ವಿದೇಶಿ ದಂಪತಿಗೆ ಬೆಂಗಳೂರಿನ ಮಗು ದತ್ತು ಪಡೆಯಲು ಅನುಮತಿ
ಬೆಂಗಳೂರಿನ ಮಗುವೊಂದನ್ನು ದತ್ತು ಪಡೆಯಲು ಅನುಮತಿ ಪಡೆದ ಮಾಲ್ಟಾ ದೇಶದ ದಂಪತಿ. ಹೈಕೋರ್ಟ್ ನಿಂದ ಈ ಅನುಮತಿ ಪಡೆದುಕೊಂಡ ವಿದೇಶಿ ದಂಪತಿ.
ಬೆಂಗಳೂರು, ಸೆಪ್ಟೆಂಬರ್ 1: ನಗರದ ಕೆ.ಆರ್. ಪುರಂನಲ್ಲಿರುವ ಅನಾಥಾಲಯವೊಂದರಲ್ಲಿರುವ ಧ್ರುವ ಎಂಬ 15 ತಿಂಗಳ ಗಂಡು ಮಗುವನ್ನು ದತ್ತು ಪಡೆಯಲು ಮುಂದೆ ಬಂದಿದ್ದ ಮಾಲ್ಟಾ ದೇಶದ ದಂಪತಿಗೆ ಹೈಕೋರ್ಟ್ ಅನುಮತಿ ನೀಡಿದೆ.
ದತ್ತು ಪಡೆಯಲು ಈ ಹಿಂದೆ ಅರ್ಜಿ ಸಲ್ಲಿಸಿದ್ದ ಮಾಲ್ಟಾ ದಂಪತಿಯ (ಅವರ ಹೆಸರುಗಳನ್ನು ಗೌಪ್ಯವಾಗಿಡಲಾಗಿದೆ) ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಳ್ಳಿಹಾಕಿತ್ತು. ದತ್ತು ಪಡೆಯಲು ಮುಂದೆ ಬಂದಿರುವ ದಂಪತಿ ವಿದೇಶಿಗರು, ಇಬ್ಬರಿಗೂ 44 ವರ್ಷ ವಯಸ್ಸಾಗಿದ್ದು, ಅಲ್ಲದೆ, ಇವರಿಗೆ ಇಬ್ಬರು ಬೆಳೆದ ಮಕ್ಕಳೂ ಇರುವುದರಿಂದ ಇವರದ್ದು ಪರಿಪೂರ್ಣ ಕುಟುಂಬವಾಗಿದೆ. ಹಾಗಾಗಿ, ಇವರಿಗೆ ದತ್ತು ಪಡೆಯುವ ಅಗತ್ಯತೆ ಇಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಈ ತೀರ್ಪಿನ ಹಿನ್ನೆಲೆಯಲ್ಲಿ ಮಾಲ್ಟಾ ದಂಪತಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಕೆಲ ದಿನಗಳ ವಿಚಾರಣೆ ನಂತರ, ಮಂಗಳವಾರ ಈ ಬಗ್ಗೆ ತೀರ್ಪು ಪ್ರಕಟಿಸಿರುವ ಹೈಕೋರ್ಟ್, ಮಾಲ್ಟಾ ದಂಪತಿಗಳಿಗೆ ಧ್ರುವನನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಿದೆ. ದಂಪತಿಯು, ಮಗುವಿಗೆ ಉತ್ತಮ ಜೀವನ ಹಾಗೂ ಭವಿಷ್ಯ ನೀಡುವ ಕುರಿತಂತೆ ದಂಪತಿಗಳು ಅಫಿಡವಿಟ್ ಸಲ್ಲಿಸಿದ್ದಾರೆ.












Click it and Unblock the Notifications