್ದು, ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.

ನಡೆದಿದ್ದೇನು ? ವಿದುಶಿ ಎಂಬ ಮಹಿಳೆ ಶಾದಿ ಡಾಟ್ ಕಾಮ್ ವೆಬ್ ತಾಣದಲ್ಲಿ ನೊಂದಾಯಿಸಿದ್ದಳು. ಈಕೆಯ ಪ್ರೊಪ್ರೈಲ್ ನೋಡಿ ನಿನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದಾನೆ. ಪರಸ್ಪರ ವಾಟ್ಸಪ್ ಕಾಲ್, ಸ್ಕ್ಪೈಪ್ ಕಾಲ್ ಮಾಡಿ ಮಾತನಾಡಿಕೊಂಡಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಮಾಡಿಕೊಂಡಿದ್ದು, ಕೆಲಸದ ನಿಮಿತ್ತ ಮಲೇಷಿಯಾಗೆ ಹೋಗುತ್ತಿರುವುದಾಗಿ ವಿದುಶಿ ಅವರಿಗೆ ತಿಳಿಸಿದ್ದಾನೆ. ಮಾತ್ರವಲ್ಲ ದುಬಾರಿ ಬೆಲೆಯ ಉಡುಗೊರೆ ಕಳಿಸಿರುವುದಾಗಿ ಹೇಳಿದ್ದಾನೆ. ಇದರಿಂದ ವಿದುಶಿ ಅವರು ಪುಳಕಿತರಾಗಿದ್ದಾರೆ. ಈ ಉಡುಗೊರೆ ನಿನಗೆ ಸೇರಬೇಕಾದರೆ ಅಮೆರಿಕಾದ 27 ಸಾವಿರ ಡಾಲರ್ ಪಾವತಿಸಬೇಕು. ನನ್ನದು ಸ್ಕಾಟ್‌ಲ್ಯಾಂಡ್‌ ಬ್ಯಾಂಕ್‌ ಖಾತೆಯಿಂದ ಪಾವತಿಸುತ್ತೇನೆ ಎಂದು ಹೇಳಿದ್ದಾನೆ. ಇದಾದ ಕೆಲವೇ ಕ್ಷಣಗಳ ಬಳಿಕ ನನ್ನ ಬ್ಯಾಂಕ್‌ ಖಾತೆ ರದ್ದಾಗಿದೆ ಎಂದು ನಂಬಿಸಿದ್ದಾನೆ. ಇದನ್ನೇ ನಂಬಿ ವಿದುಶಿ ಅವರು ಅಕ್ಟೋಬರ್ ತಿಂಗಳಲ್ಲಿ ಹಂತ ಹಂತವಾಗಿ ಬರೋಬ್ಬರಿ 24.50ಲಕ್ಷ ರೂ. ನಗದು ಪಾವತಿಸಿದ್ದಾರೆ. ಹಣ ಪಾವತಿಸಿ ಕೆಲವು ದಿನಗಳ ಬಳಿಕ ಸಂಪರ್ಕ ಕಡಿತಗೊಳಿಸಿದ್ದಾನೆ.

