Maha Shivratri 2026: ಮಹಾಶಿವರಾತ್ರಿ ಪ್ರಯುಕ್ತ ಬೆಂಗಳೂರು-ವಿಜಯಪುರ ವಿಶೇಷ ರೈಲು, ದಿನಾಂಕ, ಸಮಯಗಳ, ನಿಲುಗಡೆಗಳ ವಿವರ
Maha Shivaratri 2026 Special Train: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹಾಗೂ ದಟ್ಟಣೆ ನಿಯಂತ್ರಣ ಮಾಡುವ ಉದ್ಧೇಶದಿಂದ ವಿಶೇಷ ಸಂದರ್ಭಗಳಲ್ಲಿ ಹೆಚ್ಚುವರಿ ರೈಲು ಸೇವೆಯನ್ನು ನೀಡುತ್ತಲೇ ಬಂದಿದೆ. ಇದೀಗ ಶಿವರಾತ್ರಿ ಕೂಡ ಸಮೀಪಿಸುತ್ತಿದ್ದು, ಈ ವೇಳೆ ಬೆಂಗಳೂರಿನಿಂದ ಊರಿನ ಕಡೆಗೆ ಹೋಗುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಇದನ್ನು ಅರಿತುಕೊಂಡೇ ವಿಜಯಪುರ ಮಾರ್ಗಕ್ಕೆ ವಿಶೇಷ ರೈಲು ಸೇವೆಯನ್ನು ಕಲ್ಪಿಸಿದೆ. ಹಾಗಾದ್ರೆ, ಸಮಯ, ದಿನಾಂಕಗಳು, ನಿಲುಗಡೆ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹಬ್ಬ-ಹರಿದಿನಗಳ ಸಂದರ್ಭಗಳಲ್ಲಿ ಬೆಂಗಳೂರಿನಿಂದ ತಮ್ಮ ಊರುಗಳ ಕಡೆಗೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿರುತ್ತದೆ. ಅದರಲ್ಲೂ ಕಡಿಮೆ ವೆಚ್ಚ ಹಾಗೂ ಆರಾಮದಾಯಕ ಪ್ರಯಾಣ ಹಿನ್ನೆಲೆ ಬಹುತೇಕ ಮಂದಿ ರೈಲುಗಳಲ್ಲೇ ಪ್ರಯಾಣ ಮಾಡಲು ಇಚ್ಚಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರ ಮಾಡಲು ಭಾರತೀಯ ರೈಲ್ವೆ ವಿಶೇಷ ರೈಲು ಸೇವೆಯನ್ನು ಕಲ್ಪಿಸುತ್ತಲೇ ಬಂದಿದೆ.

ಶಿವರಾತ್ರಿ ಪ್ರಯುಕ್ತ ವಿಶೇಷ ರೈಲು: ಹಾಗೆಯೇ ಇದೀಗ ಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರಯಾಣಿಕೆ ದಟ್ಟಣೆ ನಿಯಂತ್ರಿಸಲು ನೈಋತ್ಯ ರೈಲ್ವೆ ಎಸ್.ಎಂ.ವಿ.ಟಿ. ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲು ಓಡಿಸಲು ನಿರ್ಧಾರ ಮಾಡಿದೆ. ಹಾಗಾದ್ರೆ, ರೈಲು ಸಂಖ್ಯೆ, ಸಮಯ, ದಿನಾಂಕಗಳ ವಿವರವನ್ನು ಕೆಳಗೆ ನೀಡಲಾಗಿದೆ ಕಣ್ಣಾಡಿಸಿ.
ರೈಲು ಸಂಖ್ಯೆ, ಸಮಯಗಳ ವಿವರ: 06503 ಸಂಖ್ಯೆಯ ಎಸ್.ಎಂ.ವಿ.ಟಿ. ಬೆಂಗಳೂರು - ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಫೆಬ್ರವರಿ 13ರ ರಾತ್ರಿ 07:15ಕ್ಕೆ ಎಸ್.ಎಂ.ವಿ.ಟಿ. ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 07:15 ಗಂಟೆಗೆ ವಿಜಯಪುರವನ್ನು ತಲುಪಲಿದೆ. ಇನ್ನು 06504 ಸಂಖ್ಯೆಯ ವಿಜಯಪುರ - ಎಸ್.ಎಂ.ವಿ.ಟಿ. ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಫೆಬ್ರವರಿ 16ರ ಸಂಜೆ 05:30ಕ್ಕೆ ವಿಜಯಪುರದಿಂದ ಹೊರಟು ಮಾರನೇ ದಿನ ಬೆಳಗ್ಗೆ 06:30ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ ಇರಲಿದೆ?: ಈ ವಿಶೇಷ ರೈಲುಗಳು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್.ಎಂ.ಎಂ.ಹಾವೇರಿ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ. ಇದು 22 ಬೋಗಿಗಳನ್ನು ಒಳಗೊಂಡಿರಲಿದ್ದು, ಅವುಗಳಲ್ಲಿ 02 ಎಸಿ 2-ಟೈರ್, 03 ಎಸಿ 3-ಟೈರ್, 11 ಸ್ಲೀಪರ್ ಕ್ಲಾಸ್, 04 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಎಸ್ಎಲ್ಆರ್‌ಡಿ ಬೋಗಿಗಳನ್ನು ಹೊಂದಿರಲಿದೆ.
