ಕರ್ತವ್ಯ ನಿರತ ಪೊಲೀಸ್ ಮೇಲೆ ರಾಡ್ ನಿಂದ ಹಲ್ಲೆ
ಬೆಂಗಳೂರು, ನವೆಂಬರ್ 18 : ತನ್ನ ಪಾಡಿಗೆ ತನ್ನ ಕೆಲಸ ಮಾಡಿದ ಪೊಲೀಸ್ ಮೇಲೆ ನಾಗರೀಕನೊಬ್ಬ ರಾಡ್ ನಿಂದ ಹಲ್ಲೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರಿನ ಸರ್ಜಾಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಚ್ ಎಸ್ ಅರ್ ಟ್ರಾಫಿಕ್ ಪೇದೆ ಭೀಮಶಂಕರ್ ಅವರು ಕಾರು ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡುತ್ತಾ ಒನ್ ವೇ ಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ವ್ಯಕ್ತಿಯನ್ನು ಅಡ್ಡಗಟ್ಟಿ ಪ್ರಶ್ನೆ ಮಾಡಿದ್ದಾರೆ.

ಇಷ್ಟಕ್ಕೇ ಕೆರಳಿದ ಆತ ಭೀಮಶಂಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿನಲ್ಲಿದ್ದ ರಾಡು ತೆಗೆದುಕೊಂಡು ಹಲ್ಲೆ ಮಾಡಿದ್ದಾನೆ.
ಹಲ್ಲೆ ಮಾಡಿದ ವ್ಯಕ್ತಿ ಗುಜರಾತ್ ಮೂಲದ ದಿಲೀಪ್ ಎಂದು ತಿಳಿದುಬಂದಿದೆ.
ಈ ಬಗ್ಗೆ ಬೆಳ್ಳಂಡೂರು ಪೊಲಿಸ್ ಠಾಣೆ ಪ್ರಕರಣ ದಾಖಲಾಗಿದ್ದು, ಅರೋಪಿ ದಿಲೀಪ ನನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ.












Click it and Unblock the Notifications