ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಸ್ತಾರ ಸಿಬ್ಬಂದಿಯಿಂದ 12 ವರ್ಷದ ಮಗನಿಗೆ ಕೆಟ್ಟ ಅನುಭವ ಎಂದು ದೂರಿದ ತಂದೆ
12 ವರ್ಷದ ಬಾಲಕನ ಪ್ರಯಾಣಕ್ಕೆ ಸಹಾಯ ಮಾಡಲು ಏರ್‌ಲೈನ್ ಸಿಬ್ಬಂದಿ ಹೆಚ್ಚುವರಿ ಶುಲ್ಕವನ್ನು ಕೇಳಿದ್ದಾರೆ ಎಮದು ಆರೋಪಿಸಲಾಗಿದೆ.
ಬೆಂಗಳೂರು, ಫೆಬ್ರವರಿ. 21: ಫೆಬ್ರವರಿ 16 ರಂದು ಬೆಳಗ್ಗೆ, 12 ವರ್ಷದ ಶಾಲಾ ಬಾಲಕ ತನ್ನ ಹೆತ್ತವರ ಜೊತೆಗೆ ರಜಾದಿನಗಳನ್ನು ಕಳೆಯಲು ಚಂಡೀಗಢಕ್ಕೆ ವಿಮಾನ ಹತ್ತಲು ಬೆಂಗಳೂರು ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಆದರೆ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಬಾಲಕನ ಜೊತೆಗೆ ವಿಸ್ತಾರಾ ಏರ್‌ಲೈನ್ಸ್‌ನಲ್ಲಿ ಚೆಕ್-ಇನ್ ವಿಭಾಗದಲ್ಲಿ ಕಹಿ ಅನುಭವಾಗಿದೆ.
ಬಾಲಕ ವಿಸ್ತಾರಾ ಏರ್‌ಲೈನ್ಸ್‌ನಲ್ಲಿ ಪ್ರಯಾಣಿಸುತ್ತಿರುವುದು ಇದೇ ಮೊದಲಲ್ಲವಾದರೂ, ಏರ್‌ಲೈನ್‌ನ ಸಿಬ್ಬಂದಿ ಮಗನ ಜೊತೆಗೆ ಒರಟಾಗಿ ವರ್ತಿಸಿದ್ದಾರೆ ಎಂದು ಬಾಲಕನ ತಂದೆ ಆರೋಪಿಸಿದ್ದಾರೆ.
12 ವರ್ಷದ ಬಾಲಕನ ಪ್ರಯಾಣಕ್ಕೆ ಸಹಾಯ ಮಾಡಲು ಏರ್‌ಲೈನ್ ಸಿಬ್ಬಂದಿ ಹೆಚ್ಚುವರಿ ಶುಲ್ಕವನ್ನು ಕೇಳಿದ್ದಾರೆ. ಆತನೊಂದಿಗೆ ಒರಟಾಗಿ ವರ್ತಿಸಿದ್ದಾರೆ. ತಂದೆಯಿಂದ ಕೆಲವು ದಾಖಲೆಗಳಿಗಾಗಿ ಕಾಯುತ್ತಿರುವಾಗ ಅವನನ್ನು ತಡೆದಿದ್ದಾರೆ ಎಂದು ತಂದೆ ಆರೋಪಿಸಿದ್ದಾರೆ.

ಚೆಕ್-ಇನ್ ಕೌಂಟರ್‌ನಲ್ಲಿರುವ ಏರ್‌ಲೈನ್ ಸಿಬ್ಬಂದಿ ಬಾಲಕನಿಗೆ ಸಹಾಯ ಮಾಡಲು 2,500 ರೂಪಾಯಿಗಳನ್ನು ನೀಡುವಂತೆ ಕೇಳಿದ್ದಾರೆ. ಒಂಟಿಯಾಗಿ ಪ್ರಯಾಣಿಸುವ ಅಪ್ರಾಪ್ತ ಆಗಿರುವ ಕಾರಣ ಸಹಾಯ ಮಾಡಲು ಹಣ ಕೇಳಿದ್ದಾರೆ. ಆದರೆ, ವಿಸ್ತಾರಾ ಅವರ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, 5 ರಿಂದ 12 ವರ್ಷದೊಳಗಿನ ಮಗು ಒಂಟಿಯಾಗಿ ಪ್ರಯಾಣಿಸುತ್ತಿರುವ ಮಗುವಾಗಿದ್ದರೇ, ಪ್ರಯಾಣದ ಸಮಯದಲ್ಲಿ ವಿಮಾನಯಾನ ಸಂಸ್ಥೆಯು ಸಹಾಯವನ್ನು ನೀಡುತ್ತದೆ.
