ಬೆಂಗಳೂರು: ಸೊಸೆಗೆ ಲೈಂಗಿಕ ಕಿರುಕುಳ: ಕಾಮುಕ ಮಾವ ಬಂಧನ

ಬೆಂಗಳೂರು, ಜು.6: ಸಮಾಜವು ಯಾವ ದಿಕ್ಕಿನೆಡೆಗೆ ಹೋಗುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ, ಪ್ರತಿನಿತ್ಯ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣವನ್ನೇ ನೋಡುತ್ತಿರುತ್ತೇವೆ. ಎಲ್ಲಿಲ್ಲದ ಆತಂಕವನ್ನು ಸೃಷ್ಟಿ ಮಾಡಿದೆ.

ಅಪರಿಚಿತರಿಂದ ಅತ್ಯಾಚಾರ, ಅಣ್ಣನಿಂದ ತಂಗಿಯ ಮೇಲೆ, ತಂದೆಯಿಂದ ಮಗಳ ಮೇಲೆ, ಮಾವನಿಂದ ಸೊಸೆಯ ಮೇಲೆ ಅತ್ಯಾಚಾರ ನಡೆಯುತ್ತಿದೆ, ಇದೆಲ್ಲವನ್ನು ಗಮನಿಸಿದರೆ ಹೆಣ್ಣಿಗೆ ರಕ್ಷಣೆ ಎಲ್ಲಿದೆ ಎಂದರೆ ಯಾರಲ್ಲಿಯೂ ಉತ್ತರವಿಲ್ಲ. ಇದೀಗ ಅಂಥದ್ದೇ ಘಟನೆಯೊಂದು ಬೆಂಗಳೂರಲ್ಲಿ ನಡೆದಿದೆ.

ಬೆಂಗಳೂರಿನ ಜೆಸಿನಗರದ ನಿವಾಸಿಯಾಗಿರುವ ಅಬ್ದುಲ್‌ ರೆಹಮಾನ್‌ ಇಲಿಯಾಜ್‌ ಎಂಬಾತ ಸೊಸೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ, ಆಕೆಯ ಬಳಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ದೂರು ನೀಡಿರುವ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

Man accused of sexually harassing his daughter-in-law

ಒಂದು ವರ್ಷದ ಹಿಂದೆ ಅಬ್ದುಲ್‌ ಎನ್ನುವವರು ಆಕೆಯನ್ನು ಮದುವೆಯಾಗಿದ್ದ, ಒಳ್ಳೆಯ ಕೆಲಸದಲ್ಲಿದ್ದೇನೆ ಎಂದು ಹೇಳಿ ಮದುವೆ ಮಾಡಿಕೊಂಡಿದ್ದ, ಅಬ್ದುಲ್‌ ಅನಕ್ಷರಸ್ಥನಾಗಿದ್ದು ಹೆಂಡತಿಗೆ, ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ, ಮಾವ ಕೂಡ ಆಕೆಯ ಮುಂದೆ ಬಟ್ಟೆಯನ್ನು ಬಿಚ್ಚಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.

ಈ ಕುರಿತು ಮಹಿಳೆ ಜೆಸಿನಗರ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ತಂದೆ, ಮಗನನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+