ಮದುವೆ ಹೆಸರಲ್ಲಿ ಮೋಸ ಹೋಗಿರುವ ಸಂಗತಿ ಗೊತ್ತಾದ ಕೂಡಲೇ ವಿದುಶಿ ಅವರು ವೈಟ್ ಫೀಲ್ಡ್ ಪೊಲೀಸರಿಗೆ ದೂರು ನೀಡಿದ್ದಾರೆ. ಡಿಸಿಪಿ ಡಿ. ದೇವರಾಜು ಮಾರ್ಗದರ್ಶನದಲ್ಲಿ ದೆಹಲಿಯಲ್ಲಿದ್ದ ಆರೋಪಿಯನ್ನು ಬಂಧಿಸಿ ಅಲ್ಲಿಯೇ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಮೂರು ದಿನ ವಶಕ್ಕೆ ಪಡೆದು ಬೆಂಗಳೂರಿಗೆ ಕರೆ ತರಲಾಗಿದೆ. ಇತನನ್ನು ವಿಚಾರಣೆಗೆ ಒಳಪಡಿಸಿದಾಗ ಇವರದ್ದು ದೊಡ್ಡ ಗ್ಯಾಂಗ್ ಇರುವುದು ಬೆಳಕಿಗೆ ಬಂದಿದೆ. ಅಂತರ್ಜಾಲ ವಿವಾಹ ಬಂಧ ಜಾಲ ತಾಣಗಳಲ್ಲಿ ನೊಂದಾಯಿಸುವ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡ್ತಾರೆ. ಸೇವಾ ಶುಲ್ಕ ಪಾವತಿಸಿ ವಿವರ ಪಡೆದು ಹೆಣ್ಣು ಮಕ್ಕಳನ್ನು ಸಂಪರ್ಕಿಸುತ್ತಾರೆ.ವಿದೇಶದಲ್ಲಿ ಒಳ್ಳೆಯ ಕೆಲಸದಲ್ಲಿರುವುದಾಗಿ ನಂಬಿಸುತ್ತಾರೆ. ನಂಬಿಕೆ ಹುಟ್ಟಿದ ಮೇಲೆ ಉಡುಗೊರೆ ಕೊಡುವ ನೆಪದಲ್ಲಿ ಟೋಪಿ ಹಾಕಿ ಬ್ಯಾಂಕ್ ನಲ್ಲಿರುವ ಹಣ ಎಗರಿಸಿ ಮೋಸ ಮಾಡುತ್ತಾರೆ. ಅಂತರ್ಜಾಲ ಜಾಲ ತಾಣಗಳ ಮೇಲೆ ಎಷ್ಟು ನಂಬಿಕೆ ಇಡಬೇಕೋ ಅಷ್ಟೇ ಇಡಬೇಕು. ಇಲ್ಲದಿದ್ದರೆ ವಿದುಶಿ ಅವರಂತೆ ಹಣ ಕಳೆದುಕೊಳ್ಳಬೇಕಾಗುತ್ತದೆ.

ಬ್ರೈಟ್‌ ಒಬ್ಬನಲ್ಲ, ಇವರದ್ದು ದೊಡ್ಡ ಜಾಲವಿದೆ. ಮದುವೆಯಾಗುದಾಗಿ ನಂಬಿಸಿ ಸಾಕಷ್ಟು ಮಂದಿಗೆ ಮೋಸ ಮಾಡಿದ್ದಾರೆ. ಉಡುಗೊರೆ ಕೊಡುವ ನೆಪದಲ್ಲಿ ಯುವತಿಯರ ಬಳಿ ಹಣ ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ. ಎಲ್ಲಾಮಾಹಿತಿ ಸಂಗ್ರಹಿಸುತ್ತಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದೇವೆ. ಬಂಧಿತ ಆರೋಪಿ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದು ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಉಪ ಪೊಲೀಸ್ ಆಯುಕ್ತ ಡಿ. ದೇವರಾಜ್ ತಿಳಿಸಿದ್ದಾರೆ. ವೆಬ್ ಜಾಲ ತಾಣದ ಸಂಬಂಧಗಳನ್ನು ಒಪ್ಪಿಕೊಳ್ಳುವ ಮೊದಲ ಅವುಗಳ ಪೂರ್ವಪರ ಪರಿಶೀಲಿಸಬೇಕು. ಆಕಸ್ಮಿಕ ಇಂತಹ ವಂಚಕರ ಜಾಲಕ್ಕೆ ಬಿದ್ದರೆ ಜೀವನನ್ನೇ ಬೀದಿಗೆ ತರುವುದು ಗ್ಯಾರೆಂಟಿ..

English summary
Females should beware when looking for a marriage affair on the Internet. . Show the sky in the palm of the hand, fraudulent has cheated millions of rupees in the name of sending a gift for women. Rs 24, 50 Lakhs in a bank account have been lifted from young woman bank account in Bangalore.he
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X