ವಿಸ್ತಾರಾ ಏರ್‌ಲೈನ್ಸ್ ಭಾರತದೊಳಗೆ ಪ್ರಯಾಣಿಸುವ ಪ್ರತಿಯೊಬ್ಬ ಅಪ್ರಾಪ್ತ ವಯಸ್ಕರಿಗೆ 2,500 ರೂಪಾಯಿ ಮತ್ತು ಭಾರತದ ಹೊರಗೆ ಪ್ರಯಾಣಿಸುವವರಿಗೆ 60 ಡಾಲರ್ ಶುಲ್ಕ ವಿಧಿಸುತ್ತದೆ. ಪೋಷಕರು ಎಲ್ಲಾ ಅಪ್ರಾಪ್ತ ವಯಸ್ಕರು ಸರಿಯಾದ ಫೋಟೋ ಗುರುತನ್ನು ಹೊತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು, ಇದು ಪ್ರಯಾಣಕ್ಕೆ ಕಡ್ಡಾಯವಾಗಿದೆ ಎಂದು ವಿಸ್ತಾರಾ ವೆಬ್‌ಸೈಟ್ ಹೇಳುತ್ತದೆ.
ಬಾಲಕನ ತಂದೆ ಸಂಭವ್ ಜೈನ್, ಟಿಕೆಟ್ ಖರೀದಿಸಿರುವುದು ಸಾಮಾನ್ಯ. ನನ್ನ ಮಗನಿಗೆ ಶೀಘ್ರದಲ್ಲೇ 13 ವರ್ಷ ತುಂಬುತ್ತಿದೆ. ಹುಡುಗನೊಬ್ಬನೇ ಪ್ರಯಾಣಿಸುತ್ತಿದ್ದಾನೆ ಎಂಬುದಾಗಿ ಪೋಷಕರಿಂದ ಸಹಿ ಮಾಡಿದ ಡಿಕ್ಲರೇಶನ್ ಫಾರ್ಮ್ ಅನ್ನು ಸಹ ಪಡೆಯಲು ಆತನಿಗೆ ಕೇಳಲಾಗಿದೆ. ಹಿಂದಿನ ಸಂದರ್ಭಗಳಲ್ಲಿ ವಿಮಾನಯಾನ ಸಂಸ್ಥೆಯು ಅಂತಹ ಷರತ್ತುಗಳನ್ನು ವಿಧಿಸಿರಲಿಲ್ಲವಾದ್ದರಿಂದ ಈ ಅನುಭವವು ಕೆಟ್ಟದಾಗಿತ್ತು ಎಂದು ಹೇಳಿದ್ದಾರೆ.

2022 ರ ಡಿಸೆಂಬರ್‌ನಲ್ಲಿ ಕೇವಲ ಎರಡು ತಿಂಗಳ ಹಿಂದೆ ವಿಸ್ತಾರಾ ಏರ್‌ಲೈನ್ಸ್‌ನಲ್ಲಿ ಬಾಲಕ ಏಕಾಂಗಿಯಾಗಿ ಪ್ರಯಾಣಿಸಿದ್ದಾನೆ. ಆ ವೇಳೆ ಯಾವುದೇ ಹೆಚ್ಚುವರಿ ಹಣವನ್ನು ಪಾವತಿಸಲು ಮತ್ತು ಪೋಷಕರಿಂದ ಸಹಿ ಮಾಡಿದ ಡಿಕ್ಲರೇಶನ್ ಫಾರ್ಮ್ ಕೊಡಿ ಎಂದು ಕೇಳಿರಲಿಲ್ಲ. ನನ್ನ ಮಗನ ಪ್ರಯಾಣದ ಬಗ್ಗೆ ತಿಳಿಸುವ ಪ್ರಯಾಣದ ದಿನಾಂಕಕ್ಕಿಂತ 15 ದಿನಗಳ ಮೊದಲು ನಾನು ವಿಸ್ತಾರಾಗೆ ಇಮೇಲ್ ಕಳುಹಿಸಿದ್ದೇನೆ. ಆದರೆ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಂಭವ್ ಜೈನ್ ಆರೋಪಿಸಿದ್ದಾರೆ.