ಭಾರತೀಯ ರೈಲ್ವೆ ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ರೈಲು ಸೇವೆಗಳನ್ನು ಸಮಯಾವಕಾಶಕ್ಕೆ ಅನುಗುಣವಾಗಿ ಆರಂಭಿಸುತ್ತದೆ. ವಿಶೇಷವಾಗಿ ಹಬ್ಬದ ಸಮಯ, ಟೂರ್ ಸೀಸನ್, ಪರೀಕ್ಷಾ ಅವಧಿ, ಕುಂಭಮೇಳ, ಚುನಾವಣಾ ಸಮಯ ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕೆ ದಟ್ಟಣೆ ನಿಯಂತ್ರಿಸಲು ಹೆಚ್ಚುವರಿ ರೈಲುಗಳ ಸೇವೆ ತುಂಬಾ ಉಪಯುಕ್ತವಾಗುತ್ತದೆ.
ಹೆಚ್ಚುವರಿ ರೈಲುಗಳಲ್ಲಿ ಮುಖ್ಯವಾಗಿ ವಿಶೇಷ ಎಕ್ಸ್‌ಪ್ರೆಸ್, ಸೂಪರ್‌ಫಾಸ್ಟ್ ಸ್ಪೆಷಲ್, ಮೆಮೊ/ಪ್ಯಾಸೆಂಜರ್ ವಿಶೇಷ ರೈಲುಗಳು ಸೇರಿವೆ. ಇವುಗಳನ್ನು ಹೆಚ್ಚು ಪ್ರಯಾಣಿಕರಿರುವ ಮಾರ್ಗಗಳಲ್ಲಿ, ಉದಾಹರಣೆಗೆ ದೆಹಲಿ-ಪಾಟ್ನಾ, ಬೆಂಗಳೂರು-ಚೆನ್ನೈ, ಮುಂಬೈ-ಲಖನೌ, ಹೈದರಾಬಾದ್-ವಿಶಾಖಪಟ್ಟಣಂ ಮುಂತಾದ ಮಾರ್ಗಗಳಲ್ಲಿ ಓಡಿಸಲಾಗುತ್ತದೆ. ಇದರಿಂದ ಪ್ತಯಾಣಿಕರಿಗೆ ತುಂಬಾ ಅನುಕೂಲ ಆದಂತಾಗಲಿದೆ.
ಹೆಚ್ಚುವರಿ ರೈಲುಗಳ ವೇಳಾಪಟ್ಟಿ, ನಿಲ್ದಾಣಗಳು ಹಾಗೂ ಟಿಕೆಟ್ ದರಗಳು ಸಾಮಾನ್ಯವಾಗಿ ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್, IRCTC ಪೋರ್ಟಲ್ ಹಾಗೂ ಪತ್ರಿಕಾ ಪ್ರಕಟಣೆಗಳ ಮೂಲಕ ಪ್ರಕಟಿಸಲಾಗುತ್ತದೆ. ಒಟ್ಟಿನಲ್ಲಿ ಹೆಚ್ಚುವರಿ ರೈಲು ಸೇವೆಗಳು ಪ್ರಯಾಣಿಕರ ದಟ್ಟಣೆ ನಿಂತ್ರಣ ಮಾಡಿ, ಸುರಕ್ಷಿತ ಹಾಗೂ ಸಮಯಕ್ಕೆ ಸರಿಯಾಗಿ ಪ್ರಯಾಣಕ್ಕೆ ನೆರವಾಗುತ್ತವೆ. ಸಾರ್ವಜನಿಕರ ಅನುಕೂಲವನ್ನು ಅರಿತುಕೊಂಡು ಭಾರತೀಯ ರೈಲ್ವೆಯು ಈ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಲೇ ಬಂದಿದೆ.












Click it and Unblock the Notifications