ವಿಸ್ತಾರಾ ಸಿಬ್ಬಂದಿ ಡಿಕ್ಲರೇಶನ್ ಫಾರ್ಮ್ ಮತ್ತು 2,500 ರೂ ಶುಲ್ಕವನ್ನು ನೀಡುವಂತೆ ಕೇಳಿದಾಗ, ತನ್ನ ಮಗ ಗಾಬರಿಗೊಂಡು ತನ್ನ ಮೊಬೈಲ್ ಫೋನ್‌ನಿಂದ ತನಗೆ ಕರೆ ಮಾಡಿದ್ದರು. ಹೆಚ್ಚುವರಿ ಶುಲ್ಕ ಮತ್ತು ಅವಸರದ ಕಾಗದಪತ್ರಗಳಿಗಿಂತ ಹೆಚ್ಚಾಗಿ, ಇಡೀ ಪ್ರಕ್ರಿಯೆಯನ್ನು ವಿಮಾನಯಾನ ಅಧಿಕಾರಿಗಳು ನಿರ್ವಹಿಸಿದ ರೀತಿಯಿಂದ ಕುಟುಂಬವು ಅಸಮಾಧಾನಗೊಂಡಿದೆ ಎಂದು ಸಂಭವ್ ಜೈನ್ ಹೇಳಿದ್ದಾರೆ.
"ಮೊದಲನೆಯದಾಗಿ, ಇದೇ ಏರ್‌ಲೈನ್‌ನಲ್ಲಿ ಈ ರೀತಿಯ ಏನೂ ಸಂಭವಿಸಿಲ್ಲ. ಎರಡನೆಯದಾಗಿ, ಅವರು ಒರಟಾಗಿ ಮಾತನಾಡಿದ್ದಾರೆ. ನನ್ನ ಮಗನನ್ನು ಒಂದು ಗಂಟೆಗೂ ಹೆಚ್ಚು ಕಾಲ ಚೆಕ್-ಇನ್ ಕೌಂಟರ್‌ನಲ್ಲಿ ನಿಲ್ಲಿಸಿದ್ದಾರೆ. ನಾನು ಚಂಡೀಗಢದಲ್ಲಿ ಕುಳಿತು, ಡಿಕ್ಲರೇಶನ್ ಫಾರ್ಮ್‌ನ ಪ್ರಿಂಟ್ ಔಟ್ ತೆಗೆದುಕೊಳ್ಳುವ ಎಲ್ಲಾ ದಾಖಲೆಗಳನ್ನು ಪೂರ್ಣಗೊಳಿಸಿ, ಅದನ್ನು ಭರ್ತಿ ಮಾಡಿ ಮತ್ತು ಸ್ಕ್ಯಾನ್ ಮಾಡಿ ಅವರಿಗೆ ನಕಲು ಕಳುಹಿಸಿದೆ. ನಾನು ಪೇಪರ್‌ವರ್ಕ್ ಅನ್ನು ಮುಗಿಸುವವರೆಗೆ ನನ್ನ ಮಗನಿಗೆ ಉಪಹಾರ ಸೇವಿಸಲು ಬಿಡುವಂತೆ ನಾನು ಫೋನ್‌ನಲ್ಲಿ ವಿಸ್ತಾರಾ ಸಿಬ್ಬಂದಿಗೆ ವಿನಂತಿಸಿದೆ. ಆದರೆ ಅವರು ಒರಟಾಗಿ ಪ್ರತಿಕ್ರಿಯಿಸಿದರು. ಇನ್ನು ಮುಂದೆ ವಿಸ್ತಾರಾ ವಿಮಾನ ಏರುವುದಿಲ್ಲ" ಎಂದು ಸಂಭವ್ ಹೇಳಿದ್ದಾರೆ.
ಸಂಭವ್ ಜೈನ್ ದೂರಿನ ನಂತರ, ವಿಮಾನಯಾನ ಸಂಸ್ಥೆಯು 2,500 ರೂ.ಗಳ ಸಹಾಯ ಶುಲ್ಕವನ್ನು ಹಿಂದಿರುಗಿಸಿದೆ.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ












Click it and Unblock the Notifications